Yash Radhika anniversary : ಇಂದು ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರು ತಮ್ಮ 6ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಸ್ಯಾಂಡಲ್ವುಡ್ ಕ್ಯೂಟ್ ಜೋಡಿಗಳಲ್ಲಿ ಒಂದಾದ ದಂಪತಿಗಳು ಮುದ್ದು ಮಕ್ಕಳ ಜೊತೆ ತುಂಟಾಟ ಆಡುತ್ತ.. ಸಿನಿಮಾಗಳಲ್ಲಿ ನಟಿಸುತ್ತಾ, ಫ್ಯಾನ್ಸ್ಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹ್ಯಾಪಿ ಮೂಮೆಂಟ್ಸ್ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಬ್ಯುಸಿಯಾಗಿದ್ದಾರೆ.

ಇನ್ನು 6ವರ್ಷಗಳ ಕಾಲ ಕಪ್ಪು ಚುಕ್ಕೆಯಿಲ್ಲದೆ, ನಗು ನಗುತ್ತ ಬಾಳುತ್ತಿರುವ ಮುದ್ದಾದ ಜೋಡಿಗೆ ಫ್ಯಾನ್ಸ್ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಅಲ್ಲದೆ, ಈ ಮುದ್ದಾದ ಜೋಡಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳದಿರಲಿ ದೇವರೇ ಅಂತ ಪ್ರಾರ್ಥಿಸುತ್ತಿದ್ದಾರೆ.
ವಿಶೇಷವಾಗಿ ಯಶ್ ಫ್ಯಾನ್ಸ್ ರಾಧಿಕಾ ಅವರನ್ನು ಅತ್ತಿಗೆ ಅಂತಾನೇ ಕರೀತಾರೆ. ಅದಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ರಾಕಿ ಫ್ಯಾನ್ಸ್ ಅತ್ತಿಗೆ ಮತ್ತು ಅಣ್ಣನ ವೆಡ್ಡಿಂಗ್ ಆನಿವರ್ಸರಿಯನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ.
ಯಶ್ ಮತ್ತು ರಾಧಿಕಾ ಮೊದಲ ಬಾರಿಗೆ ಟಿವಿ ಕಾರ್ಯಕ್ರಮದ ಸೆಟ್ನಲ್ಲಿ ಭೇಟಿಯಾಗಿದ್ದರು. 2004 ರಲ್ಲಿ ಟಿವಿ ಶೋ ನಂದಗೋಕುಲದ ಸೆಟ್ಗಳಲ್ಲಿ ಪರಿಚಯವಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿತ್ತು.
ರಗಡ್ ಲುಕ್ನ ರಾಕಿ ಭಾಯ್ ಮಾತ್ರ ರಾಧಿಕಾಗೆ ಲವ್ ಪ್ರಪೋಸ್ ಮಾಡಲು ಹೆದರುತ್ತಿದ್ದರು. ಕೊನೆಗೂ ಗಟ್ಟಿ ನಿರ್ಧಾರ ಮಾಡಿದ ಯಶ್, ಪ್ರೇಮಿಗಳ ದಿನದಂದು ರಾಧಿಕಾ ಅವರಿಗೆ ಕರೆ ಮಾಡಿ ಲವರ್ ಪ್ರಪೋಸ್ ಮಾಡಿದ್ದರು. ಆದ್ರೆ ರಾಧಿಕಾ ಅವರು ತಮ್ಮ ಅಭಿಪ್ರಾಯ ಹೇಳಿರಲಿಲ್ಲ.
ಕೆಲವು ದಿನಗಳ ನಂತರ ಯಶ್ ಮತ್ತೊಮ್ಮೆ ರಾಧಿಕಾಗೆ ಕರೆ ಮಾಡಿ ಧೈರ್ಯದಿಂದ ತಮ್ಮ ಮನದಾಳದ ಮಾತನ್ನು ಹೇಳುತ್ತಾರೆ. ಆಗಲೂ ರಾಧಿಕಾ ಯಾವುದೇ ಉತ್ತರ ನೀಡಲ್ಲ. ಆದರೆ ಆರು ತಿಂಗಳ ನಂತರ ಯಶ್ ಅವರು ಮತ್ತೆ ಪ್ರಪೋಸ್ ಮಾಡಿದಾಗ ಇನ್ನೂ ಕಾಯಿಸಿದ್ರೆ ಸರಿಯಲ್ಲ ಅಂತ ರಾಧಿಕಾ ಯಸ್ ಅಂತಾರೆ.
ಯಶ್ ಮತ್ತು ರಾಧಿಕಾ 9 ಡಿಸೆಂಬರ್ 2016 ರಂದು ಬೆಂಗಳೂರಿನಲ್ಲಿ ವಿವಾಹವಾದರು. ಸ್ಟಾರ್ ಜೋಡಿಯ ಅದ್ಧೂರಿ ಮದುವೆಗೆ ದಕ್ಷಿಣ ಚಿತ್ರರಂಗದ ಖ್ಯಾತ ತಾರೆಯರು ಭಾಗವಹಿಸಿದ್ದರು.
ಇಂದು ಅವರಿಬ್ಬರೂ ಮದುವೆಯಾಗಿ 6 ವರ್ಷಗಳಾಗಿವೆ. ಅಲ್ಲದೆ, ಈ ಕ್ಯೂಟ್ ಜೋಡಿಗೆ ಯಥಾರ್ಥ್ ಮತ್ತು ಐರಾ ಎಂಬ ಮುದ್ದಾದ ಮಕ್ಕಳಿದ್ದಾರೆ.