ಈ ಸೊಪ್ಪು-ಎಣ್ಣೆಯ ಹೇರ್ ಮಾಸ್ಕ್ ಹಚ್ಚಿದರೆ ನೈಸರ್ಗಿಕವಾಗಿ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗುತ್ತೆ!

White Hair Home Remedies: ಕೂದಲು ಬೆಳ್ಳಗಾಗುವ ಸಮಸ್ಯೆ ಈಗ ತುಂಬಾ ಸಾಮಾನ್ಯವಾಗಿದೆ. ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆಯನ್ನು ಅನೇಕ ಜನರು ಎದುರಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಹಲವು ಕಾರಣಗಳಿರಬಹುದು. ಆನುವಂಶಿಕತೆಯಿಂದಾಗಿ, ಒತ್ತಡ ತೆಗೆದುಕೊಳ್ಳುವುದರಿಂದ, ಹಾರ್ಮೋನುಗಳ ಅಸಮತೋಲನ ಮತ್ತು ಪೋಷಣೆಯ ಕೊರತೆಯಿಂದಾಗಿ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ನಿಮ್ಮ ಕೂದಲು ಕೂಡ ವಯಸ್ಸಿಗೆ ಮುಂಚೆಯೇ ಬೆಳ್ಳಗಾಗಲು ಪ್ರಾರಂಭಿಸಿದ್ದರೆ, ಈ ಮನೆಮದ್ದುಗಳಿಂದ ಕೂದಲನ್ನು ಮತ್ತೆ ಕಪ್ಪಾಗಿಸಬಹುದು.

2 /5

ಭೃಂಗರಾಜ್ ಹೇರ್ ಮಾಸ್ಕ್: ಆಯುರ್ವೇದ ಮೂಲಿಕೆ ಭೃಂಗರಾಜ್‌ ನಿಂದ ಕೂದಲು ಬಿಳಿಯಾಗುವ ಸಮಸ್ಯೆಯನ್ನು ನಿವಾರಿಸಬಹುದು. ಮೊಸರಿನೊಂದಿಗೆ ಭೃಂಗರಾಜ ಪುಡಿಯನ್ನು ಬೆರೆಸಿ ಹೇರ್ ಮಾಸ್ಕ್ ತಯಾರಿಸಿ. ಅದನ್ನು ಕೂದಲಿನ ಬುಡಕ್ಕೆ ಮಸಾಜ್ ಮಾಡಿ ಮತ್ತು ಅರ್ಧ ಗಂಟೆಯ ನಂತರ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ಇದು ಕೂದಲಿಗೆ ಪೋಷಣೆ ನೀಡುವುದರ ಜೊತೆಗೆ ಕಪ್ಪಾಗಲು ಸಹಾಯ ಮಾಡುತ್ತದೆ.

3 /5

ಕರಿಬೇವಿನ ಎಲೆಗಳು ಮತ್ತು ತೆಂಗಿನ ಎಣ್ಣೆ: ಕರಿಬೇವಿನ ಎಲೆಗಳು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣಗಳು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಕೊಬ್ಬರಿ ಎಣ್ಣೆಗೆ ಕರಿಬೇವಿನ ಸೊಪ್ಪನ್ನು ಸೇರಿಸಿ ಕುದಿಸಿ ತಣ್ಣಗಾದ ನಂತರ ತಲೆಗೆ ಹಚ್ಚಿಕೊಳ್ಳಿ. ಇದನ್ನು ಹಚ್ಚಿದ ನಂತರ ಸ್ವಲ್ಪ ಸಮಯ ಮಸಾಜ್ ಮಾಡಿ ನಂತರ ಕೂದಲನ್ನು ತೊಳೆಯಿರಿ.

4 /5

ನೆಲ್ಲಿಕಾಯಿ ಎಣ್ಣೆ: ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ನೆಲ್ಲಿಕಾಯಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯಬಹುದು. ಪ್ರತಿದಿನ ಆಮ್ಲಾ ಎಣ್ಣೆಯನ್ನು ಬಳಸಿದರೆ, ನಿಮ್ಮ ಕೂದಲು ಪೂರ್ಣ ಪೋಷಣೆಯನ್ನು ಪಡೆಯುತ್ತದೆ. ಜೊತೆಗೆ ಕೂದಲು ಸ್ಟ್ರಾಂಗ್ ಆಗುತ್ತದೆ.

5 /5

(ಸೂಚನೆ: ನಮ್ಮ ಲೇಖನವು ಕೇವಲ ಮಾಹಿತಿಯನ್ನು ಒದಗಿಸಲು ಮಾತ್ರ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಜೀ ನ್ಯೂಸ್ ಕನ್ನಡ ಇದನ್ನು ಖಚಿತಪಡಿಸುವುದಿಲ್ಲ)