Seetha raama serial Ashok: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸೀತಾರಾಮ ಸಿರೀಯಲ್ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡು ಮುನ್ನುಗುತ್ತಿದೆ.. ವಿಶಿಷ್ಟ ತಿರುವುಗಳಿಂದ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿರುವ ಈ ಧಾರವಾಹಿಯಲ್ಲಿ ರಾಮನ ಸ್ನೇಹಿತ ಅಶೋಕ ತಮ್ಮ ನಟನೆಯ ಮೂಲಕವೇ ಜನರ ಮನಗೆದ್ದಿದ್ದಾರೆ..
1/5ಈ ಸೀತಾ ರಾಮ ಸಿರೀಯಲ್‌ನ ಎಲ್ಲ ಪಾತ್ರಗಳನ್ನು ಜನರು ಮೆಚ್ಚಿಕೊಂಡಿದ್ದಾರೆ.. ಇದರಲ್ಲಿ ರಾಮನ ಗೆಳೆಯ ಅಶೋಕನ ಪಾತ್ರವೂ ಒಂದು.. ಇದೀಗ ಈ ನಟನ ನಿಜವಾದ ಹೆಸರೇನು? ಅವರ ಪತ್ನಿ ಯಾರು? ಹಿನ್ನಲೆ ಏನು? ಎನ್ನುವುದರ ಸಣ್ಣ ಮಾಹಿತಿ ಇಲ್ಲಿದೆ.
2/5ಕನ್ನಡ ಕಿರುತೆರೆ ಲೋಕದಲ್ಲಿ ಆಗುತ್ತಿರುವ ಬದಲಾವಣೆಯಿಂದ ಹತ್ತಾರು ಹೊಸ ಸಿರೀಯಲ್‌ಗಳು ಪ್ರಸಾರವಾಗುತ್ತಿವೆ.. ಅದರಲ್ಲಿ ಸೀತಾ ರಾಮ ಧಾರವಾಹಿಯೂ ಒಂದು.. ಇದರಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಹಾಗೂ ಪುಟ್ಟ ಗೌರಿ ಖ್ಯಾತಿಯ ಗಗನ್ ಚಿನ್ನಪ್ಪ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
3/5ಈ ಧಾರವಾಹಿಯಲ್ಲಿ ನಟ ಅಶೋಕ್ ಶರ್ಮಾ ಅವರದ್ದು ಒಂದು ಪ್ರಮುಖ ಪಾತ್ರ.. ಇವರು ಬರೀ ಸಿರೀಯಲ್ ಮಾತ್ರವಲ್ಲದೇ ಯಶ್ ಅವರ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.. ನಟನೆಯ ಹೊರತಾಗಿ ನಾಯಕ ಅಶೋಕ್ ಗಾಯಕನೂ ಹೌದು.. ಈಗಾಗಲೇ ಹಲವಾರು ಸಿನಿಮಾಗದ ಹಾಡುಗಳಿಗೆ ಇವರು ಧ್ವನಿಯಾಗಿದ್ದಾರೆ..
4/5ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ನಿಧಾನಕ್ಕೆ ಬೆಳೆದುಬಂದ ನಟ ಅಶೋಕ್ ಶರ್ಮಾ.. ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ನೋಡಿದ ಇವರು ಸಿರೀಯಲ್, ಸಿನಿಮಾ, ಗಯನ ಹೀಗೆ ಹಲವಾರು ಕಲಾಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ..
5/5ಇನ್ನು ಈ ನಟನ ಪತ್ನಿಯ ಬಗ್ಗೆ ಮಾತನಾಡಿದರೆ ಪೂಜಾ ಎನ್ನುವವರು ಎಂದು ಒಂದಷ್ಟು ಸುದ್ದಿ ಹರಿದಾಡುತ್ತಿದೆ.. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಯಾರಿಗೂ ಗೊತ್ತಿಲ್ಲ..