2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡವು ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.
ಮೆಲ್ಬರ್ನ್: ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗಾಗಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ನಿನ್ನೆ ರಾತ್ರಿ ತನ್ನ ಗೆಲುವಿನ ಪಯಣ ಆರಂಭಿಸಿದೆ. ವಿಶ್ವಕಪ್ಗೆಂದು ಇಂಗ್ಲೆಂಡ್ಗೆ ತೆರಳುವ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಂಡದ ನಾಯಕ ವಿರಾಟ್ ಕೊಹ್ಲಿ, ನಾನು ಈವರೆಗೂ ಆಡಿದ ಮೂರು ವಿಶ್ವಕಪ್ನಲ್ಲಿ ಈ ಬಾರಿಯ ವಿಶ್ವಕಪ್ ಬಹಳ ಸವಾಲಿನದ್ದಾಗಿದೆ ಎಂದು ಹೇಳಿದರು.
ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗಾಗಿ ಭಾರತ ತಂಡವು ರಾತ್ರಿ ಒಂದು ಗಂಟೆ ಸುಮಾರಿಗೆ ಸಾಂತಾಕ್ರೂಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗೆ ಪ್ರಯಾಣ ಬೆಳೆಸಿತು. ಇಂದು ಬೆಳಿಗ್ಗೆ ಲಂಡನ್ ತಲುಪಲಿರುವ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.
ವಿರಾಟ್ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಕೋಚ್ ರವಿಶಾಸ್ತ್ರಿ ಮಾತನಾಡಿ, ಈ ತೂರ್ನಿಯಲಿಲ್ ಮಹೇಂದ್ರ ಸಿಂಗ್ ಧೋನಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಅವರ ಅನುಭವದ ಆಟ ತಂಡದ ಯಶಸ್ಸಿಗೆ ಕಾರಣವಾಗಬಹುದು ಎಂದರು.
ಈ ವಿಶ್ವಕಪ್ ಕಠಿಣ ಪಂದ್ಯವಾಗಿದೆ. ವಾತಾವರಣ ಬದಲಾಗುವುದರಿಂದ ತಂಡವು ಮೊದಲೇ ಅದರ ಬಗ್ಗೆ ತಿಳಿದಿರಬೇಕಾದ ಅಗತ್ಯತೆ ಬಗ್ಗೆ ಒತ್ತಿ ಹೇಳಿದ ಕೋಚ್ ರವಿಶಾಸ್ತ್ರಿ, ಇಂಗ್ಲೆಂಡ್ ನಲ್ಲಿ ಬೇಸಿಗೆಯಲ್ಲಿ ಉತ್ತಮ ವಾತಾವರಣ ಇರುತ್ತದೆ. ಈ ಸಮಯದಲ್ಲಿ ಅಲ್ಲಿನ ಪಿಚ್ ಗಳು ಉತ್ತಮವಾಗಿರುವ ನಿರೀಕ್ಷೆಯಿದೆ. ತಂಡವು ಕಳೆದ ಐದು ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ ಮತ್ತು ತಂಡವು ಸಂಪೂರ್ಣ ಸಾಮರ್ಥ್ಯದೊಂದಿಗೆ ಆಡಿದರೆ ಈ ಬಾರಿ ವಿಶ್ವಕಪ್ ಭಾರತದ ಕೈ ಸೇರಲಿದೆ ಎಂದು ಹೇಳಿದರು.
ಐಸಿಸಿ ಏಕದಿನ ಶ್ರೇಯಾಂಕದಲ್ಲಿ ತಂಡ ಭಾರತವು ಪ್ರಸ್ತುತ ಎರಡನೆಯ ಸ್ಥಾನದಲ್ಲಿದೆ, ಮತ್ತು ಆತಿಥೇಯ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದಾರೆ. ವಿಶ್ವಕಪ್ ಟೂರ್ನಿಗೆ ಹೊರಡುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಏಕದಿನ ವಿಶ್ವಕಪ್ ಅತ್ಯಂತ ಸವಾಲಿನಿಂದ ಕೂಡಿರಲಿದೆ. "ಇದು ಇಲ್ಲಿಯವರೆಗಿನ ಅತ್ಯಂತ ಸವಾಲಿನ ವಿಶ್ವಕಪ್ ಆಗಿದೆ. ಪ್ರತಿ ತಂಡವು ಇಲ್ಲಿ ಉತ್ತಮವಾಗಿದೆ, ಪ್ರತಿ ಪಂದ್ಯದಲ್ಲಿಯೂ ಗುಣಮಟ್ಟದ ಆಟದ ಮೇಲಷ್ಟೇ ನಮ್ಮ ಗಮನವಿರಲಿದೆ. ನಮ್ಮಲ್ಲಿರುವ ಸಂಪೂರ್ಣ ಸಾಮರ್ಥ್ಯದೊಂದಿಗೆ ಆಡಬೇಕು" ಎಂದು ಹೇಳಿದರು.
ವಿಶ್ವಕಪ್ ಗೆಲುವಿನ ಪಯಣ ಬೆಳೆಸಿರುವ ಭಾರತ ತಂಡದಲ್ಲಿ ವಿಶ್ವದ ನಂ.1 ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಸ್ಪೋಟಕ ಬೌಲರ್ ಮೊಹಮ್ಮದ್ ಶಮಿ, ವೇಗದ ಬೌಲರ್ ಭುವನೇಶ್ವರ್ ಕುಮಾರ್ ಜೊತೆಗೆ ಸ್ಪಿನ್ ಮಾಂತ್ರಿಕ ಕುಲ್ದೀಪ್ ಯಾದವ್ ಮತ್ತು ಜುವೇಂದ್ರ ಚಾಹಲ್ ಇದ್ದು, ಈ ಬಾರಿ ಟೀಮ್ ಇಂಡಿಯಾದಲ್ಲಿ ಬೌಲರ್ಗಳ ಪಾತ್ರ ಬಹಳ ಮುಖ್ಯವಾಗಿದೆ. ಈ ಬಾರಿಯ ಭಾರತ ತಂಡದ ಬೌಲಿಂಗ್ ಅನ್ನು ವಿಶ್ವದ ಪ್ರಬಲ ಬೌಲಿಂಗ್ ಎಂದು ಪರಿಗಣಿಸಲಾಗಿದೆ.