Dhana Prapti Indications: ಲಕ್ಷ್ಮೀ ದೇವಿ ಮನೆಗೆ ಆಗಮಿಸುವುದಕ್ಕೂ ಮೊದಲು ಕೆಲವು ಸಂಕೇತಗಳನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮುಸ್ಸಂಜೆ ಸಮಯದಲ್ಲಿ ಸೂರ್ಯಾಸ್ತದ ವೇಳೆ ಕೆಲವು ವಸ್ತುಗಳನ್ನು ಕಾಣುವುದು ಮನೆಗೆ ಲಕ್ಷ್ಮಿ ಆಗಮನದ ಸಂಕೇತ ಎಂದು ಬಣ್ಣಿಸಲಾಗುತ್ತದೆ. ಹಾಗಿದ್ದರೆ, ಸೂರ್ಯಾಸ್ತದ ಸಮಯದಲ್ಲಿ ಯಾವ ವಸ್ತುಗಳನ್ನು ಕಾಣುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ನೋಡುವುದಾದರೆ...
ಸೂರ್ಯಾಸ್ತದ ಸಮಯದಲ್ಲಿ ಇವುಗಳನ್ನು ಕಾಣುವುದು ಮನೆಗೆ ಭಾಗ್ಯ ಲಕ್ಷ್ಮಿ ಆಗಮನದ ಸಂಕೇತ:-
* ಮೂರು ಹಲ್ಲಿಗಳನ್ನು ಒಟ್ಟಿಗೆ ಕಾಣುವುದು:
ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ಸಮಯದಲ್ಲಿ ಮೂರು ಹಲ್ಲಿಗಳನ್ನು ಒಟ್ಟಿಗೆ ಕಾಣುವುದನ್ನು ಮನೆಗೆ ಲಕ್ಷ್ಮಿ ಆಗಮನದ ಸಂಕೇತ ಎಂದು ನಂಬಲಾಗಿದೆ. ಇದರಿಂದ ಹಠಾತ್ ಧನಾಗಮನವಾಗಬಹುದು.
ಇದನ್ನೂ ಓದಿ- Budha Gochara: ಈ 5 ರಾಶಿಯವರಿಗೆ ಧನ-ಸಂಪತ್ತು, ರಾಜಯೋಗ ಕರುಣಿಸಲಿದ್ದಾಳೆ ತಾಯಿ ಲಕ್ಷ್ಮಿ
* ಕಪ್ಪು ಇರುವೆಗಳು:
ಸೂರ್ಯಾಸ್ತದ ಸಮಯದಲ್ಲಿ ಇದ್ದಕ್ಕಿದ್ದಂತೆ ಮನೆಯಲ್ಲಿ ಕಪ್ಪು ಇರುವೆಗಳನ್ನು ಕಾಣುವುದನ್ನು ತುಂಬಾ ಶುಭ ಎಂದು ನಂಬಲಾಗಿದೆ. ಇದರರ್ಥ ಅತಿ ಶೀಘ್ರದಲ್ಲಿ ಲಕ್ಷ್ಮಿ ಕೃಪಾಕಟಾಕ್ಷ ನಿಮ್ಮ ಕುಟುಂಬದ ಮೇಲೆ ಬೀರಲಿದೆ. ನೀವು ಶೀಘ್ರದಲ್ಲೇ ಶ್ರೀಮಂತರಾಗುವಿರಿ ಎಂದು ಹೇಳಲಾಗುತ್ತದೆ.
* ಪೊರಕೆ ಅಥವಾ ಗೂಬೆ:
ಕೆಲವರು ಮಧ್ಯಾಹ್ನ ಮಲಗಿ ಮುಸ್ಸಂಜೆ ಸಮಯದಲ್ಲಿ ಏಳುತ್ತಾರೆ. ಇನ್ನೂ ಕೆಲವರು ಸಂಜೆ ವೇಳೆ ಮಲಗಬಾರದು ಎಂದು ತಿಳಿದಿದ್ದರೂ ಮಲಗುತ್ತಾರೆ. ಆದರೆ, ಸೂರ್ಯಾಸ್ತದ ನಂತರ ನಿಮ್ಮ ಕನಸಿನಲ್ಲಿ ಲಕ್ಷ್ಮಿ ಸ್ವರೂಪಿಯಾದ ಪೊರಕೆ ಅಥವಾ ಗೂಬೆ ಕಾಣಿಸಿಕೊಳ್ಳುವುದು ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಬಂಪರ್ ಧನಯೋಗ, ಆಚ್ಛೇದಿನ್ ಆಗಮನದ ಸಂಕೇತ ಎನ್ನಲಾಗುವುದು.
ಇದನ್ನೂ ಓದಿ- Shani Gochar 2023: ಮೂರು ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದ್ದಾನೆ ಮಾರ್ಗಿ ಶನಿ
* ಮನೆಯ ಮುಂದೆ ಪಕ್ಷಿ ಗೂಡು:
ಇದಲ್ಲದೆ, ಮನೆಯ ಮುಂದೆ ಪಕ್ಷಿ ಗೂಡು ಕಟ್ಟುವುದನ್ನು ಸಹ ಮಂಗಳಕರ ಸಂಕೇತ ಎಂದು ಹೇಳಲಾಗುತ್ತದೆ. ಇದು ಮನೆಯಲ್ಲಿ ಲಕ್ಷ್ಮಿಯ ಆಗಮನದೊಂದಿಗೆ ಅದೃಷ್ಟದ ಬಾಗಿಲುಗಳು ಕೂಡ ತೆರೆಯಲಿವೆ. ಅಂತಹ ಮನೆಯಲ್ಲಿ ತಾಪತ್ರಯಗಳು ಕಳೆದು ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ