Chloe Kelly: ಕಿಕ್ಕಿರಿದು ತುಂಬಿದ ಸ್ಟೇಡಿಯಂ ಮಧ್ಯೆಯೇ ಮೇಲಂಗಿ ಕಳಚಿ ಸಂಭ್ರಮಿಸಿದ ಮಹಿಳಾ ಆಟಗಾರ್ತಿ...

Chloe Kelly: ಹಲವು ಬಾರಿ ಗೋಲ್ ಬಾರಿಸುವ ಫುಟ್ ಬಾಲ್ ಆಟಗಾರರು ಮೈದಾನದಲ್ಲಿಯೇ ತನ್ನ ಜರ್ಸಿ ತೆಗೆದು ಸಂಭ್ರಮಿಸುತ್ತಾರೆ. ಆದರೆ ಈ ಬಾರಿ ಓರ್ವ ಮಹಿಳಾ ಫುಟ್ ಬಾಲ್ ಆಟಗಾರ್ತಿ ಈ ಕೆಲಸವನ್ನು ಮಾಡಿದ್ದು, ಆಕೆ ಈ ಕೆಲಸ ಮಾಡಿದ್ದ ಸಂದರ್ಭದಲ್ಲಿ ಮೈದಾನದಲ್ಲಿ 87000 ಪ್ರೇಕ್ಷರರಿದ್ದರು ಎನ್ನಲಾಗಿದೆ.

Written by - Nitin Tabib | Last Updated : Aug 3, 2022, 05:06 PM IST
  • ಫುಟ್ಬಾಲ್ ಆಟದಲ್ಲಿ ಆಟಗಾರರ ಉತ್ಸಾಹ ನೋಡುವಂತಿರುತ್ತದೆ.
  • ಕೆಲವೊಮ್ಮೆ ದೊಡ್ಡ ಫುಟ್ಬಾಲ್ ಆಟಗಾರರು ಗೋಲು ಹೊಡೆದ ನಂತರ ವಿಭಿನ್ನ ರೀತಿಯಲ್ಲಿ ಅದನ್ನು ಆಚರಿಸುವುದನ್ನು ಅಭಿಮಾನಿಗಳು ನೋಡುತ್ತಾರೆ.
  • ಅನೇಕ ಬಾರಿ ಫುಟ್ಬಾಲ್ ನಲ್ಲಿಯೂ ಕೂಡ ಪುರುಷ ಆಟಗಾರರು ಕೂಡ ಗೋಲು ಬಾರಿಸಿದ ನಂತರ ತಮ್ಮ ಜೆರ್ಸಿಯನ್ನು ತೆಗೆಯುತ್ತಾರೆ.
Chloe Kelly: ಕಿಕ್ಕಿರಿದು ತುಂಬಿದ ಸ್ಟೇಡಿಯಂ ಮಧ್ಯೆಯೇ ಮೇಲಂಗಿ ಕಳಚಿ ಸಂಭ್ರಮಿಸಿದ ಮಹಿಳಾ ಆಟಗಾರ್ತಿ... title=
Chloe Kelly Removed Her Jersey

Chloe Kelly Removed Her Jersey: ಫುಟ್ಬಾಲ್ ಆಟದಲ್ಲಿ ಆಟಗಾರರ ಉತ್ಸಾಹ ನೋಡುವಂತಿರುತ್ತದೆ.  ಕೆಲವೊಮ್ಮೆ ದೊಡ್ಡ ಫುಟ್ಬಾಲ್ ಆಟಗಾರರು ಗೋಲು ಹೊಡೆದ ನಂತರ ವಿಭಿನ್ನ ರೀತಿಯಲ್ಲಿ ಅದನ್ನು ಆಚರಿಸುವುದನ್ನು ಅಭಿಮಾನಿಗಳು ನೋಡುತ್ತಾರೆ. ಅನೇಕ ಬಾರಿ ಫುಟ್ಬಾಲ್ ನಲ್ಲಿಯೂ ಕೂಡ ಪುರುಷ ಆಟಗಾರರು ಕೂಡ ಗೋಲು ಬಾರಿಸಿದ ನಂತರ ತಮ್ಮ ಜೆರ್ಸಿಯನ್ನು ತೆಗೆಯುತ್ತಾರೆ. ಆದರೆ ಈ ಬಾರಿ ಇಂಗ್ಲೆಂಡ್ ನ ಮಹಿಳಾ ಫುಟ್ಬಾಲ್ ಆಟಗಾರ್ತಿಯೊಬ್ಬರು ಈ ರೀತಿ ಮಾಡಿದ್ದಾರೆ.

ಜರ್ಸಿಯನ್ನು ಕಳಚಿ ಹಾಕಿದ ಮಹಿಳಾ ಫುಟ್ಬಾಲ್ ಆಟಗಾರ್ತಿ 
ಹೌದು, ಮಹಿಳೆಯರ ಯೂರೋ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಜರ್ಮನಿ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಉಭಯ ತಂಡಗಳು ಕೊನೆಯವರೆಗೂ 1-1 ಗೋಲುಗಳಿಂದ ಸಮಬಲದಲ್ಲಿದ್ದರೂ ಹೆಚ್ಚುವರಿ ಸಮಯದಲ್ಲಿ ಇಂಗ್ಲೆಂಡ್‌ನ ಕ್ಲೋಯ್ ಕೆಲ್ಲಿ ಅದ್ಭುತ ಗೋಲು ಬಾರಿಸಿ ಇಂಗ್ಲೆಂಡ್‌ನ್ನು ಯೂರೋ ಕಪ್ ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ. ಈ ಪಂದ್ಯವನ್ನು ಇಂಗ್ಲೆಂಡ್ 2-1 ಅಂತರದಿಂದ ಗೆದ್ದುಕೊಂಡಿದೆ. ಆದರೆ ಕೆಲ್ಲಿ ಗೋಲು ದಾಖಲಿಸಿದ ತಕ್ಷಣವೇ ಮೈದಾನದಲ್ಲಿದ್ದ ಸಾವಿರಾರು ಪ್ರೇಕ್ಷಕರ ನಡುವೆ ತನ್ನ ಜರ್ಸಿಯನ್ನು ತೆಗೆದುಹಾಕಿ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ-Commonwealth Games 2022 : ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ..!

ಸ್ಟೇಡಿಯಂನಲ್ಲಿ 87 ಸಾವಿರ ಪ್ರೇಕ್ಷಕರಿದ್ದರು
ಇದು ಯುರೋ ಕಪ್‌ನ ಫೈನಲ್ ಆಗಿದ್ದು, ಈ ಪಂದ್ಯವನ್ನು ವೀಕ್ಷಿಸಲು ಸುಮಾರು 87000 ಪ್ರೇಕ್ಷಕರು ಸ್ಟೇಡಿಯಂನಲ್ಲಿದ್ದರು. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ನ ಕ್ಲೋಯ್ ಕೆಲ್ಲಿ ಜರ್ಸಿಯನ್ನು ತೆಗೆದುಹಾಕಿ ಭಾರಿ ಹೆಡ್ ಲೈನ್ ಸೃಷ್ಟಿಸಿದ್ದಾರೆ. ಸಾಮಾನ್ಯವಾಗಿ ಪುರುಷ ಫುಟ್ಬಾಲ್ ಆಟಗಾರರು ಈ ರೀತಿ ಸಂಭ್ರಮಾಚರಣೆ ನಡೆಸುತ್ತಾರೆ, ಆದರೆ ಕೆಲ್ಲಿ ಓರ್ವ ಮಹಿಳಾ ಆಟಗಾರ್ತಿಯಾಗಿ ಈ ರೀತಿ ಸಂಭ್ರಮಾಚರಿಸಿದ್ದಾರೆ. ಅವರಿಗಿಂತ ಮೊದಲು, 1999 ರ ವಿಶ್ವಕಪ್ ಫೈನಲ್ ಗೆದ್ದ ನಂತರ ಅಮೆರಿಕದ ಬ್ರಾಡಿ ಚಸ್ಟೈನ್ ಇದೇ ರೀತಿಯಲ್ಲಿ ಸಂಭ್ರಮಿಸಿದ್ದರು.

ಇದನ್ನೂ ಓದಿ-IND vs WI : ದಾಖಲೆ ಬರೆದ ಹಾರ್ದಿಕ್ ಪಾಂಡ್ಯ : ಟಿ20 ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ!

ಈ ಮೊದಲು ಕೂಡ ಈ ರೀತಿ ಮಹಿಳಾ ಆಟಗಾರ್ತಿಯರು ಸಂಭ್ರಮಾಚರಣೆ ನಡೆಸಿದ್ದಾರೆ
ವಿಶ್ವಕಪ್‌ನಲ್ಲಿ ಜೆರ್ಸಿ ಕಳಚಿ ಸಂಭ್ರಮಿಸಿದ್ದ ಚಸ್ಟೈನ್ ಫೈನಲ್‌ನಲ್ಲಿ ಗೆದ್ದ ಖುಷಿಯಲ್ಲಿ ಈ ಸಾಧನೆ ಮೊದಲ ಬಾರಿಗೆ ಮಾಡಿದ್ದರು. ಆಗ ಪೆನಾಲ್ಟಿ ಶೂಟೌಟ್‌ನಲ್ಲಿ ಅಮೆರಿಕ ತಂಡ 5-4ರಿಂದ ಜಯ ಸಾಧಿಸಿತ್ತು. ಇಡೀ ಜಗತ್ತು ಕೆಲ್ಲಿಯ ಟಿ-ಶರ್ಟ್ ಅನ್ನು ಮಹಿಳಾ ಸಬಲೀಕರಣದ ಒಂದು ರೂಪವೆಂದು ನೋಡುತ್ತಿದೆ. ಏಕೆಂದರೆ ಹೆಚ್ಚಿನ ಪುರುಷ ಫುಟ್ಬಾಲ್ ಆಟಗಾರರು ಈ ರೀತಿ ಸಂಭ್ರಮಾಚರಿಸುತ್ತಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News