ಸಿಂಹ ರಾಶಿಗೆ ಸೂರ್ಯನ ಪ್ರವೇಶ: ಈ ರಾಶಿಯವರಿಗೆ ಅದೃಷ್ಟ

Surya Gochar 2022: ಗ್ರಹಗಳ ರಾಜ ಎಂದು ಪರಿಗಣಿಸಲಾಗಿರುವ ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಇಂದು ಅಂದರೆ ಆಗಸ್ಟ್ 17ರಂದು ಸೂರ್ಯನು ಕರ್ಕಾಟಕವನ್ನು ತೊರೆದು ಸಿಂಹರಾಶಿಗೆ ಪ್ರವೇಶಿಸುತ್ತಾನೆ. ಈ ಸಮಯವನ್ನು ಕೆಲವು ರಾಶಿಯವರಿಗೆ ತುಂಬಾ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.

Written by - Yashaswini V | Last Updated : Aug 17, 2022, 09:19 AM IST
  • ಆಗಸ್ಟ್ 17 ರಂದು ಬೆಳಿಗ್ಗೆ 07:37 ಕ್ಕೆ, ಸೂರ್ಯನು ಕರ್ಕ ರಾಶಿಯನ್ನು ತೊರೆದು ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ.
  • ಸೆಪ್ಟೆಂಬರ್ 17 ರವರೆಗೆ ಸೂರ್ಯನು ಇದೇ ರಾಶಿಯಲ್ಲಿ ಇರುತ್ತಾನೆ.
  • ಸಿಂಹ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದಾಗಿ ಕೆಲವು ರಾಶಿಯವರಿಗೆ ಭಾರೀ ಅದೃಷ್ಟ ಎಂದು ಹೇಳಲಾಗುತ್ತಿದೆ.
ಸಿಂಹ ರಾಶಿಗೆ ಸೂರ್ಯನ ಪ್ರವೇಶ: ಈ ರಾಶಿಯವರಿಗೆ ಅದೃಷ್ಟ  title=
Sun Transit Effect

Sun Transit 2022: ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತದೆ.  ಗ್ರಹಗಳ ರಾಜ ಎಂದು ಪರಿಗಣಿಸಲಾಗಿರುವ ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಇಂದು ಅಂದರೆ ಆಗಸ್ಟ್ 17ರಂದು ಸೂರ್ಯನು ಕರ್ಕಾಟಕವನ್ನು ತೊರೆದು ಸಿಂಹರಾಶಿಗೆ ಪ್ರವೇಶಿಸುತ್ತಾನೆ. ಅದರ ಪರಿಣಾಮವು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ಕಂಡುಬರುತ್ತದೆ. ಆದರೆ, ಕೆಲವು ರಾಶಿಯವರಿಗೆ ಈ ಸಮಯವನ್ನು ತುಂಬಾ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಗಸ್ಟ್ 17 ರಂದು ಬೆಳಿಗ್ಗೆ 07:37 ಕ್ಕೆ, ಸೂರ್ಯನು ಕರ್ಕ ರಾಶಿಯನ್ನು ತೊರೆದು ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಸೆಪ್ಟೆಂಬರ್ 17 ರವರೆಗೆ ಸೂರ್ಯನು ಇದೇ ರಾಶಿಯಲ್ಲಿ ಇರುತ್ತಾನೆ. ಸಿಂಹ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದಾಗಿ, ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ಕೆಲವು ಅಶುಭ ಪರಿಣಾಮಗಳು ಕಂಡುಬರುತ್ತವೆ. ಅದೇ ಸಮಯದಲ್ಲಿ, ಕೆಲವು ರಾಶಿಚಕ್ರ ಚಿಹ್ನೆಗಳು ಅದರಿಂದ ಪ್ರಚಂಡ ಪ್ರಯೋಜನವನ್ನು ಪಡೆಯುತ್ತವೆ. ಈ ಸಮಯದಲ್ಲಿ ಕೆಲವು ರಾಶಿಯವರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಹಣದ ಮಳೆ ಸುರಿಯಲಿದೆ ಎಂದು ಹೇಳಲಾಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...

ಇದನ್ನೂ ಓದಿ- ಶನಿದೇವನನ್ನು ಪೂಜಿಸುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

ಸಿಂಹ ರಾಶಿಗೆ ಸೂರ್ಯನ ಪ್ರವೇಶ: ಈ ರಾಶಿಚಕ್ರ ಚಿಹ್ನೆಗಳಿಗೆ ವಿಶೇಷ ಪ್ರಯೋಜನ:
ವೃಷಭ ರಾಶಿ:
ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರವು ವೃಷಭ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ಅವಧಿಯಲ್ಲಿ ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸುವ ಸಾಧ್ಯತೆಗಳಿವೆ. ಅದೇ ಸಮಯದಲ್ಲಿ, ಉದ್ಯೋಗ-ವ್ಯವಹಾರದಲ್ಲಿ ಖ್ಯಾತಿ ಹೆಚ್ಚಾಗಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. 

ಸಿಂಹ ರಾಶಿ: ಸೂರ್ಯ ಇಂದು ತನ್ನದೇ ಆದ ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಆದ್ದರಿಂದ, ಈ ರಾಶಿಚಕ್ರದ ಜನರಿಗೆ ಈ ಸಂಚಾರವು ತುಂಬಾ ಪ್ರಯೋಜನಕಾರಿಯಾಗಿದೆ. ಸಿಂಹ ರಾಶಿಯ ಜನರ ಪ್ರಭಾವ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಉನ್ನತಿಯ ಎಲ್ಲಾ ಸಾಧ್ಯತೆಗಳಿವೆ. ಜನರು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುತ್ತಾರೆ. ಅಲ್ಲದೆ, ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. 

ಕನ್ಯಾ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯವರಿಗೆ ಈ ಸಮಯ ತುಂಬಾ ಫಲಕಾರಿಯಾಗಲಿದೆ. ಸೂರ್ಯನ ಸಂಚಾರವು ನಿಮಗೆ ವಿದೇಶ ಪ್ರಯಾಣ ಯೋಗವನ್ನು ಉಂಟು ಮಾಡಬಹುದು. ಈ ಸಮಯದಲ್ಲಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭದ ಮೊತ್ತಗಳು ಕಂಡುಬರುತ್ತವೆ. ಸೂರ್ಯ ಸಂಚಾರವು ನಿಮಗೆ ಸರ್ಕಾರದಿಂದ ಅಥವಾ ವಿದೇಶದಿಂದ ಹಣವನ್ನು ನೀಡುತ್ತದೆ. 

ಇದನ್ನೂ ಓದಿ- ಮುಂದಿನ ನಾಲ್ಕು ತಿಂಗಳು ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ

ಧನು ರಾಶಿ: ಸೂರ್ಯ ಸಂಕ್ರಮಣ  ಧನು ರಾಶಿಯವರಿಗೆ ಕೂಡ ಮಂಗಳಕರವಾಗಿದೆ. ವೃತ್ತಿ ರಂಗದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಕಾಣಬಹುದು. ಸೂರ್ಯದೇವನ ಕೃಪೆಯಿಂದ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ. 

ಕುಂಭ  ರಾಶಿ: ಕುಂಭ ರಾಶಿಯವರಿಗೂ ಈ ಸಮಯ ಒಳ್ಳೆಯದಾಗಲಿದೆ. ಸೂರ್ಯನ ರಾಶಿ ಬದಲಾವಣೆಯಿಂದ ಕುಂಭ ರಾಶಿಯವರಿಗೆ ಲಾಭವೂ ಆಗಲಿದೆ. ಈ ಸಮಯದಲ್ಲಿ ಶತ್ರುಗಳ ವಿರುದ್ಧ ಜಯ ಪ್ರಾಪ್ತಿಯಾಗಲಿದೆ. ಸಮಾಜದಲ್ಲಿ ಗೌರವ- ಕೀರ್ತಿ ಹೆಚ್ಚಾಗುವುದು.  

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News