World Heritage Site ಪಟ್ಟಿ ಸೇರಿದ ಗುಜರಾತ್ ನ ಹರಪ್ಪಾ ಕಾಲದ Dholavira ನಗರ

World Heritage Site - ಇತ್ತೀಚೆಗಷ್ಟೇ ತೆಲಂಗಾಣ ರಾಜ್ಯದಲ್ಲಿರುವ 13ನೇ ಶತಮಾನದಲ್ಲಿ ನಿರ್ಮಾಣಗೊಂಡ ರಾಮಪ್ಪಾ (Ramappa Temple) ದೇವಾಲಯಕ್ಕೆ UNESCO ವಿಶ್ವ ಪಾರಂಪರಿಕ ತಾಣಗಳ (World Heritage Site) ಪಟ್ಟಿಯಲ್ಲಿ ಜಾಗ ಕಲ್ಪಿಸಿತ್ತು. ಆದರೆ, ಇದೀಗ ಮತ್ತೆ ಭಾರತದ ಮತ್ತೊಂದು ಪಾರಂಪರಿಕ ತಾಣಕ್ಕೆ ಈ ಗೌರವ ಲಭಿಸಿದೆ

ನವದೆಹಲಿ: World Heritage Site - ಇತ್ತೀಚೆಗಷ್ಟೇ ತೆಲಂಗಾಣ ರಾಜ್ಯದಲ್ಲಿರುವ 13ನೇ ಶತಮಾನದಲ್ಲಿ ನಿರ್ಮಾಣಗೊಂಡ ರಾಮಪ್ಪಾ (Ramappa Temple) ದೇವಾಲಯಕ್ಕೆ UNESCO ವಿಶ್ವ ಪಾರಂಪರಿಕ ತಾಣಗಳ (World Heritage Site) ಪಟ್ಟಿಯಲ್ಲಿ ಜಾಗ ಕಲ್ಪಿಸಿತ್ತು. ಆದರೆ, ಇದೀಗ ಮತ್ತೆ ಭಾರತದ ಮತ್ತೊಂದು ಪಾರಂಪರಿಕ ತಾಣಕ್ಕೆ ಈ ಗೌರವ ಲಭಿಸಿದೆ. ಗುಜರಾತ್ (Gujarat) ನಲ್ಲಿರುವ Dholvira ಅನ್ನು UNESCO ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ಹಾಗಾದರೆ ಬನ್ನಿ ಧೋಲವಿರಾ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Telangana: 1000 ಸ್ಥಂಬಗಳ Ramappa Templeಗೆ ವಿಶ್ವ ಪರಂಪರೆಯ ಸ್ಥಾನದ UNESCO ಮಾನ್ಯತೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ವಿಶ್ವಾದ್ಯಂತ ಈ ಕಾರಣಕ್ಕೆ ಪ್ರಸಿದ್ಧಿ ಪಡೆದಿದೆ ಧೋಲಾವಿರಾ - ಧೋಲಾವೀರಾ  ಗುಜರಾತ್‌ನ ಕಚ್ ಜಿಲ್ಲೆಯ ಭಚೌ ತಾಲ್ಲೂಕಿನ ಖಾದಿರ್‌ಬೆಟ್‌ನಲ್ಲಿದೆ. ಇದು ಒಂದು ಐತಿಹಾಸಿಕ ಸ್ಥಳವಾಗಿದೆ, ಇದು ಸುಮಾರು ಐದು ಸಾವಿರ ವರ್ಷಗಳ ಹಿಂದೆ ವಿಶ್ವದ ಪ್ರಾಚೀನ ಮತ್ತು ಕಾರ್ಯನಿರತ ಮಹಾನಗರವಾಗಿತ್ತು.  

2 /6

2. ಹರಪ್ಪಾ ಹಾಗೂ ಸಿಂಧು ನಾಗರಿಕತೆಯ ಸಂಸ್ಕೃತಿಯ ಕುರುಹುಗಳು ಇಲ್ಲಿವೆ - ಹರಪ್ಪಾ ನಾಗರಿಕತೆಯ ಕುರುಹುಗಳನ್ನು ನೀವು ಧೋಲವಿರಾದಲ್ಲಿ ಕಾಣಬಹುದಾಗಿದೆ. ಇದು ತನ್ನದೇ ಅದ ವಿಶಿಷ್ಟ ಪರಂಪರೆಗೆ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಈ ಸ್ಥಳವು ರಾನ್ ಆಫ್ ಕಚ್ನಲ್ಲಿರುವ ವಿಶಾಲವಾದ ಉಪ್ಪು ಬಯಲುಗಳಿಂದ ಆವೃತವಾಗಿದೆ ಮತ್ತು ಪ್ರಾಚೀನ ಸಿಂಧೂ ಕಣಿವೆ ನಾಗರಿಕತೆಯ ಅವಶೇಷಗಳನ್ನು ಸಹ ಇದು ಒಳಗೊಂಡಿದೆ.

3 /6

3. ಧೋಲಾವಿರಾ ಈ ನಗರಗಳನ್ನು ಹಿಂದಿಕ್ಕಿದೆ - ಈ ಪಟ್ಟಿಯಲ್ಲಿ ಶಾಮೀಲಾಗಳು ಧೋಲಾವಿರಾ ಇರಾನ್ ನ ಹವರಮನ್, ಜಪಾನ್ ನ ಜೋಮನ್ (Jomon), ಜೋರ್ಡಾನ್ ನ ಆಸ್-ಸಾಲ್ಟ್ (As-Salt) ಮತ್ತು ಫ್ರಾನ್ಸ್ ನ ನೈಸ್  (Nice) ಗಳನ್ನು ಹಿಂದಿಕ್ಕಿ ಗೌರವ ತನ್ನದಾಗಿಸಿಕೊಂಡಿದೆ.

4 /6

4. ಅಭಿನಂದನೆ ಸಲ್ಲಿಸಿದ UNESCO - ಈ ಕುರಿತು ಬರೆದುಕೊಂಡಿರುವ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO),'ಧೋಲವಿರಾ : ಭಾರತದಲ್ಲಿನ ಹರಪ್ಪ ಕಾಲದ ನಗರವನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಅಭಿನಂದನೆಗಳು! ' ಎಂದು ಹೇಳಿದೆ.

5 /6

5. ಗುಜರಾತ್ ನಲ್ಲಿ ಒಟ್ಟು 4 ವಿಶ್ವ ಪರಂಪರೆಯ ತಾಣಗಳಿವೆ - ಗುಜರಾತ್‌ನಲ್ಲಿ ಈ ಮೊದಲು ಒಟ್ಟು  ಮೂರು ವಿಶ್ವ ಪರಂಪರೆಯ ತಾಣಗಳಿದ್ದವು ಅವುಗಳಲ್ಲಿ ಪಾವಗಡದ ಬಳಿ ಇರುವ  ಚಂಪಾನೇರ್, ಪಟಾನ್‌ನ ರಾಣಿ ಕಿ ವಾವ್ ಮತ್ತು ಐತಿಹಾಸಿಕ ನಗರ ಅಹಮದಾಬಾದ್ ಸೇರಿವೆ. ಈ ಪಟ್ಟಿಯಲ್ಲಿ ಇದೀಗ  ಧೋಲವಿರಾ ನಾಲ್ಕನೇ ಸ್ಥಾನದ ರೂಪದಲ್ಲಿ ಶಾಮೀಲಾಗಿದೆ.

6 /6

6. ಗುಜರಾತ್ ಪಾಲಿಗೆ ಗೌರವದ ದಿನ - ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ (G.Kishan Reddy), 'ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಧೋಲವಿರಾ ಭಾರತದ 40ನೇ ವಿಶ್ವ ಪರಂಪರೆಯ ತಾಣವಾಗಿ ಸೇರ್ಪಡೆಯಾಗಿದೆ ಎಂಬ ಸಂಗತಿಯನ್ನು ಭಾರತದ ಜನರೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ' ಎಂದು ಹೇಳಿದ್ದಾರೆ. ಇಂದು ಭಾರತಕ್ಕೆ, ವಿಶೇಷವಾಗಿ ಗುಜರಾತ್‌ಗೆ ಹೆಮ್ಮೆಯ ದಿನವಾಗಿದೆ ಎಂದು ಅವರು ಹೇಳಿದ್ದಾರೆ. "2014 ರಿಂದ, ಭಾರತದಲ್ಲಿ 10 ಹೊಸ ಸ್ಥಳಗಳನ್ನು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ, ಇದು ಭಾರತದ ಒಟ್ಟು ವಿಶ್ವ ಪರಂಪರೆಯ ತಾಣಗಳ ಕಾಲು ಭಾಗವಾಗಿದೆ" ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.