ಬೆಂಗಳೂರು : ಧಾರ್ಮಿಕ ನಂಬಿಕೆಗಳ ಪ್ರಕಾರ ಲಕ್ಷ್ಮೀ ದೇವಿಸಂಪತ್ತಿನ ಅಧಿದೇವತೆ. ಲಕ್ಷ್ಮೀಯ ಕೃಪೆಗೆ ಪಾತ್ರರಾದರೆ, ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಕುಂದುವುದೇ ಇಲ್ಲ. ಮನೆಯಲ್ಲಿರುವ ಲಕ್ಷ್ಮೀ ಮನೆಯಿಂದ ನಿರ್ಗಮಿಸಿದರೆ ಜೀವನವಿಡೀ, ಬಡತನ ಅನುಭವಿಸಬೇಕಾಗುತ್ತದೆ.ನಾವು ಮಾಡುವ ಕೆಲವು ಕೆಲಸಗಳೇ ಮಹಾಲಕ್ಷ್ಮೀಯ ಕೋಪಕ್ಕೆ ಕಾರಣವಾಗುತ್ತದೆ. ನೋಟುಗಳನ್ನು ಎಣಿಸುವಾಗ ಅಥವಾ ಹಣವನ್ನು ನಿರ್ವಹಿಸುವಾಗ ಮಾಡುವ ಕೆಲ ತಪ್ಪುಗಳಿಂದಾಗಿ ಲಕ್ಷ್ಮೀ ಶಾಶ್ವತವಾಗಿ ದೂರವಾಗಿ ಬಿಡುತ್ತಾಳೆ ಎಂದು ಹೇಳಲಾಗುತ್ತದೆ.
ನೋಟುಗಳನ್ನು ಎಣಿಸುವಾಗ ಎಂಜಲು ಬಳಸಬೇಡಿ :
ಅನೇಕ ಜನರು ನೋಟುಗಳನ್ನು ಎಣಿಸುವಾಗ ಎಂಜಲು ತಾಕಿಸುತ್ತಾರೆ. ನೋಟು ಎಂದರೆ ಅದು ಲಕ್ಷ್ಮೀ. ಹಾಗಾಗಿ ನೋಟಿಗೆ ಎಂಜಲು ಬಳಸುವುದು ಎಂದರೆ ತಾಯಿ ಲಕ್ಷ್ಮೀ ಗೆ ಅಗೌರವ ತೋರಿದಂತೆ.ಈ ರೀತಿ ಮಾಡಿದಾಗ ಲಕ್ಷ್ಮೀ ಕೋಪಗೊಂಡು ಹೊರಟು ಹೋಗುತ್ತಾಳೆ.
ಇದನ್ನೂ ಓದಿ :Budh Gochar 2024: ಇಂದು ಮಿಥುನ ರಾಶಿಗೆ ಬುಧನ ಪ್ರವೇಶ, ಜಾಗೃತಗೊಳ್ಳಲಿದೆ ಮೂರು ರಾಶಿಯವರ ಅದೃಷ್ಟ
ಹಣವನ್ನು ಎಲ್ಲಿ ಇಡುತ್ತೀರಿ ಎನ್ನುವುದು ಕೂಡಾ ಮುಖ್ಯ :
ಕೆಲವರು ಹಣವನ್ನು ಪಕ್ಕದಲ್ಲಿ ಇಟ್ಟುಕೊಂಡೇ ಮಲಗುತ್ತಾರೆ.ಇನ್ನು ಕೆಲವರು ಅಸ್ತವ್ಯಸ್ತವಾಗಿರುವ ರೀತಿಯಲ್ಲಿ ಹಣವನ್ನು ಹಾಸಿಗೆ ಅಥವಾ ಮೇಜಿನ ಮೇಲೆ ಹರಡಿಕೊಂಡು ಇಡುತ್ತಾರೆ.ಹಣ ಮತ್ತು ಒಡವೆಗಳನ್ನು ಯಾವಾಗಲೂ ಬೀರು ಅಥವಾ ಸ್ವಚ್ಛ ಸ್ಥಳದಲ್ಲಿ ಇಡಬೇಕು.
ಹಣವನ್ನು ಎಸೆಯುವುದು :
ಕೆಲವರಿಗೆ ಹಣವನ್ನು ಎಸೆಯುವ ಮೂಲಕ ಬೇರೆಯವರಿಗೆ ನೀಡುವ ಬುದ್ದಿ ಇರುತ್ತದೆ. ಹಾಗಾಗಿ ಯಾರಿಗೆ ಹಣ ಕೊಡಬೇಕಾದರೂ ಕೈಯ್ಯಲ್ಲಿಯೇ ಕೊಡಬೇಕು. ಎಸೆದು ನೀಡಬಾರದು. ಒಂದೇ ವೇಳೆ ಹೀಗೆ ಮಾಡಿದರೆ ಲಕ್ಷ್ಮೀಗೆ ಅಪಮಾನ ಮಾಡಿದಂತೆ.
ಇದನ್ನೂ ಓದಿ :Shukra Gochar 2024: ಮಿಥುನ ರಾಶಿಗೆ ಶುಕ್ರನ ಪ್ರವೇಶ, ಮೂರು ರಾಶಿಯವರಿಗೆ ಧನ-ಸಂಪತ್ತಿಗೆ ಕೊರತೆಯೇ ಇಲ್ಲ
ಹಣ ಕೆಳಗೆ ಬಿದ್ದರೆ ? :
ಕೆಲವು ಕಾರಣಗಳಿಂದ ಹಣವು ನೆಲದ ಮೇಲೆ ಬಿದ್ದರೆ, ಅದನ್ನು ಮೇಲಕ್ಕೆತ್ತಿ ಅದಕ್ಕೆ ನಮಸ್ಕರಿಸಬೇಕು.ಧಾರ್ಮಿಕ ನಂಬಿಕೆಗಳ ಪ್ರಕಾರ,ಲಕ್ಷ್ಮೀ ಹಣದಲ್ಲಿ ನೆಲೆಸಿರುತ್ತಾಳೆ. ಈ ಕಾರಣಕ್ಕಾಗಿಯೇ ಲಕ್ಷ್ಮೀ ಪೂಜೆಯ ಸಂದರ್ಭಗಳಲ್ಲಿ ಹಣವನ್ನು ಇಟ್ಟು ಪೂಜಿಸಲಾಗುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.