ನವದೆಹಲಿ: ಐಪಿಎಲ್ ಈಗ ಪ್ರತಿಭಾನ್ವಿತ ಆಟಗಾರರನ್ನು ಹೆಕ್ಕಿ ತೆಗೆಯುವಲ್ಲಿ ಮಹತ್ವದ ಪಾತ್ರ ವಹಿಸಿದೆ.ಇದರ ಭಾಗವಾಗಿ ಈಗ ಇಬ್ಬರು ದೇಸಿಯ ಆಟಗಾರರು ಗಮನ ಸೆಳೆದಿದ್ದಾರೆ.
ಅವರಲ್ಲಿ ಪ್ರಮುಖವಾಗಿ ನವದೀಪ್ ಸೈನಿ ಮತ್ತು ಪ್ರಸಿದ್ ಕೃಷ್ಣಾ ಗಂಟೆಗೆ 145 ಕಿಮೀ ವೇಗವಾಗಿ ಬೌಲನ್ನು ಎಸೆಯುವುದರ ಮೂಲಕ ಆಷ್ಟ್ರೇಲಿಯಾದ ಮಾಜಿ ಆಟಗಾರ ಬ್ರೆಟ್ ಲಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. "ಪ್ರಸಿದ್ ಕೃಷ್ಣಾ 145 ಕಿಮೀ ರಷ್ಟು ಬೌಲಿಂಗ್ ವೇಗವನ್ನು ಈ ಐಪಿಎಲ್ ನಲ್ಲಿ ಎಸೆದಿದ್ದಾರೆ.ಇನ್ನು ನವದೀಪ ಸೈನಿ ಮತ್ತೊಬ್ಬ ಭರವಸೆಯ ಬೌಲರ್ ಆಗಿದ್ದಾರೆ.ಸದ್ಯ ಭಾರತ ತಂಡವು ಬೌಲರ್ ಗಳನ್ನು ಹೊಂದಿದೆ ಎಂದು ಲಿ ತಿಳಿಸಿದ್ದಾರೆ.
ಇನ್ನೊಂದೆಡೆಗೆ ಜಸ್ಪ್ರೀತ್ ಬುಮ್ರಾ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಲೀ ಅವರದ್ದು ಕ್ಲಾಸ್ ಬೌಲಿಂಗ್ ಎಂದು ಹೊಗಳಿದ್ದಾರೆ." ಸದ್ಯ ಭಾರತದ ತಂಡವು ಉತ್ತಮ ವೇಗದ ಬೌಲರ್ ಗಳನ್ನು ಹೊಂದಿದೆ. ಕೊನೆಗೂ ಭಾರತೀಯ ಬೌಲರ್ ಗಳು 145 ಕಿಮೀ ವೇಗದ ಬೌಲಿಂಗ್ ಮಾಡುವಲ್ಲಿ ಸಫಲರಾಗಿದ್ದಾರೆ.ಇದು ಭಾರತ ತಂಡದ ಮಟ್ಟಿಗೆ ನಿಜಕ್ಕೂ ಉತ್ತಮ ಸಂಗತಿ "ಎಂದು ಲಿ ಹೇಳಿದ್ದಾರೆ.