ಹೈದ್ರಾಬಾದ್: Thousand Pillar Temple - ತೆಲಂಗಾಣದ (Telangana) ಪಾಲಂಪೆಟ್‌ನಲ್ಲಿರುವ ಪ್ರಸಿದ್ಧ ರಾಮಪ್ಪ ದೇವಾಲಯವನ್ನು (Ramappa Temple) ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣಗಳ (UNESCO World Heritage Site) ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ರಾಜ್ಯದ ಜನರನ್ನು ಅಭಿನಂದನೆ ಸಲ್ಲಿಸಿ, ತಾವು ವೈಯಕ್ತಿಕ ಅನುಭವಕ್ಕಾಗಿ ಅಲ್ಲಿಗೆ ಭೇಟಿ ನೀಡುವಂತೆ ದೇಶದ ನಿವಾಸಿಗಳನ್ನು ಕೋರಿದ್ದಾರೆ.
'Excellent! Congratulations to everyone'
UNESCO ಹಂಚಿಕೊಂಡಿರುವ ಟ್ವೀಟ್ ಅನ್ನು ಶೇರ್ ಮಾಡಿರುವ ಪ್ರಧಾನಿ ಮೋದಿ, 'Excellent! Congratulations to everyone, specially the people of Telangana.' ಎಂದು ಬರೆದುಕೊಂಡಿದ್ದಾರೆ. ಅಪ್ರತಿಮ ರಾಮಪ್ಪ ದೇವಾಲಯವು ಮಹಾನ್ ಕಾಕತೀಯ ರಾಜವಂಶದ ಸೊಗಸಾದ ಕರಕುಶಲತೆಯನ್ನು ಪ್ರತಿಬಿಂಬಿಸುತ್ತದೆ. ಈ ಭವ್ಯವಾದ ದೇವಾಲಯ ಸಂಕೀರ್ಣಕ್ಕೆ ಖಂಡಿತವಾಗಿಯೂ ಭೇಟಿ ನೀಡಿ ಅದರ ಭವ್ಯತೆಯನ್ನು ನೀವೇ ಅನುಭವಿಸಬೇಕೆಂದು ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Excellent! Congratulations to everyone, specially the people of Telangana.
The iconic Ramappa Temple showcases the outstanding craftsmanship of great Kakatiya dynasty. I would urge you all to visit this majestic Temple complex and get a first-hand experience of it’s grandness. https://t.co/muNhX49l9J pic.twitter.com/XMrAWJJao2
— Narendra Modi (@narendramodi) July 25, 2021
ಕೃತಜ್ಞತೆಗಳನ್ನು ಸಲ್ಲಿಸಿದ ಕೇಂದ್ರ ಸಾಂಸ್ಕೃತಿಕ ಸಚಿವರು
ಮತ್ತೊಂದೆಡೆ, ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಅವರು, 'ತೆಲಂಗಾಣದ ವಾರಂಗಲ್‌ನ ಪಾಲಂಪೆಟ್‌ನಲ್ಲಿರುವ ರಾಮಪ್ಪ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾಗಿದೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತದೆ. ರಾಷ್ಟ್ರದ ಪರವಾಗಿ, ವಿಶೇಷವಾಗಿ ತೆಲಂಗಾಣದ ಜನರು, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ' ಎಂದು ಹೇಳಿದ್ದಾರೆ.
It gives me immense pleasure to share that @UNESCO has conferred the World Heritage tag to Ramappa Temple at Palampet, Warangal, Telangana.
On behalf of the nation, particularly from people of Telangana, I express my gratitude to Hon PM @narendramodi for his guidance & support. pic.twitter.com/Y18vDBAJKS
— G Kishan Reddy (@kishanreddybjp) July 25, 2021
ಇದನ್ನೂ ಓದಿ-ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ? ಇಂದು ಸಂಜೆ ತೀರ್ಮಾನ!
2019ರಲ್ಲಿ UNESCOಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು
ರಾಮಪ್ಪ ದೇವಾಲಯವನ್ನು 13 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದರ ವಾಸ್ತುಶಿಲ್ಪಿ ರಾಮಪ್ಪ ಅವರ ಸ್ಮರಣಾರ್ಥ ಇದಕ್ಕೆ ರಾಮಪ್ಪಾ ದೇಗುಲ ಎಂದು ಹೆಸರಿಸಲಾಗಿದೆ. 2019 ರಲ್ಲಿ ಇದನ್ನು ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲು ಸರ್ಕಾರ ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಸಿತ್ತು. ಇಂದು ಸುಮಾರು 2 ವರ್ಷಗಳ ಸುದೀರ್ಘ ನಿರೀಕ್ಷೆಯ ಬಳಿಕ ಯುನೆಸ್ಕೋ ಭಾರತದ ಪ್ರಸ್ತಾವನೆಯಿನ್ನು ಒಪ್ಪಿಕೊಂಡಿದೆ ಮತ್ತು ರಾಮಪ್ಪ ದೇವಾಲಯವನ್ನು ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದೆ.
ಇದನ್ನೂ ಓದಿ-ರಾಜ್ಯದಲ್ಲಿ ಭಾರೀ ಮಳೆ : KCET 2021 ಮುಂದೂಡಿ ಸಿದ್ದರಾಮಯ್ಯ ಸರ್ಕಾರಕ್ಕೆ ಮನವಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.