Tokyo Paralympics: ಖಾತೆ ತೆರೆದ ಭಾರತ; ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾವಿನಾ ಪಟೇಲ್

ಭಾವಿನಾ ಪಟೇಲ್ ಸೆಮಿಫೈನಲ್​ ಪಂದ್ಯದಲ್ಲಿ ಅವರು ವಿಶ್ವದ ನಂ.3 ಆಟಗಾರ್ತಿಯನ್ನು 3-2 ಸೆಟ್​ಗಳಿಂದ ಸೋಲುಣಿಸಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದರು.

Written by - Puttaraj K Alur | Last Updated : Aug 29, 2021, 10:34 AM IST
  • ಟೋಕಿಯೋದಲ್ಲಿ ವಿಶೇಷ ಚೇತನರಿಗಾಗಿ ನಡೆಸಲಾಗುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆ
  • ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್
  • ಚೀನೀ ಆಟಗಾರ್ತಿ ಝೌ ಯಿಂಗ್ ವಿರುದ್ಧ 7-11, 7-11, 6-11 ನೇರ ಸೆಟ್​ಗಳಿಂದ ಸೋಲು ಕಂಡ ಭಾವಿನಾ
Tokyo Paralympics: ಖಾತೆ ತೆರೆದ ಭಾರತ; ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾವಿನಾ ಪಟೇಲ್   title=
ಬೆಳ್ಳಿ ಪದಕ ಗೆದ್ದ ಭಾವಿನಾ ಪಟೇಲ್ (Photo Courtesy: @DNA)

ನವದೆಹಲಿ: ಟೋಕಿಯೋದಲ್ಲಿ ವಿಶೇಷ ಚೇತನರಿಗಾಗಿ ನಡೆಸಲಾಗುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ(Tokyo Paralympics 2020)ದಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಭಾನುವಾರ(ಆಗಸ್ಟ್ 29) ನಡೆದ ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ ಹಣಹಾಹಣಿಯಲ್ಲಿ ವಿಶ್ವದ ನಂ.1 ಚೀನೀ ಆಟಗಾರ್ತಿ ಝೌ ಯಿಂಗ್ ವಿರುದ್ಧ 7-11, 7-11, 6-11 ನೇರ ಸೆಟ್​ಗಳಿಂದ ಸೋಲು ಕಂಡ ಭಾವಿನಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ವಿಶ್ವದ 12ನೇ ಶ್ರೇಯಾಂಕಿತೆ ಭಾವಿನಾ ಪಟೇಲ್(Bhavina Patel) ಬಲಿಷ್ಠ ಚೀನೀ ಎದುರಾಳಿ ಎದುರು ಗೆಲ್ಲುವ ನಿರೀಕ್ಷೆಇರಲಿಲ್ಲ. ಸೆಮಿಫೈನಲ್​ ಪಂದ್ಯದಲ್ಲಿ ಅವರು ವಿಶ್ವದ ನಂ.3 ಆಟಗಾರ್ತಿಯನ್ನು 3-2 ಸೆಟ್​ಗಳಿಂದ ಸೋಲುಣಿಸಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದರು. ಹೀಗಾಗಿ ಫೈನಲ್ ನಲ್ಲಿಯೂ ಅವರು ಉತ್ತಮ ಪ್ರದರ್ಶನ ನೀಡುತ್ತಾರೆಂಬ ನಿರೀಕ್ಷೆ ಇತ್ತು. ಸ್ವತಃ ಭಾವಿನಾ ಅವರೇ ಫೈನಲ್​ನಲ್ಲಿ ನಾನು ಉತ್ತಮ ಪ್ರದರ್ಶನ ನೀಡಿದರೆ ಚಿನ್ನದ ಪದಕ ಗೆಲ್ಲುತ್ತೇನೆಂದು ಹೇಳಿಕೊಂಡಿದ್ದರು. ಹೀಗಾಗಿ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಐತಿಹಾಸಿಕ ಚಿನ್ನದ ಪದಕದ ನಿರೀಕ್ಷೆಯಲ್ಲಿತ್ತು.  

ಇದನ್ನೂ ಓದಿ: ಸ್ಕೋರ್ ಬೋರ್ಡ್ ಒತ್ತಡದಿಂದಾಗಿ ತಂಡದ ಬ್ಯಾಟಿಂಗ್ ವಿಫಲವಾಯಿತು -ವಿರಾಟ್ ಕೊಹ್ಲಿ

ಝೌ ಯಿಂಗ್(Zhou Ying) ಎದುರು ಪ್ರತಿರೋಧ ತೋರದ ಭಾವಿನಾ ಕೇವಲ 19 ನಿಮಿಷದಲ್ಲಿ ಸೋಲೊಪ್ಪಿಕೊಂಡು ನಿರಾಸೆ ಅನುಭವಿಸಿದರು. ನೇರ ಸೆಟ್ ಗಳಲ್ಲಿ ಗೆಲುವು ಸಾಧಿಸಿದ ಚೀನೀ(China) ಆಟಗಾರ್ತಿ ಚಿನ್ನದ ಪದಕಕ್ಕೆ ಮುತ್ತಿಕ್ಕಿ ಸಂಭ್ರಮಿಸಿದರು. ಪ್ರಾರಂಭದಿಂದ ಪಂದ್ಯ ಗೆಲ್ಲುವವರೆಗೂ ಚೀನೀ ಆಟಗಾರ್ತಿ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. ಆದರೆ ಭಾವಿನಾ ಹೆಚ್ಚು ಪ್ರತಿರೋಧ ಒಡ್ಡಲು ಸಾಧ್ಯವಾಗಲಿಲ್ಲ. 34 ವರ್ಷದ ಗುಜರಾತ್ ಮೂಲದ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಭಾರತಕ್ಕೆ ಚಿನ್ನದ ಪದಕ ತಂದುಕೊಡುತ್ತಾರೆಂದು ಕೋಟ್ಯಂತರ ಭಾರತೀಯರು ಕಾತುರದಿಂದ ಕಾಯುತ್ತಿದ್ದರು. ಆದರೆ ಅವರು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.  

ಇದನ್ನೂ ಓದಿ: India vs England, 3rd Test: ಇಂಗ್ಲೆಂಡ್ ತಂಡಕ್ಕೆ ಇನಿಂಗ್ಸ್ ಸಹಿತ 76 ರನ್ ಗಳ ಜಯ

ಚೀನಾದ ಪ್ಯಾಡ್ಲರ್ ಝೌ ಯಿಂಗ್ 6 ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆಯಾಗಿದ್ದಾರೆ. ಇದರಲ್ಲಿ 1 ಬೆಳ್ಳಿ ಮತ್ತು 5 ಚಿನ್ನದ ಪದಕಗಳು ಸೇರಿವೆ. ಅವರು 14 ಏಷ್ಯನ್ ಚಾಂಪಿಯನ್‌ಶಿಪ್ ಪದಕಗಳನ್ನು ಮತ್ತು 5 ಏಷ್ಯನ್ ಗೇಮ್ಸ್ ಚಿನ್ನದ ಪದಕಗಳನ್ನು ಗೆದ್ದ ಏಷ್ಯಾದ ಅತ್ಯುತ್ತಮ ಪ್ಯಾಡ್ಲರ್ ಗಳಲ್ಲಿ ಒಬ್ಬರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News