Panchak 2022: ಪಂಚಕದಲ್ಲಿ 5 ದಿನ ಈ ಕೆಲಸ ಮಾಡಬೇಡಿ, ಯಾವ ಕೆಲಸ ಶುಭ ಗೊತ್ತಾ?

ನವರಾತ್ರಿ ಮತ್ತು ದಸರಾ ಹಬ್ಬ ಮುಗಿದ ತಕ್ಷಣ ಅಕ್ಟೋಬರ್ 6ರಿಂದ ಪಂಚಕ ಪ್ರಾರಂಭವಾಗುತ್ತದೆ. ಈ 5 ದಿನಗಳಲ್ಲಿ ಕೆಲವು ವಿಶೇಷ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ, ಆದರೆ ಕೆಲವು ಶುಭ ಕಾರ್ಯಗಳನ್ನು ಮಾಡಬಹುದು.

Written by - Puttaraj K Alur | Last Updated : Oct 7, 2022, 09:14 AM IST
  • ಪಂಚಕ ಸಮಯದಲ್ಲಿ ದಕ್ಷಿಣ ದಿಕ್ಕಿನಲ್ಲಿ ಪ್ರಯಾಣಿಸಬಾರದು
  • ಪಂಚಕದಲ್ಲಿ ಮನೆಯ ಮೇಲ್ಛಾವಣಿ ಹಾಕಿದ್ರೆ ಧನಹಾನಿಯಾಗುತ್ತದೆ
  • ಪಂಚಕ ಸಮಯದಲ್ಲಿ ಹಾಸಿಗೆ, ಕಟ್ಟಿಗೆ ಹಾಗೂ ಇಂಧನ ಖರೀದಿಸಬಾರದು
Panchak 2022: ಪಂಚಕದಲ್ಲಿ 5 ದಿನ ಈ ಕೆಲಸ ಮಾಡಬೇಡಿ, ಯಾವ ಕೆಲಸ ಶುಭ ಗೊತ್ತಾ? title=
October Panchak 2022

ನವದೆಹಲಿ: ಹಿಂದೂ ಧರ್ಮದಲ್ಲಿ ಪ್ರತಿ ಶುಭ ಕಾರ್ಯವನ್ನು ಮುಹೂರ್ತದ ಪ್ರಕಾರವೇ ಮಾಡಲಾಗುತ್ತದೆ. ವಿಶೇಷವಾಗಿ ಕೆಲವು ಒಳ್ಳೆಯ ಮತ್ತು ಮುಖ್ಯವಾದ ಕೆಲಸಗಳನ್ನು ಶುಭ ಮುಹೂರ್ತದಲ್ಲಿ ಮಾತ್ರ ಮಾಡಲಾಗುತ್ತದೆ. ಮುಹೂರ್ತವನ್ನು ತೆಗೆದುಕೊಳ್ಳುವಾಗ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನಗಳನ್ನು ನೋಡಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಪ್ರತಿ ತಿಂಗಳು 5 ದಿನಗಳು ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. ಈ ಅವಧಿಯನ್ನು ಪಂಚಕ ಕಾಲ ಎಂದು ಕರೆಯಲಾಗುತ್ತದೆ.

ಪಂಚಕ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಂಚಕದಲ್ಲಿ ಶುಭ ಕಾರ್ಯ ಮಾಡಬಾರದು. ಈ ಬಾರಿ  ಪಂಚಕವು ಅಕ್ಟೋಬರ್ 6ರಿಂದ ಪ್ರಾರಂಭವಾಗಿದ್ದು, ಅ.10ರ ಸೋಮವಾರ ಸಂಜೆ 4:3ಕ್ಕೆ ಇದು ಕೊನೆಗೊಳ್ಳುತ್ತದೆ.

ಇದನ್ನೂ ಓದಿ: Tulsi Remedies : ಹಣದ ಸಮಸ್ಯೆ ನೀಗಲು ತುಳಸಿ ಗಿಡದಿಂದ ಹೀಗೆ ಮಾಡಿದರೆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ!

ಪಂಚಕ ಸಮಯದಲ್ಲಿ ಈ ಕೆಲಸ ಮಾಡಬಾರದು

  • ಪಂಚಕ ಸಮಯದಲ್ಲಿ ದಕ್ಷಿಣ ದಿಕ್ಕಿನಲ್ಲಿ ಪ್ರಯಾಣಿಸಬಾರದು. ಇದರಿಂದ ಪ್ರಯಾಣದ ವೇಳೆ ಸಮಸ್ಯೆಯುಂಟಾಗುತ್ತದೆ.
  • ಪಂಚಕದಲ್ಲಿ ಮನೆಯ ಮೇಲ್ಛಾವಣಿ ಹಾಕಬಾರದು. ಇಲ್ಲವಾದಲ್ಲಿ ಮನೆಯಲ್ಲಿ ಕಲಹ ಉಂಟಾಗಿ ಧನಹಾನಿಯೂ ಉಂಟಾಗುತ್ತದೆ.
  • ಪಂಚಕ ಸಮಯದಲ್ಲಿ ಹಾಸಿಗೆ ಖರೀದಿಸಬಾರದು  
  • ಪಂಚಕದ ಸಮಯದಲ್ಲಿ ಕಟ್ಟಿಗೆ ಅಥವಾ ಯಾವುದೇ ರೀತಿಯ ಇಂಧನವನ್ನು ಖರೀದಿಸಬಾರದು.

ಇದನ್ನೂ ಓದಿ: Chanakya Niti : ಪುರುಷರ ಈ ಗುಣಗಳು ಮಹಿಳೆಯರಿಗೆ ತುಂಬಾ ಇಷ್ಟವಂತೆ!

ಪಂಚಕ ಸಮಯದಲ್ಲಿ ಯಾರಾದರೂ ಸತ್ತರೆ, ಪಂಚಕ ದೋಷವು ಕೊನೆಗೊಳ್ಳಲು 5 ಹಿಟ್ಟಿನ ಉಂಡೆಗಳು ಅಥವಾ ಕುಶನ ಪ್ರತಿಮೆಗಳನ್ನು ಇಡಬೇಕು. ಇಲ್ಲವಾದರೆ ಪಂಚಕದಲ್ಲಿ ಯಾರಾದರೂ ಸತ್ತರೆ ಕುಟುಂಬದ 5 ಜನರ ಪ್ರಾಣಕ್ಕೆ ಅಪಾಯವಾಗಬಹುದು ಎಂಬ ನಂಬಿಕೆ ಇದೆ. ಲಂಕಾಧಿಪತಿ ರಾವಣನೂ ಪಂಚಕದಲ್ಲಿಯೇ ಮಡಿದಿದ್ದಾನೆ.

ಪಂಚಕ ಸಮಯದಲ್ಲಿ ನೀವು ಈ ಕೆಲಸ ಮಾಡಬಹುದು

ಪಂಚಕ ಸಮಯದಲ್ಲಿ ಪೂಜೆಯನ್ನು ಮಾಡಬಹುದು. ಪಂಚಕ ಸಮಯದಲ್ಲಿ ಧನಿಷ್ಠ, ಶತಭಿಷ, ಪೂರ್ವ ಭಾದ್ರಪದ ಮತ್ತು ರೇವತಿ ನಕ್ಷತ್ರದಂತಹ ಕೆಲವು ವಿಶೇಷ ಯೋಗಗಳು ರೂಪುಗೊಂಡರೆ, ಪ್ರಮುಖ ಪ್ರಯಾಣ, ಕ್ಷೌರದ ಕೆಲಸ ಮತ್ತು ವ್ಯಾಪಾರವನ್ನು ಮಾಡಬಹುದು. ಇದಲ್ಲದೇ ಉತ್ತರಾಭಾದ್ರಪದ ನಕ್ಷ ತ್ರವಾರು ಸರ್ವಾರ್ಥ ಸಿದ್ಧಿ ಯೋಗವು ಏರ್ಪಟ್ಟರೆ ನಿಶ್ಚಿತಾರ್ಥ, ವಿವಾಹ, ಹೊಸ ಕಾರ್ಯಾರಂಭದಂತಹ ಶುಭ ಕಾರ್ಯಗಳೂ ನಡೆಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News