ನವದೆಹಲಿ: ನಟಿ ಅಥಿಯಾ ಶೆಟ್ಟಿ ಮತ್ತು ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ ಮದುವೆಯ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳ ಮದುವೆ ಮಂಟಪ ಸಿಂಗಾರಗೊಂಡಿದ್ದು, ಮನೆಯಲ್ಲಿ ಮಂಗಳವಾದ್ಯ ಮೊಳಗಲಾರಂಭಿಸಿದೆ. ಏತನ್ಮಧ್ಯೆ, ಅತಿಯಾ ಶೆಟ್ಟಿ ಮತ್ತು ಕೆ.ಎಲ್.ರಾಹುಲ್ ಮದುವೆಯಲ್ಲಿ ನೋ ಫೋನ್ ನೀತಿ ಅನುಸರಿಸುವಂತೆ ಅತಿಥಿಗಳಿಗೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ. ವರದಿಗಳ ಪ್ರಕಾರ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯಂತೆಯೇ ಅಥಿಯಾ-ಕೆ.ಎಲ್.ರಾಹುಲ್ ಮದುವೆಯಲ್ಲೂ ಫೋನ್ ಬಳಕೆ ನಿಷೇಧಿಸಲಾಗಿದೆ.
ಇದನ್ನೂ ಓದಿ: Yash 19 : ʼಹೊಸ ಸಿನಿಮಾ ಅನೌನ್ಸ್ ಮಾಡಿ ಬಾಸ್ʼ.. ಯಶ್‌ಗೆ ಪತ್ರ ಬರೆದ ಫ್ಯಾನ್ಸ್..!
ಅಥಿಯಾ-ರಾಹುಲ್ ಮದುವೆಯಲ್ಲಿ ಫೋಟೋ ಕ್ಲಿಕ್ಕಿಸುವಂತಿಲ್ಲ!
ವರದಿಗಳ ಪ್ರಕಾರ, ಆಲಿಯಾ ಭಟ್-ರಣಬೀರ್ ಕಪೂರ್ ಮದುವೆಯಂತೆ, ಅಥಿಯಾ ಮತ್ತು ರಾಹುಲ್ ಮದುವೆಯಲ್ಲಿ ಅತಿಥಿಗಳು ಫೋನ್ ಬಳಕೆ ಮತ್ತು ಫೋಟೋ ಕ್ಲಿಕ್ಲಿಸುವಂತಿಲ್ಲ. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬರುವ ಮುನ್ನವೇ ಅತಿಥಿಗಳ ಫೋನ್‌ಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ. ಇದಲ್ಲದೆ ಅತಿಥಿಗಳು ಫೋಟೋಗಳು ಅಥವಾ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಅನುಮತಿ ಇರುವುದಿಲ್ಲ. ಸುನೀಲ್ ಶೆಟ್ಟಿ ಮಗಳ ಮದುವೆಯಲ್ಲಿ ಮಾಧ್ಯಮದವರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಮದುವೆ ಬಗ್ಗೆ ಶೆಟ್ಟಿ ಕುಟುಂಬವಾಗಲಿ ಅಥವಾ ಕ್ರಿಕೆಟಿಗನ ಕುಟುಂಬವಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವೆಂದು ತಿಳಿದುಬಂದಿದೆ.
ಇದನ್ನೂ ಓದಿ: ʼಅಭಿರಾಮಚಂದ್ರʼನ ಫಸ್ಟ್ ಲುಕ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್..!
ಮದುವೆ ಚಿಕ್ಕದಾದರೂ ಆರತಕ್ಷತೆ ಅದ್ಧೂರಿ!
ಜನವರಿ 23ರಂದು ಅಥಿಯಾ ಶೆಟ್ಟಿ ಮತ್ತು ಕೆ.ಎಲ್.ರಾಹುಲ್ ವಿವಾಹ ನಡೆಯಲಿದೆ. ಮದುವೆಗೆ ಆತ್ಮೀಯ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಆಗಮಿಸಿದ್ದಾರೆಂದು ವರದಿಯಾಗಿದೆ. ವರದಿಗಳ ಪ್ರಕಾರ, ಅಥಿಯಾ ಮತ್ತು ರಾಹುಲ್ ಮದುವೆಗೆ ವಿಶೇಷವಾಗಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ಹಾರ್ದಿಕ್ ಪಾಂಡ್ಯ, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರನ್ನು ಆಹ್ವಾನಿಸಲಾಗಿದೆ. ಕೆಲವೇ ಅತಿಥಿಗಳು ಮದುವೆಗೆ ಹಾಜರಾಗಲಿದ್ದಾರೆ. ಆದರೆ ಬಳಿಕ ಈ ಜೋಡಿಯ ಅದ್ದೂರಿ ಆರತಕ್ಷತೆ ನಡೆಯಲಿದೆ. ಇದಲ್ಲದೆ ಐಪಿಎಲ್ ಟೂರ್ನಿ ಬಳಿಕ ಅಥಿಯಾ-ರಾಹುಲ್ ಸ್ನೇಹಿತರಿಗಾಗಿ ದೊಡ್ಡ ಪಾರ್ಟಿ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.