364 ರನ್‌, 847 ಎಸೆತ, 13 ಗಂಟೆ ಬ್ಯಾಟಿಂಗ್‌... ಕ್ರೀಸ್‌ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್‌ ಜಗತ್ತು!

Unbreakable Record: ಈ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್‌ʼನಲ್ಲಿ ಉಳಿದು ಟೆಸ್ಟ್‌ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆಯನ್ನು ನಿರ್ಮಿಸಿದ್ದಾನೆ. ಅಷ್ಟಕ್ಕೂ ಆತ ಬೇರಾರು ಅಲ್ಲ, ಲಿಯೊನಾರ್ಡ್ ಹಟ್ಟನ್.  

Written by - Bhavishya Shetty | Last Updated : Sep 7, 2024, 08:23 AM IST
    • ಅದೆಷ್ಟೋ ದಾಖಲೆಗಳನ್ನು ಸೃಷ್ಟಿಸಿದ ಎಂತೆಂಥ ಕ್ರಿಕೆಟ್‌ ದಿಗ್ಗಜರನ್ನು ನೋಡಿರುತ್ತೇವೆ
    • 13 ಗಂಟೆಗಳ ಕಾಲ ಕ್ರೀಸ್‌ʼನಲ್ಲಿ ಉಳಿದು ಟೆಸ್ಟ್‌ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆಯನ್ನು ನಿರ್ಮಿಸಿದ್ದಾನೆ
    • ಓವಲ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಪರಸ್ಪರ ಪೈಪೋಟಿ ನಡೆಸುತ್ತಿದ್ದವು
364 ರನ್‌, 847 ಎಸೆತ, 13 ಗಂಟೆ ಬ್ಯಾಟಿಂಗ್‌... ಕ್ರೀಸ್‌ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್‌ ಜಗತ್ತು! title=
File Photo

Unbreakable Record: ಅದೆಷ್ಟೋ ದಾಖಲೆಗಳನ್ನು ಸೃಷ್ಟಿಸಿದ ಎಂತೆಂಥ ಕ್ರಿಕೆಟ್‌ ದಿಗ್ಗಜರನ್ನು ನೋಡಿರುತ್ತೇವೆ. ಆದರೆ ಈ ದಾಖಲೆ ಮಾತ್ರ ಇದುವರೆಗೆ ಯಾವೊಬ್ಬ ಕ್ರಿಕೆಟಿಗನಿಂದ ಮುಟ್ಟಲು ಸಾಧ್ಯವಾಗಿಲ್ಲ. ಟೆಸ್ಟ್‌ʼನಲ್ಲಿ ಒಂದೇ ಒಂದು ಸಿಕ್ಸರ್ ಕೂಡ ಹೊಡೆಯದೆ ಬೌಲರ್‌ʼಗಳಿಗೆ ‘ರಕ್ತಕಣ್ಣೀರು ಸುರಿಸುವಂತೆ ಮಾಡಿದ ಆ ಬ್ಯಾಟ್ಸ್‌ಮನ್ ಯಾರೆಂಬುದನ್ನು ಮುಂದೆ ತಿಳಿಯೋಣ.

ಇದನ್ನೂ ಓದಿ: ಐಪಿಎಲ್‌ 2025ರಲ್ಲಿ ಈ ತಂಡದ ಹೆಡ್‌ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಅಧಿಕೃತ: ಆ ಲಕ್ಕಿ ಟೀಂ ಯಾವುದು?

ಈ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್‌ʼನಲ್ಲಿ ಉಳಿದು ಟೆಸ್ಟ್‌ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆಯನ್ನು ನಿರ್ಮಿಸಿದ್ದಾನೆ. ಅಷ್ಟಕ್ಕೂ ಆತ ಬೇರಾರು ಅಲ್ಲ, ಲಿಯೊನಾರ್ಡ್ ಹಟ್ಟನ್.

 1938ರಲ್ಲಿ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಪರಸ್ಪರ ಪೈಪೋಟಿ ನಡೆಸುತ್ತಿದ್ದವು. ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅಂದು ಆಂಗ್ಲರ ಪಡೆಯಿಂದ ಲಿಯೊನಾರ್ಡ್ ಹಟ್ಟನ್ ಓಪನಿಂಗ್‌ʼಗೆ ಬಂದರು. ಬಂದ ಬಳಿಕ ಕ್ರೀಸ್‌ ಬಿಟ್ಟು ಕದಲದ ಈ ದಾಂಡಿಗ ಇಡೀ ಕ್ರಿಕೆಟ್‌ ಜಗತ್ತಿಗೇ ಬೆರಗುಮೂಡಿಸಿದ್ದ.

ಬರೋಬ್ಬರಿ 13 ಗಂಟೆಗಳ ಕಾಲ ಬ್ಯಾಟಿಂಗ್ ಮಾಡುವ ಮೂಲಕ, ಲಿಯೊನಾರ್ಡ್ ಆಸ್ಟ್ರೇಲಿಯಾದ ಬೌಲರ್‌ʼಗಳನ್ನು ಸೋಲಿಸಿದರು. 86 ವರ್ಷಗಳ ನಂತರವೂ ಇನ್ನಿಂಗ್ಸ್‌ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆ ಇನ್ನೂ ಇವರ ಹೆಸರಲ್ಲೇ ಇದೆ. ಈ ಪಂದ್ಯದಲ್ಲಿ ಲಿಯೊನಾರ್ಡ್ 847 ಎಸೆತಗಳನ್ನು ಎದುರಿಸಿ 364 ರನ್ ಗಳಿಸಿದ್ದರು. ಈ ಇನ್ನಿಂಗ್ಸ್ ನಂತರ, ಲಿಯೊನಾರ್ಡ್ ಹೆಸರು ಕ್ರಿಕೆಟ್ ಜಗತ್ತಿನಲ್ಲಿ ಸಂಚಲನವಾಯಿತು.

ಇದನ್ನೂ ಓದಿ: ಇವರೇ ನೋಡಿ ವಿಶ್ವ ಕ್ರಿಕೆಟ್‌ʼನ 5 ಶ್ರೇಷ್ಠ ನಾಯಕರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಒಬ್ಬನೇ ಒಬ್ಬ ಕ್ಯಾಪ್ಟನ್‌... ಆತ ಬೇರಾರು ಅಲ್ಲ

ಲಿಯೊನಾರ್ಡ್ ಅವರ ತ್ರಿಶತಕದ ಆಧಾರದ ಮೇಲೆ ಇಂಗ್ಲೆಂಡ್ ತಂಡ ಸ್ಕೋರ್‌ಬೋರ್ಡ್‌ʼನಲ್ಲಿ 903 ರನ್‌ʼಗಳ ಬೃಹತ್ ಸ್ಕೋರ್ ದಾಖಲಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 201 ರನ್ ಗಳಿಸಿತು ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ 123 ರನ್‌ಗಳಿಗೆ ಸೀಮಿತವಾಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ 579 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News