IPL 2021: ಈ ಬಾರಿಯ ಐಪಿಎಲ್‌ನಲ್ಲಿ ಈ ಮುದ್ದಾದ ಆ್ಯಂಕರ್ ಏಕೆ ಕಾಣೆಯಾಗಿದ್ದಾರೆ?

ಕಳೆದ ಐಪಿಎಲ್ ಋತುವಿನಲ್ಲಿ ಆ್ಯಂಕರಿಂಗ್ ಮೂಲಕ ಗಮನ ಸೆಳೆದಿದ್ದ ತಮ್ಮ ನೆಚ್ಚಿನ ಆ್ಯಂಕರ್ ಕಿರಾ ನಾರಾಯಣನ್ ಅವರನ್ನು ಕಣ್ತುಂಬಿಕೊಳ್ಳಬೇಕೆಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಅದು ಸಾಧ್ಯವಾಗಿಲ್ಲ.

14ನೇ ಆವೃತ್ತಿಯ ಐಪಿಎಲ್ ಟೂರ್ನಿ ಅಭಿಮಾನಿಗಳಲ್ಲಿ ರೋಮಾಂಚನವನ್ನು ಹೆಚ್ಚುಸುತ್ತಿದೆ. ಈಗಾಗಲೇ ಎಲ್ಲಾ ತಂಡಗಳ ಲೀಗ್ ಪಂದ್ಯಗಳು ಮುಕ್ತಾಯವಾಗಿದ್ದು, ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಿಗೆ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅನೇಕ ಅದ್ಭುತ ಪಂದ್ಯಗಳಿಗೆ ಪ್ರಸಕ್ತ ಋತು ಸಾಕ್ಷಿಯಾಗಿದೆ. ದೆಹಲಿ, ಚೆನ್ನೈ, ಆರ್‌ಸಿಬಿ ಮತ್ತು ಕೋಲ್ಕತ್ತಾ ಈ ನಾಲ್ಕು ತಂಡಗಳು ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಲು ಯಶಸ್ವಿಯಾಗಿದ್ದು, ಯಾರಿಗೆ ಈ ಬಾರಿ ಟ್ರೋಫಿ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಈ ಮಧ್ಯೆ ಕ್ರಿಕೆಟ್ ಪ್ರೇಮಿಗಳು ಪ್ರಸಕ್ತ ಋತುವಿನಲ್ಲಿ ನಿರಾಸೆ ಒಂದು ವಿಷಯದ ಬಗ್ಗೆ ಅನುಭವಿಸಿದ್ದಾರೆ. ಅದೇನೆಂದರೆ ಕಳೆದ ಐಪಿಎಲ್ ಋತುವಿನಲ್ಲಿ ಆ್ಯಂಕರಿಂಗ್ ಮೂಲಕ ಗಮನ ಸೆಳೆದಿದ್ದ ತಮ್ಮ ನೆಚ್ಚಿನ ಆ್ಯಂಕರ್ ಕಿರಾ ನಾರಾಯಣನ್(TV anchor Kira Narayanan) ಅವರನ್ನು ಕಣ್ತುಂಬಿಕೊಳ್ಳಬೇಕೆಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಅದು ಸಾಧ್ಯವಾಗಿಲ್ಲ. ಕಿರಾ ಪ್ರಸಕ್ತ ಐಪಿಎಲ್ ಟೂರ್ನಿಯಿಂದ ಏಕೆ ಕಾಣೆಯಾಗಿದ್ದಾರೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

2020ರ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಿರಾ ನಾರಾಯಣನ್ ‘ಕ್ರಿಕೆಟ್ ಲೈವ್’ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಗಮನ ಸೆಳೆದಿದ್ದರು. ಕಳೆದ ಋತುವಿನಲ್ಲಿ ಅವರು ಬ್ರೆಟ್ ಲೀ, ಬ್ರಿಯಾನ್ ಲಾರಾ ಅವರಂತಹ ಅನುಭವಿಗಳ ಜೊತೆ ಆ್ಯಂಕರಿಂಗ್ ಮಾಡಿದ್ದರು.  

2 /5

ಈ ವರ್ಷ ಭಾರತ ಮತ್ತು ಇಂಗ್ಲೆಂಡ್ (IND vs ENG) ಸರಣಿಯ ಸಮಯದಲ್ಲಿ ಕಿರಾ ನಾರಾಯಣನ್ ಅವರು ಸುನಿಲ್ ಗವಾಸ್ಕರ್ ಅವರೊಂದಿಗೆ ನೇರ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಲಿಟಲ್ ಮಾಸ್ಟರ್ ಜೊತೆ ಅವರ ಜುಗಲ್ಬಂದಿಯು ಅತ್ಯುತ್ತಮವಾಗಿತ್ತು.

3 /5

ಕಿರಾ ನಾರಾಯಣನ್ ಆ್ಯಂಕರಿಂಗ್ ಹೊರತಾಗಿ ಅವರು ನಟಿ ಕೂಡ. ಮಲೇಷಿಯಾದ ರಾಜಧಾನಿ ಕೌಲಾಲಂಪುರದಲ್ಲಿ ಶಿಕ್ಷಣ ಪಡೆದ ಅವರು ತಮ್ಮ 13ನೇ ವಯಸ್ಸಿನಲ್ಲಿ ನಟಿಸಲು ಆರಂಭಿಸಿದರು.

4 /5

ಕಿರಾ ನಾರಾಯಣನ್ ಲಂಡನ್ ಯೂನಿವರ್ಸಿಟಿ ಕಾಲೇಜಿನಿಂದ ಬಿಎಸ್ಸಿ ಸೈಕಾಲಜಿಯನ್ನು ಅಧ್ಯಯನ ಮಾಡಿದ್ದಾರೆ. ಇದರ ಜೊತೆಗೆ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಿಂದ ಡಿಪ್ಲೊಮಾ ಇನ್ ಆಕ್ಟಿಂಗ್ ಮಾಡಿದ್ದಾರೆ. ಅವರು ಗ್ರೇಟ್ ಬ್ರಿಟನ್‌ನ ರಾಷ್ಟ್ರೀಯ ಯುವ ಥಿಯೇಟರ್‌ನ ಸದಸ್ಯರಾಗಿದ್ದಾರೆ.

5 /5

14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಬಿಸಿಸಿಐ ಕಿರಾ ನಾರಾಯಣನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಅದಕ್ಕಾಗಿಯೇ ಪ್ರಸಕ್ತ ಋತುವಿನಲ್ಲಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಭಿಮಾನಿಗಳು ಅವರ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಈ ಸುಂದರ ಆ್ಯಂಕರ್ ಮುಂದಿನ ವರ್ಷ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.