ಭಾರತದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದ ವಿನೋದ್ ಕಾಂಬ್ಳಿ ಅಲ್ಪಾವಧಿಯಲ್ಲಿಯೇ ಅವರ ಕ್ರಿಕೆಟ್ ಕರಿಯರ್ ಕೂಡ ಹಾಳಾಗಿ ಹೋಯ್ತು. ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯರಾಗಿದ್ದ ಕಾಂಬ್ಳಿ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ ಸಣ್ಣ ವಯಸ್ಸಿನಲ್ಲಿಯೇ ಸತತ ದ್ವಿಶತಕ ಗಳಿಸಿದ ಹೆಗ್ಗಳಿಕೆ ಅವರದ್ದಾಗಿದೆ.ಆದಾಗ್ಯೂ ಅವರ ಕ್ರಿಕೆಟ್ ಜೀವನ ಏಕಾಏಕಿ ಮೊಟಕುಗೊಂಡಿದ್ದು ಏಕೆ ಎನ್ನುವುದನ್ನು ಈಗ ತಿಳಿಯೋಣ ಬನ್ನಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಏಪ್ರಿಲ್ 3 ರಂದು ರಮಾಕಾಂತ್ ಅಚ್ರೇಕರ್ ಅವರ ಪ್ರತಿಮೆಯ ಉದ್ಘಾಟನಾ ಸಮಾರಂಭದಲ್ಲಿ ಸಚಿನ್-ಕಾಂಬ್ಳಿ ಒಟ್ಟಿಗೆ ಕಾಣಿಸಿಕೊಂಡಿದ್ದು.ಇದೆ ವೇಳೆ ಕಾಂಬ್ಳಿ ಕೆಲವು ಸೆಕೆಂಡುಗಳ ನಂತರ ಸಚಿನ್ ಅವರನ್ನು ಗುರುತಿಸಿದರು.ತದನಂತರ ಸ್ನೇಹಿತ ಸಚಿನ್ ಕೈಹಿಡಿದು ಮಾತನಾಡಿಸಲು ಮುಂದಾಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2013 ರ ವಿದಾಯ ಭಾಷಣದಲ್ಲಿ ಸಚಿನ್ ತೆಂಡೂಲ್ಕರ್ ಬಾಲ್ಯದ ಗೆಳೆಯ ಕಾಂಬ್ಳಿ ಹೆಸರನ್ನು ಉಲ್ಲೇಖಿಸದೇ ಇರುವುದು ಕಾಂಬ್ಳಿಗೆ ಬೇಸರ ತರಿಸಿತ್ತು.
ಒಮ್ಮೊಮ್ಮೆ ಇವರಿಬ್ಬರ ಗೆಳೆತನದಲ್ಲಿ ಬಿರುಕು ಮೂಡಿರುವ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆದಿದ್ದವು. ಇದಕ್ಕೆ ಪೂರಕ ಎನ್ನುವಂತೆ 2009 ರಲ್ಲಿ ಟಿವಿ ಕಾರ್ಯಕ್ರಮವೊಂದರಲ್ಲಿ, ಕಾಂಬ್ಳಿ ಮಾತನಾಡುತ್ತಾ 'ಸಚಿನ್ ಮನಸ್ಸು ಮಾಡಿದ್ದರೆ ನನ್ನ ಕ್ರಿಕೆಟ್ ಜೀವನವನ್ನು ಉಳಿಸಬಹುದಿತ್ತು. ನಾವಿಬ್ಬರು ಬಾಲ್ಯದ ಸ್ನೇಹಿತರಾಗಿದ್ದೆವು,ಆದರೆ ಅವರು ನನಗೆ ಬೆಂಬಲ ನೀಡಲಿಲ್ಲ' ಎಂದು ಹೇಳಿದರು.
ಶಾಲಾವಧಿಯಲ್ಲಿ ವಿನೋದ್ ಕಾಂಬ್ಳಿ-ಸಚಿನ್ ನಡುವಿನ 664 ರನ್‌ಗಳ ದಾಖಲೆಯ ಜೊತೆಯಾಟದಿಂದಾಗಿ ಈ ಇಬ್ಬರು ಆಟಗಾರು ಹೆಸರಿಗೆ ಬಂದರು. ಈ ವೇಳೆ ಕಾಂಬ್ಳಿಗೆ 16 ವರ್ಷವಾದರೆ ಸಚಿನ್ ಗೆ 14 ವರ್ಷ. ಇವರಿಬ್ಬರೂ ಚಿಕ್ಕ ವಯಸ್ಸಿನಲ್ಲೇ ಟೀಂ ಇಂಡಿಯಾವನ್ನು ಪ್ರವೇಶಿಸಿದ್ದರು. ಆದರೆ ಕಾಲಚಕ್ರದಲ್ಲಿ ಇಬ್ಬರೂ ಮಾರ್ಗಗಳು ಭಿನ್ನವಾಗಿದ್ದವು.
ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಆಟದಿಂದ ಮಾಸ್ಟರ್ ಬ್ಲಾಸ್ಟರ್ ಆಗಿ ಪರಿವರ್ತನೆಯಾದರೆ, ಇನ್ನೊಂದೆಡೆಗೆ ಪ್ರತಿಭಾನ್ವಿತ ಆಟಗಾರನಾಗಿದ್ದ ವಿನೋದ್ ಕಾಂಬ್ಳಿಗೆ ಹೆಚ್ಚಿನ ಅವಕಾಶ ಸಿಗದೇ ಅಲ್ಪಾವಧಿಯಲ್ಲಿಯೇ ತಮ್ಮ ಕ್ರಿಕೆಟ್ ಜೀವನಕ್ಕೆ ಕೊನೆ ಹೇಳಿದರು.
ಕ್ರಿಕೆಟ್ ಜಗತ್ತಿನಲ್ಲಿ ವಿನೋದ್ ಕಾಂಬ್ಳಿ ಮತ್ತು ಸಚಿನ್ ತೆಂಡೂಲ್ಕರ್ ಅವರ ಗೆಳೆತನ ಒಂದು ರೀತಿ ಕೃಷ್ಣ-ಸುದಾಮನ ರೀತಿ. ಇಂತಹ ಸ್ನೇಹದಲ್ಲಿ ಸಾಕಷ್ಟು ಏಳು ಬಿಳುಗಳನ್ನು ನೋಡಬಹುದಾಗಿದೆ. ಅನೇಕ ಸ್ನೇಹದ ಕಥೆಗಳಿವೆ, ಕೆಲವೊಮ್ಮೆ ರೋಹಿತ್-ವಿರಾಟ್ ನಡುವಿನ ಸಮ್ಮಿಲನದ ಬಗ್ಗೆ ಮತ್ತು ಕೆಲವೊಮ್ಮೆ ಇಶಾನ್ ಮತ್ತು ಗಿಲ್ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ ಇಂದಿಗೂ, ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಭೇಟಿಯಾದಾಗ, ಇಡೀ ಸಾಮಾಜಿಕ ಮಾಧ್ಯಮವು ಅಬ್ಬರಿಸುತ್ತದೆ. ಸುಮಾರು 37 ವರ್ಷಗಳ ಈ ಸ್ನೇಹಿತರು ಭೇಟಿಯಾದಾಗ, ಅವರು ಕೃಷ್ಣ ಮತ್ತು ಸುದಾಮನಿಗಿಂತ ಕಡಿಮೆಯಿಲ್ಲ. ಮಂಗಳವಾರ ಅನಾರೋಗ್ಯದಿಂದ ಬಳಲುತ್ತಿರುವ ಕಾಂಬ್ಳಿ ಮತ್ತು ಸಚಿನ್ ಒಟ್ಟಿಗೆ ಕಾಣಿಸಿಕೊಂಡಾಗ ಇದೇ ರೀತಿ ಕಂಡುಬಂದಿದೆ. ಆದರೆ ಒಂದು ಕಾಲದಲ್ಲಿ ಈ ಸ್ನೇಹದಲ್ಲಿ ಬಿರುಕು ಮೂಡುವ ಬಗ್ಗೆ ಚರ್ಚೆಗಳು ನಡೆದಿದ್ದವು. ಇವರಿಬ್ಬರ ಸ್ನೇಹ ಸಿನಿಮಾಕ್ಕಿಂತ ಕಡಿಮೆಯೇನಿಲ್ಲ.