ವರಮಹಾಲಕ್ಷ್ಮೀ ಹಬ್ಬದಲ್ಲಿ ಮಿಂಚಿದ ಯಶ್‌ ದಂಪತಿ: ಫೋಟೋ ಇಲ್ಲಿವೆ

ಕೆಜಿಎಫ್‌ 2 ಬಳಿಕ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್‌ ವಿದೇಶಕ್ಕೆ ಟ್ರಿಪ್‌ ಹೋಗಿದ್ದರು. ಇದೀಗ ಮರಳಿ ಬಂದಿದ್ದು, ವರಮಹಾಲಕ್ಷ್ಮೀ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಿದ್ದಾರೆ. ಹಬ್ಬದ ಸಡಗರದ ಫೋಟೋಗಳನ್ನು ನಟಿ ರಾಧಿಕಾ ಪಂಡಿತ್‌ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳು ಮತ್ತು ಪತಿಯೊಂದು ಹಬ್ಬವನ್ನು ಸಡಗರದಿಂದ ಆಚರಿಸಿಕೊಂಡಿದ್ದಾರೆ ರಾಧಿಕಾ ಪಂಡಿತ್‌. 

1 /5

ರಾಕಿಂಗ್‌ ಸ್ಟಾರ್‌ ಯಶ್ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಡಗರ ಮನೆ ಮಾಡಿದೆ. ಇದರ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ರಾಧಿಕಾ ಪಂಡಿತ್‌ ಶೇರ್‌ ಮಾಡಿಕೊಂಡಿದ್ದಾರೆ. 

2 /5

ವರಮಹಾಲಕ್ಷ್ಮಿ ವ್ರತಾಚರಣೆಯಲ್ಲಿ ತೊಡಗಿಕೊಂಡಿರುವ ರಾಧಿಕಾ ಸಖತ್‌ ಆಗಿ ಕಾಣುತ್ತಿದ್ದಾರೆ. ಮಕ್ಕಳು ಐರಾ ಮತ್ತು ಯಥರ್ವ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಅವರು ನೇರಳೆ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. 

3 /5

ಮಕ್ಕಳೊಂದಿಗೆ ವರಮಹಾಲಕ್ಷ್ಮೀ ಹಬ್ಬವನ್ನು ಯಶ್ ದಂಪತಿ ಆಚರಿಸಿಕೊಂಡಿದ್ದಾರೆ. ಬೆಳ್ಳಿಯ ದೇವಿ ಮೂರ್ತಿಗೆ ಹೂ ಅಲಂಕಾರ, ಹಣ್ಣು ಹಂಪಲು, ಸಿಹಿ ಸೇರಿದಂತೆ ಅನೇಕ ವಸ್ತುಗಳನ್ನು ಸಮರ್ಪಿಸಿ ಪೂಜೆ ಸಲ್ಲಿಸಿದ್ದಾರೆ.   

4 /5

ಇತ್ತೀಚೆಗೆಯಷ್ಟೇ ಯಶ್‌ ದಂಪತಿ ವಿದೇಶಕ್ಕೆ ಪ್ರವಾಸ ತೆರಳಿದ್ದರು. ಈ ಸಂದರ್ಭದಲ್ಲಿ ಬಾಂಗ್ಲಾ ಮತ್ತು ಇಟಲಿಯ ಅಭಿಮಾನಿಗಳನ್ನು ಸಹ ಭೇಟಿ ಮಾಡಿದ್ದರು.

5 /5

ಹಬ್ಬದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಪಂಡಿತ್‌ ಹಂಚಿಕೊಂಡಿದ್ದು, ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ.