close

News WrapGet Handpicked Stories from our editors directly to your mailbox

INDvsNZ: ಕಿವೀಸ್ ವಿರುದ್ಧ 7 ವಿಕೆಟ್​​ಗಳ ಗೆಲುವು ಸಾಧಿಸಿದ ಭಾರತ

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ನ್ಯೂಜಿಲೆಂಡ್​​ಗೆ ತವರಿನಲ್ಲೇ ಭಾರೀ ಮುಖಭಂಗವಾಗಿದೆ.  

Yashaswini V Yashaswini V | Updated: Jan 28, 2019 , 03:55 PM IST
INDvsNZ: ಕಿವೀಸ್ ವಿರುದ್ಧ 7 ವಿಕೆಟ್​​ಗಳ ಗೆಲುವು ಸಾಧಿಸಿದ ಭಾರತ
Pic Courtesy: PTI

ಬೇ ಓವಲ್‌: ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ನ್ಯೂಜಿಲೆಂಡ್ ವಿರುದ್ಧದ ಮೂರನೇ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 7 ವಿಕೆಟ್​​ಗಳ ಗೆಲುವು ಸಾಧಿಸಿದ್ದು, ಈ ಮೂಲಕ 5 ಏಕದಿನ ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ವಶ ಪಡಿಸಿಕೊಂಡಿದೆ. ಭಾರತದ ಹ್ಯಾಟ್ರಿಕ್ ಗೆಲುವಿನಿಂದಾಗಿ ನ್ಯೂಜಿಲೆಂಡ್​​ಗೆ ತವರಿನಲ್ಲೇ ಭಾರೀ ಮುಖಭಂಗವಾಗಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆರಂಭಿಸಿದ ಕಿವೀಸ್​ ಪಡೆ ರಾಸ್​ ಟೇಲರ್​(93) ಹಾಗೂ ಟಾಮ್​ ಲಾಥಮ್​(51) ಬ್ಯಾಟಿಂಗ್​ ನೆರವಿನಿಂದ 49 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 243 ರನ್​ ಕಲೆ ಹಾಕಿಟು. 

ಆತಿಥೇಯ ನ್ಯೂಜಿಲೆಂಡ್‌ ನೀಡಿದ 244 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ 7 ಓವರ್‌ಗಳು ಬಾಕಿಯಿರುವಂತೆ 7 ವಿಕೆಟ್‌ಗಳ ಅಂತರದಿಂದ ಬಗ್ಗು ಬಡಿದಿದೆ. ಭಾರತ ರೋಹಿತ್ ಶರ್ಮಾ (62), ವಿರಾಟ್ ಕೊಹ್ಲಿ (60), ಶಿಖರ್‌ ಧವನ್ ‌(28), ಅಂಬಟಿ ರಾಯಡು (ಅಜೇಯ 40) ಮತ್ತು ದಿನೇಶ್ ಕಾರ್ತಿಕ್ (ಅಜೇಯ 38) ಅವರ ಭರ್ಜರಿ ಆಟದ ನೆರವಿನಿಂದ 43 ಓವರುಗಳಲ್ಲಿ 3 ವಿಕೆಟುಗಳನ್ನು ಕಳೆದುಕೊಂಡು ಗೆಲುವಿನ ಗುರಿ ತಲುಪಿತು. 

ಈ ಮೂಲಕ ಕಿವೀಸ್ ತಂಡವನ್ನು 7 ವಿಕೆಟ್ ಗಳಿಂದ ಭರ್ಜರಿಯಾಗಿ ಮಣಿಸುವ ಮೂಲಕ ಟೀಂ ಇಂಡಿಯಾ ಕಿವೀಸ್ ನೆಲದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.