Athiya Shetty KL Rahul wedding: ರಾಹುಲ್ ಅಥಿಯಾಗೂ ಮೊದಲು ಸಪ್ತಪದಿ ತುಳಿದ ಕ್ರಿಕೆಟ್-ಬಾಲಿವುಡ್ ಸ್ಟಾರ್ ಜೋಡಿಗಳಿವರು

Bollywood and Cricket Relationship: ಶರ್ಮಿಳಾ ಟ್ಯಾಗೋರ್ ಮತ್ತು ಟೈಗರ್ ಪಟೌಡಿಯಿಂದ ಹಿಡಿದು ಸರ್ಬಿಯಾದ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯವರೆಗೆ ಅನೇಕ ಪ್ರಸಿದ್ಧ ಜೋಡಿಗಳಿವೆ. ಬಾಲಿವುಡ್ ಮತ್ತು ಟೀಮ್ ಇಂಡಿಯಾ ನಡುವಿನ ಸಂಬಂಧದ ಒಂದು ನೋಟ ಇಲ್ಲಿದೆ.

Written by - Bhavishya Shetty | Last Updated : Jan 23, 2023, 06:15 AM IST
    • ಅನೇಕ ಬಾಲಿವುಡ್ ನಟಿಯರ ಹೆಸರುಗಳು ಜೊತೆ ಟೀಮ್ ಇಂಡಿಯಾದ ಕ್ರಿಕೆಟಿಗರ ಹೆಸರು ಕೇಳಿ ಬಂದಿದ್ದು ಉಂಟು
    • ಬಾಲಿವುಡ್ ಮತ್ತು ಕ್ರಿಕೆಟ್ ನಡುವೆ ಬಹಳ ಅವಿನಾಭಾವ ಸಂಬಂಧವಿದೆ
    • ಬಾಲಿವುಡ್ ಮತ್ತು ಟೀಮ್ ಇಂಡಿಯಾ ನಡುವಿನ ಸಂಬಂಧದ ಒಂದು ನೋಟ ಇಲ್ಲಿದೆ
Athiya Shetty KL Rahul wedding: ರಾಹುಲ್ ಅಥಿಯಾಗೂ ಮೊದಲು ಸಪ್ತಪದಿ ತುಳಿದ ಕ್ರಿಕೆಟ್-ಬಾಲಿವುಡ್ ಸ್ಟಾರ್ ಜೋಡಿಗಳಿವರು title=
KL Rahul

Athiya Shetty KL Rahul Marriage: ಬಾಲಿವುಡ್ ಮತ್ತು ಕ್ರಿಕೆಟ್ ನಡುವೆ ಬಹಳ ಅವಿನಾಭಾವ ಸಂಬಂಧವಿದೆ. ನಟಿಯರು ಮತ್ತು ಕ್ರಿಕೆಟಿಗರ ನಡುವಿನ ಪ್ರಣಯ ಅಥವಾ ಮದುವೆ ಹೊಸ ವಿಷಯವಲ್ಲ. ರಾಹುಲ್, ಆಥಿಯಾ ಶೆಟ್ಟಿಗಿಂತ ಮೊದಲು, ಅನೇಕ ಬಾಲಿವುಡ್ ನಟಿಯರ ಹೆಸರುಗಳು ಜೊತೆ ಟೀಮ್ ಇಂಡಿಯಾದ ಕ್ರಿಕೆಟಿಗರ ಹೆಸರು ಕೇಳಿ ಬಂದಿದ್ದು ಉಂಟು. ಕೆಲವೊಮ್ಮೆ ಡೇಟಿಂಗ್ ಬಗ್ಗೆ ಮಾತನಾಡಿದರೆ, ಇನ್ನೂ ಕೆಲವರು ಮದುವೆಯ ಬಗ್ಗೆಯೂ ಮಾತನಾಡಿದ್ದರು.

ಶರ್ಮಿಳಾ ಟ್ಯಾಗೋರ್ ಮತ್ತು ಟೈಗರ್ ಪಟೌಡಿಯಿಂದ ಹಿಡಿದು ಸರ್ಬಿಯಾದ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯವರೆಗೆ ಅನೇಕ ಪ್ರಸಿದ್ಧ ಜೋಡಿಗಳಿವೆ. ಬಾಲಿವುಡ್ ಮತ್ತು ಟೀಮ್ ಇಂಡಿಯಾ ನಡುವಿನ ಸಂಬಂಧದ ಒಂದು ನೋಟ ಇಲ್ಲಿದೆ.

ಇದನ್ನೂ ಓದಿ: KL Rahul Tattoos: ಕೆಎಲ್ ರಾಹುಲ್ ದೇಹದಲ್ಲಿದೆ 9 ಟ್ಯಾಟೂಗಳು: ಒಂದೊಂದಕ್ಕೂ ಇದೆಯಂತೆ ವಿಭಿನ್ನ ಅರ್ಥ!

ಹಾರ್ದಿಕ್ ಪಾಂಡ್ಯ-ನತಾಶಾ ಸ್ಟಾಂಕೋವಿಕ್: ಇಬ್ಬರೂ ತಿಂಗಳ ಕಾಲ ಡೇಟಿಂಗ್ ಮಾಡಿ ನಂತರ 2020 ರಲ್ಲಿ ವಿವಾಹವಾದರು. ಆದರೆ ವಿಶೇಷವೆಂದರೆ ಇಬ್ಬರೂ ಮದುವೆಗೂ ಮುನ್ನವೇ ಪೋಷಕರಾಗಿದ್ದರು. ಸಪ್ತಪದಿ ತುಳಿಯುವ ಮೊದಲೇ ಜೋಡಿ ಈ ವಿಷಯವನ್ನು ಬಹಿರಂಗಗೊಳಿಸಿದ್ದರು.

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ: ಇಬ್ಬರೂ 2013 ರಲ್ಲಿ ಶಾಂಪೂ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಭೇಟಿಯಾಗಿದ್ದು, ಬಳಿಕ ಅದು ಪ್ರೀತಿಗೆ ಮಾರ್ಪಾಡಾಯಿತು. 2017 ರಲ್ಲಿ ಈ ಜೋಡಿ ಇಟಲಿಯಲ್ಲಿ ವಿವಾಹವಾದರು. ಇದರಲ್ಲಿ ಆಯ್ದ ಸ್ನೇಹಿತರು ಮತ್ತು ಸಂಬಂಧಿಕರು ಭಾಗವಹಿಸಿದ್ದರು. ಈ ಜೋಡಿ ಮುದ್ದಾದ ಮಗಳಿದ್ದಾಳೆ.

ಯುವರಾಜ್ ಸಿಂಗ್-ಹೇಜೆಲ್ ಕೀಚ್: ಯುವರಾಜ್ ಸಿಂಗ್ ಅವರು ಕ್ರಿಕೆಟ್ ಮೈದಾನದಲ್ಲಿ ಎಷ್ಟು ಆಕರ್ಷಕ ಆಟಗಾರರಾಗಿದ್ದರೋ ಅವರ ಹೊರಗಿನ ಜೀವನವೂ ಅಷ್ಟೇ ಜನಪ್ರಿಯವಾಗಿತ್ತು. ನಟಿ ಹೇಜಲ್ ಕೀಚ್ ಅವರಿಗಿಂತ ಮುಂಚೆಯೇ, ಅವರ ಹೆಸರು ಕೆಲವು ಬಾಲಿವುಡ್ ಸುಂದರಿಯರೊಂದಿಗೆ ಸೇರಿಕೊಂಡಿತ್ತು. ಅವರು 2015 ರಲ್ಲಿ ಬಾಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ನಂತರ 2016 ರಲ್ಲಿ ಕೀಚ್ ಅವರನ್ನು ವಿವಾಹವಾದರು.

ಜಹೀರ್ ಖಾನ್-ಸಾಗರಿಕಾ ಘಾಟ್ಗೆ: ಜಹೀರ್ ಖಾನ್ ಮತ್ತು ಚಕ್ ದೇ ಇಂಡಿಯಾ ನಟಿ ಸಾಗರಿಕಾ ಘಾಟ್ಗೆ ಯುವರಾಜ್-ಹೆಜಲ್ ಅವರ ವಿವಾಹದ ಆರತಕ್ಷತೆಗೆ ಒಟ್ಟಿಗೆ ಆಗಮಿಸಿದ್ದರು. ಅಲ್ಲಿಂದ ಅವರ ಪ್ರೇಮ ವಿಚಾರ ರಹಸ್ಯವಾಗಿಯೇ ಇತ್ತು. ಇಬ್ಬರೂ ಅಂತಿಮವಾಗಿ ನವೆಂಬರ್ 2017 ರಲ್ಲಿ ವಿವಾಹವಾದರು.

ಹರ್ಭಜನ್ ಸಿಂಗ್-ಗೀತಾ ಬಸ್ರಾ: ಗೀತಾ ಬಾಸ್ರಾ ಬಾಲಿವುಡ್‌ನಲ್ಲಿ ತನ್ನ ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತಿದ್ದ ದಿನಗಳಲ್ಲಿ, ಹರ್ಭಜನ್ ಸಿಂಗ್ ಅವರನ್ನು ಪ್ರೀತಿಸುತ್ತಿದ್ದರು. ದೀರ್ಘಕಾಲದ ಗೆಳೆತನದ ಸುದ್ದಿಯ ನಡುವೆ 2015 ರಲ್ಲಿ ಅವರ ಮದುವೆಯ ಸುದ್ದಿ ಬಂದಿತು. ನಂತರ ಇಬ್ಬರೂ ತಮ್ಮ ಸಂಬಂಧವನ್ನು ಬಹಿರಂಗವಾಗಿ ಹೇಳಿಕೊಂಡರು.

ಮೊಹಮ್ಮದ್ ಅಜರುದ್ದೀನ್-ಸಂಗೀತಾ ಬಿಜಲಾನಿ: ಟೀಂ ಇಂಡಿಯಾದ ನಾಯಕರಾಗಿದ್ದ ಅಜರುದ್ದೀನ್ ಅವರು 1985ರಲ್ಲಿ ಜಾಹೀರಾತಿನ ಚಿತ್ರೀಕರಣದ ವೇಳೆ ಸಂಗೀತಾ ಬಿಜಲಾನಿ ಅವರನ್ನು ನೋಡಿ ಪ್ರೀತಿಯಲ್ಲಿ ಬಿದ್ದಿದ್ದರು. ಆಗ ಅವರಿಗೆ ವಿವಾಹವಾಗಿತ್ತು. ಇಬ್ಬರ ನಡುವೆ ಪ್ರಣಯ ಪ್ರಾರಂಭವಾಯಿತು, ಅಜರ್ ಮೊದಲ ಪತ್ನಿಗೆ ವಿಚ್ಛೇದನ ನೀಡಿ, ಇಬ್ಬರೂ 1996 ರಲ್ಲಿ ವಿವಾಹವಾದರು. ಆದರೆ 2010 ರಲ್ಲಿ ಈ ಪ್ರೇಮಕಥೆ ಕೂಡ ಕೊನೆಗೊಂಡಿತು.

ಮೊಹ್ಸಿನ್ ಖಾನ್-ರೀನಾ ರಾಯ್: ಬಾಲಿವುಡ್ ನಟಿ ರೀನಾ ರಾಯ್ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್ 1983 ರಲ್ಲಿ ವಿವಾಹವಾದರು. ಮದುವೆ ಬಳಿಕ ಪಾಕಿಸ್ತಾನಕ್ಕೆ ರೀನಾ ತೆರಳಿದರೂ ಸಹ ಇವರ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯಲಿಲ್ಲ. 1990 ರ ದಶಕದಲ್ಲಿ ಇಬ್ಬರೂ ಬೇರ್ಪಟ್ಟರು. ರೀನಾ ಭಾರತಕ್ಕೆ ಮರಳಿದರು.

ಇದನ್ನೂ ಓದಿ: Virat Kohli: ಪತಿಯ ಸಾಧನೆಗೆ ಪತ್ನಿಯ ಮೆಚ್ಚುಗೆ: ಶತಕ ವೀರ ಕೊಹ್ಲಿಯ ಪೋಸ್ಟ್ ಹಾಕಿ ರೊಮ್ಯಾಂಟಿಕ್ ವಿಶ್ ಮಾಡಿದ ಅನುಷ್ಕಾ

ಮನ್ಸೂರ್ ಅಲಿ ಖಾನ್ ಪಟೌಡಿ-ಶರ್ಮಿಳಾ ಟ್ಯಾಗೋರ್: ಇದು ಬಾಲಿವುಡ್ ಮತ್ತು ಟೀಮ್ ಇಂಡಿಯಾದ ಆರಂಭಿಕ ಪ್ರೇಮಕಥೆ. ಶರ್ಮಿಳಾ ಮತ್ತು ಟೈಗರ್ ಪಟೌಡಿ 1965 ರಲ್ಲಿ ಭೇಟಿಯಾಗಿದ್ದು, ನಂತರ ಇವರ ಸ್ನೇಹ ಪ್ರಣಯವಾಗಿ ಮಾರ್ಪಾಡಾಯಿತು, ಕಾರಣಾಂತರಗಳಿಂದ ಇಬ್ಬರ ಮನೆಯವರು ಮದುವೆ ನಡೆಸಲು ಸಿದ್ಧರಿರಲಿಲ್ಲ. ಆದರೆ ಇಬ್ಬರೂ ಒಟ್ಟಿಗೆ ಇದ್ದರು. ಅಂತಿಮವಾಗಿ 1969 ರಲ್ಲಿ ಅವರು ವಿವಾಹವಾದರು. ಮದುವೆಯ ನಂತರವೂ ಶರ್ಮಿಳಾ ಬಾಲಿವುಡ್‌ನಲ್ಲಿ ಸುದೀರ್ಘ ಕಾಲ ನಟಿಸಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News