2024 Horoscope : ಇನ್ನು ಒಂದು ವರ್ಷದವರೆಗೆ ಈ ರಾಶಿಯವರಿಗೆ ಅದೃಷ್ಟ ! ಸುಖದ ಸುಪ್ಪತ್ತಿಗೆಯಲ್ಲಿಯೇ ಜೀವನ, ಹರಿದು ಬರುವುದು ಧನಸಂಪತ್ತು

Yearly Horoscope 2024 :2024 ಕೆಲವು ರಾಶಿಯವರ ಪಾಲಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಮಾಡುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು.   

Written by - Ranjitha R K | Last Updated : Nov 20, 2023, 02:38 PM IST
  • 2024ರ ವಾರ್ಷಿಕ ರಾಶಿಫಲ ಪ್ರಾರಂಭವಾಗಿದೆ.
  • ಗ್ರಹಗಳು ಮತ್ತು ನಕ್ಷತ್ರಗಳ ಅತ್ಯಂತ ಮಂಗಳಕರ ಸಂಯೋಜನೆ
  • ಹಲವು ತಿಂಗಳುಗಳವರೆಗೆ ಈ ರಾಶಿಯವರಿಗೆ ಅದೃಷ್ಟ
2024 Horoscope : ಇನ್ನು ಒಂದು ವರ್ಷದವರೆಗೆ  ಈ ರಾಶಿಯವರಿಗೆ ಅದೃಷ್ಟ ! ಸುಖದ ಸುಪ್ಪತ್ತಿಗೆಯಲ್ಲಿಯೇ ಜೀವನ,  ಹರಿದು ಬರುವುದು ಧನಸಂಪತ್ತು  title=

Yearly Horoscope 2024 : 2024 ವರ್ಷದ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ದೀಪಾವಳಿಯ ನಂತರ ಗ್ರಹಗಳು ಮತ್ತು ನಕ್ಷತ್ರಗಳ ಮಂಗಳಕರ ಸಂಯೋಜನೆಯಾಗಿದೆ. ಹೀಗಾಗಿ ಅನೇಕ ಮಂಗಳಕರ ಯೋಗಗಳು ಕೂಡಾ ರೂಪು ಗೊಂಡಿವೆ. ಈ ಯೋಗಗಳ ಕಾರಣ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟ ಕಾಲಿಟ್ಟಿದೆ. ಈ ಅದೃಷ್ಟ ೨೦೨೪ರ ವರ್ಷ ಪೂರ್ತಿ ಇರಲಿದೆ ಎನ್ನಲಾಗಿದೆ.  ದೀಪಾವಳಿಯ ಕೆಲವು ದಿನಗಳ ಹಿಂದೆ ರಾಹು-ಕೇತು  ತನ್ನ ರಾಶಿಯನ್ನು ಬದಲಾಯಿಸಿವೆ.  ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ನೇರ ನಡೆಗೆ ಮರಳಿದ್ದಾನೆ. ಗುರು ಗ್ರಹ ಸಂಕ್ರಮಿಸಿ ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಈ ಗ್ರಹಗಳ ಸ್ಥಾನದಲ್ಲಿನ ಬದಲಾವಣೆ ಐದು ರಾಶಿಯವರಿಗೆ ತುಂಬಾ ಮಂಗಳಕರ ಯೋಗಗಳನ್ನು ಉಂಟು ಮಾಡಿದೆ. ಈ ರಾಶಿಯವರ ಮೇಲೆ ಮಹಾಲಕ್ಷ್ಮಿ ದಯೆ  2024 ರಲ್ಲೂ ಮುಂದುವರೆಯಲಿದೆ. 

2024 ರ ಅದೃಷ್ಟದ ರಾಶಿಗಳು : 
ಮಿಥುನ ರಾಶಿ : ಮಿಥುನ ರಾಶಿಯವರಿಗೆ 2024 ರ ವರ್ಷವು ಅತ್ಯುತ್ತಮ  ವರ್ಷವಾಗಿರಲಿದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ವಾಹನ ಖರೀದಿ ಯೋಗವಿದೆ. ವೃತ್ತಿಜೀವನದಲ್ಲಿ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ಪಡೆಯಬಹುದು. ಹೊಸ ಕೆಲಸವನ್ನು ಪ್ರಾರಂಭಿಸಲು ಮತ್ತು ಹೂಡಿಕೆ ಮಾಡಲು ಸಮಯವು ಅನುಕೂಲಕರವಾಗಿದೆ. ನಿಮ್ಮ ವ್ಯಕ್ತಿತ್ವದಲ್ಲಿ ವಿಭಿನ್ನ ಪರಿಣಾಮ ಕಂಡುಬರುತ್ತದೆ. 

ಇದನ್ನೂ ಓದಿ : ಈ ರಾಶಿಯವರು ಮೃದುವಾಗಿ ಕಂಡರೂ ಮೃಗದಷ್ಟು ಡೇಂಜರಸ್‌.. ದೂರ ಇರುವುದೇ ಉತ್ತಮ!

ಸಿಂಹ ರಾಶಿ : 2024 ರ ವರ್ಷವು ಸಿಂಹ ರಾಶಿಯವರ ಜೀವನದಲ್ಲಿ ಸುವರ್ಣ ಯುಗ. ಇಲ್ಲಿವರೆಗೆ ಅನುಭವಿಸಿದ್ಸ ನೋವಿಗೆ ಮುಕ್ತಿ ಸಿಗುವುದು. ಒತ್ತಡ ದೂರವಾಗುವುದು. ಆರ್ಥಿಕ ಲಾಭವಾಗುವುದು. ಆದಾಯ ಹೆಚ್ಚಲಿದೆ. ನೀವು ಏನೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಕೈ ಹಿಡಿಯುವುದು. ಮಾಡುವ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿಸಿದಂತೆ ಫಲ ಸಿಗುತ್ತಾ ಹೋಗುವುದು. ಹೂಡಿಕೆಯಿಂದ ಲಾಭವಾಗಲಿದೆ. 

ಕನ್ಯಾ ರಾಶಿ: 2024ರಲ್ಲಿ ಕನ್ಯಾ ರಾಶಿಯವರ  ಬ್ಯಾಂಕ್ ಬ್ಯಾಲೆನ್ಸ್ ವೇಗವಾಗಿ ಹೆಚ್ಚಾಗುತ್ತದೆ. ಆರ್ಥಿಕ ಸಮಸ್ಯೆ ಏನಿದ್ದರೂ ಬಗೆಹರಿದು, ಕೈ ತುಂಬಾ ಹಣ ನಿಲ್ಲುವುದು. ಯಾವುದೇ ಪ್ರಮುಖ ಪರೀಕ್ಷೆ ಅಥವಾ ಸ್ಪರ್ಧೆಯಲ್ಲಿ ಭಾಗವಹಿಸಿದರೆ ಯಶಸ್ಸು ನಿಮ್ಮದೇ. 

ಇದನ್ನೂ ಓದಿ : ಈ ಗಿಡಗಳು ನಿಮ್ಮ ಮನೆಯ ಹತ್ತಿರದಲ್ಲಿರದಂತೆ ನೋಡಿಕೊಳ್ಳಿ, ಇವು ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತವೆ!

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯ ಜನರು 2024 ರಲ್ಲಿ ತಮ್ಮ ವ್ಯಾಪಾರವನ್ನು ಗಮನಾರ್ಹವಾಗಿ ವಿಸ್ತರಿಸುವ ಅವಕಾಶವನ್ನು ಪಡೆಯಬಹುದು. ಒಂದರ ನಂತರ ಒಂದರಂತೆ  ಯಶಸ್ಸು ನಿಮ್ಮನ್ನು ಹಿಂಬಾಲಿಸುವುದು. ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆ ಮಾಡಬಹುದು. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. 

ಮಕರ ರಾಶಿ : ಮಕರ ರಾಶಿಯವರಿಗೆ 2024ರ ವರ್ಷವು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕಠಿಣ ಪರಿಶ್ರಮದಿಂದ ಯಶಸ್ಸು ಸಿಗುವುದು.  ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಬಹುದು. ಉದ್ಯೋಗದಲ್ಲಿರುವವರಿಗೆ ಹೊಸ ಅವಕಾಶಗಳು ಸಿಗಲಿವೆ. ನಿಮ್ಮ ವ್ಯಕ್ತಿತ್ವದ ಆಕರ್ಷಣೆ ಹೆಚ್ಚಾಗುತ್ತದೆ. ಜನರು ನಿಮ್ಮ ಕಡೆಗೆ ಆಕರ್ಷಿತರಾಗುವರು. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News