ಏಪ್ರಿಲ್‌ನ ಅದೃಷ್ಟಶಾಲಿ ರಾಶಿಗಳು ಇವೇ ! ಸಿಗುವುದು ಹೊಸ ಉದ್ಯೋಗ, ಹರಿದು ಬರುವುದು ಹಣದ ಹೊಳೆ

April 2023 monthly horoscope : ಅನೇಕ ಪ್ರಮುಖ ಗ್ರಹಗಳು ಈ ತಿಂಗಳು ರಾಶಿಯನ್ನು ಬದಲಾಯಿಸುತ್ತವೆ. ಈ ಗ್ರಹ ಸಂಕ್ರಮಣವು 5 ರಾಶಿಯವರಿಗೆ ವಿಶೇಷ ಲಾಭವನ್ನು ನೀಡುತ್ತದೆ.   

Written by - Ranjitha R K | Last Updated : Mar 30, 2023, 11:45 AM IST
  • 1 ವರ್ಷದ ನಂತರ ರಾಶಿ ಬದಲಾಯಿಸಲಿರುವ ಗುರು
  • ಸೂರ್ಯ ಮತ್ತು ಬುಧ ಸಂಕ್ರಮಣವೂ ನಡೆಯಲಿದೆ
  • ಏಪ್ರಿಲ್ 5 ರಾಶಿಯವರಿಗೆ ವಿಶೇಷ ಲಾಭವನ್ನು ನೀಡುತ್ತದೆ.
ಏಪ್ರಿಲ್‌ನ ಅದೃಷ್ಟಶಾಲಿ ರಾಶಿಗಳು ಇವೇ ! ಸಿಗುವುದು ಹೊಸ ಉದ್ಯೋಗ, ಹರಿದು ಬರುವುದು ಹಣದ ಹೊಳೆ

April 2023 monthly horoscope : ಏಪ್ರಿಲ್ ತಿಂಗಳು ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನದ ವಿಷಯದಲ್ಲಿ ಬಹಳ ವಿಶೇಷವಾಗಿರುತ್ತದೆ. ಅನೇಕ ಪ್ರಮುಖ ಗ್ರಹಗಳು ಈ ತಿಂಗಳು ರಾಶಿಯನ್ನು ಬದಲಾಯಿಸುತ್ತವೆ. ಇದರಲ್ಲಿ ಪ್ರಮುಖವಾದದ್ದು ಗುರು  ಸಂಕ್ರಮಣ. ಒಂದು ವರ್ಷದ ನಂತರ, ಗುರು ರಾಶಿಯನ್ನು ಬದಲಾಯಿಸಿ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಇದಲ್ಲದೇ ಸೂರ್ಯ ಸಂಚಾರ, ಬುಧ ಸಂಕ್ರಮಣ ಇತ್ಯಾದಿಗಳೂ ನಡೆಯುತ್ತವೆ. ಈ ಗ್ರಹ ಸಂಕ್ರಮಣವು 5 ರಾಶಿಯವರಿಗೆ ವಿಶೇಷ ಲಾಭವನ್ನು ನೀಡುತ್ತದೆ. ಈ ರಾಶಿಯವರು ಅಧಿಕ ಪ್ರಮಾಣದಲ್ಲಿ ಹಣ ಗಳಿಸುವುದು ಸಾಧ್ಯವಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಹಾದಿ ತೆರೆಯುತ್ತದೆ. ಹೊಸ ಉದ್ಯೋಗದ  ಆಫರ್ ಸಿಗಬಹುದು. 

ಏಪ್ರಿಲ್ 2023 ರ ಅದೃಷ್ಟ ರಾಶಿಗಳಿವು :  
ಮೇಷ : ಮೇಷ ರಾಶಿಯವರಿಗೆ ಏಪ್ರಿಲ್ ತಿಂಗಳು ಬಹಳ ಶುಭವಾಗಿರಲಿದೆ. ಆತ್ಮವಿಶ್ವಾಸ ಹೆಚ್ಚುತ್ತಲೇ ಇರುತ್ತದೆ. ಈ ಸಮಯ   ವೃತ್ತಿ ಮತ್ತು ಹಣದ ವಿಷಯದಲ್ಲಿ ಉತ್ತಮವಾಗಿರುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಹೊಸ ಉದ್ಯೋಗ ಸಿಗಬಹುದು. 

ಇದನ್ನೂ ಓದಿ Lunar Eclipse 2023: ಈ ದಿನ ಸಂಭವಿಸಲಿದೆ ವರ್ಷದ ಮೊದಲ ಚಂದ್ರ ಗ್ರಹಣ, ಈ ರಾಶಿಯವರಿಗೆ ಲಾಭದಾಯಕ

ವೃಷಭ ರಾಶಿ : ಏಪ್ರಿಲ್ ತಿಂಗಳು ವೃಷಭ ರಾಶಿಯವರಿಗೆ ಅನೇಕ ಶುಭ ಸುದ್ದಿಗಳನ್ನು ಹೊತ್ತು ತರಲಿದೆ. ಆರ್ಥಿಕ ಲಾಭ ಹೆಚ್ಚುತ್ತದೆ. ಆದಾಯ ಹೆಚ್ಚಲಿದೆ. ಉದ್ಯೋಗ ಮತ್ತು ವ್ಯವಹಾರಕ್ಕೆ ಉತ್ತಮ ಸಮಯ. ಆದರೆ ಯಾರನ್ನೂ ಕುರುಡಾಗಿ ನಂಬಬೇಡಿ.  

ಮಿಥುನ ರಾಶಿ : ಏಪ್ರಿಲ್ ಮಿಥುನ ರಾಶಿಯವರಿಗೆ ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತದೆ. ತಿಂಗಳ ದ್ವಿತೀಯಾರ್ಧವು ವಿಶೇಷವಾಗಿ ಮಂಗಳಕರವಾಗಿರುತ್ತದೆ. ದೊಡ್ಡ ಮಟ್ಟದ ಹಣ ಸಂಪಾದನೆ ಸಾಧ್ಯವಾಗುತ್ತದೆ. ಅನಿರೀಕ್ಷಿತ ಯಶಸ್ಸು ಕಾಣಬಹುದು. 

ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ವೃತ್ತಿ, ಸಂಪತ್ತು ಮತ್ತು ಆರೋಗ್ಯದ ವಿಷಯದಲ್ಲಿ ಏಪ್ರಿಲ್ ತಿಂಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗದಲ್ಲಿ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. 

ಇದನ್ನೂ ಓದಿ : Budh Asta 2023: ಬುಧನ ಅಸ್ತದಿಂದ ಈ 4 ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ದೊಡ್ಡ ನಷ್ಟ!

ಧನು ರಾಶಿ: ಏಪ್ರಿಲ್ 2023 ಧನು ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡುತ್ತದೆ. ವೃತ್ತಿಯಲ್ಲಿಯೂ ಪ್ರಗತಿಯನ್ನು ಕಂಡು ಬರಲಿದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲ ಸಿಗಲಿದೆ. ಹೊಸ ಮೂಲಗಳಿಂದ ಹಣ  ಹರಿದು ಬರಲಿದೆ.   

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

More Stories

Trending News