Jasprit Bumrah Instagram Post: ವಿಶ್ವಕಪ್ 2023ರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್’ಗಳಿಂದ ಸೋಲನ್ನು ಅನುಭವಿಸಿದೆ. ಇದರೊಂದಿಗೆ ಭಾರತದ ವಿಶ್ವಕಪ್ ಟ್ರೋಫಿ ಕನಸು ಭಗ್ನಗೊಂಡಿದೆ. ಇನ್ನು ಈ ಸೋಲಿನ ನೋವಿನಲ್ಲಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಲವಾರು ದಿನಗಳ ನಂತರ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಒಂದನ್ನು Instagram ನಲ್ಲಿ ಪೋಸ್ಟ್ ಮಾಡಿದ್ದರು.
ಇದೀಗ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಪೋಸ್ಟ್ ಶೇರ್ ಮಾಡಿ ಸಂಚಲನ ಮೂಡಿಸಿದ್ದಾರೆ. ಅಭಿಮಾನಿಗಳು ಬುಮ್ರಾ ಅವರ ಈ ಪೋಸ್ಟ್ ಅನ್ನು ಕಂಡು ಆಶ್ಚರ್ಯಪಟ್ಟಿದ್ದಾರೆ.
ಇದನ್ನೂ ಓದಿ: ವಿಶ್ವಕಪ್’ನಲ್ಲಿ ಬೌಲಿಂಗ್’ನಿಂದಲೇ ಧೂಳೆಬ್ಬಿಸಿದ್ದ ಮೊಹಮ್ಮದ್ ಶಮಿ ಎಷ್ಟು ಕೋಟಿ ಆಸ್ತಿಯ ವಾರಸುದಾರ ಗೊತ್ತಾ?
ವಿಶ್ವಕಪ್ ಬಳಿಕ ಟೀಂ ಇಂಡಿಯಾದ ಹಲವು ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಅದರಲ್ಲಿ ಜಸ್ಪ್ರೀತ್ ಬುಮ್ರಾ ಕೂಡ ಒಬ್ಬರು. ಅಂದಹಾಗೆ ಇನ್’ಸ್ಟಾಗ್ರಾಂ ಸ್ಟೋರಿ ಶೇರ್ ಮಾಡಿರುವ ಬುಮ್ರಾ ‘ಕೆಲವೊಮ್ಮೆ ಮೌನವೇ ಉತ್ತಮ’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಫ್ಯಾನ್ಸ್, ಪ್ರಶ್ನೆಗಳನ್ನು ಎತ್ತಿದ್ದಾರೆ.
ಕೆಲವರು ಈ ಪೋಸ್ಟ್ ಅನ್ನು ವಿಶ್ವಕಪ್ ಸೋಲಿಗೆ ಲಿಂಕ್ ಮಾಡುತ್ತಿದ್ದರೆ, ಮತ್ತೂ ಕೆಲವರು ಮುಂಬೈ ಇಂಡಿಯನ್ಸ್’ಗೆ ಲಿಂಕ್ ಮಾಡುತ್ತಿದ್ದಾರೆ.
ಜಸ್ಪ್ರೀತ್ ಬುಮ್ರಾ ಅವರ ಈ ಪೋಸ್ಟ್ ನಂತರ ಹಲವು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. IPL 2022 ಮತ್ತು 2023 ರಲ್ಲಿ ಗುಜರಾತ್ ಟೈಟಾನ್ಸ್ ನಾಯಕರಾಗಿದ್ದ ಹಾರ್ದಿಕ್, ಮುಂಬರುವ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. ಇದನ್ನು ಅಧಿಕೃತವಾಗಿಯೂ ದೃಢಪಡಿಸಲಾಗಿದೆ. ಇನ್ನು ಕೆಲ ಅಭಿಮಾನಿಗಳು ಹೇಳುವ ಪ್ರಕಾರ ಬುಮ್ರಾರಿಗೆ ನಾಯಕನಾಗುವ ಆಸೆಯಿತ್ತು, ಆದರೆ ಈಗ ಹಾರ್ದಿಕ್ ಆಗಮನದಿಂದ ಅದು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಅವರು ಈ ರೀತಿ ಪೋಸ್ಟ್ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ಮೈದಾನಲ್ಲೇ ಕಣ್ಣಿಗೆ ಬಲವಾಗಿ ಬಡಿದ ಬಾಲ್… ಕಣ್ಣಿನ ಜೊತೆ ಕ್ರಿಕೆಟ್ ವೃತ್ತಿಜೀವನವನ್ನು ಕಳೆದುಕೊಂಡ ಸ್ಟಾರ್ ಕ್ರಿಕೆಟಿಗ
ಮುಂಬೈ ಇಂಡಿಯನ್ಸ್’ನ ಪ್ರಸ್ತುತ ನಾಯಕ ರೋಹಿತ್ ಶರ್ಮಾ ಬಳಿಕ ಆ ಸ್ಥಾನದ ಪ್ರಬಲ ಸ್ಪರ್ಧಿ ಬುಮ್ರಾ. ಹೀಗಿರುವಾಗ ಹಾರ್ದಿಕ್ ಪಾಂಡ್ಯ ತಂಡವನ್ನು ಸೇರಿಕೊಂಡಿರುವುದರಿಂದ ಬುಮ್ರಾ ನಾಯಕನಾಗುವುದು ಕಷ್ಟಸಾಧ್ಯ. ಹಾರ್ದಿಕ್ ಪಾಂಡ್ಯ ಈ ಮಾದರಿಯಲ್ಲಿ ಮತ್ತು ವಿಶೇಷವಾಗಿ ಐಪಿಎಲ್’ನಲ್ಲಿ ನಾಯಕತ್ವದ ಅನುಭವವನ್ನು ಹೊಂದಿದ್ದಾರೆ. ಈ ಪೋಸ್ಟ್ ಬೆನ್ನಲ್ಲೇ ಬುಮ್ರಾ ತನ್ನ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿಯೂ ಹೊರಬೀಳುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ