CWG 2022: ಪಾಕ್ ಕುಸ್ತಿಪಟುವನ್ನು ಸದೆಬಡಿದು ಭಾರತಕ್ಕೆ ಬೆಳ್ಳಿ ಪದಕ ಖಚಿತಪಡಿಸಿದ ರವಿ ದಹಿಯಾ

Commonwealth Games 2022: ಭಾರತೀಯ ಕುಸ್ತಿಪಟು ರವಿ ದಹಿಯಾ ಪಾಕಿಸ್ತಾನದ ಕುಸ್ತಿಪಟು ಅಸದ್ ಅಲಿಯನ್ನು ಸೋಲಿಸಿ  ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಇನ್ನೊಂದೆಡೆ ಮತ್ತೊಬ್ಬ ಭಾರತೀಯ ಪೈಲ್ವಾನ್ ಆಗಿರುವ ನವೀನ ಕೂಡ ಫೈನಲ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.  

Written by - Nitin Tabib | Last Updated : Aug 6, 2022, 06:48 PM IST
  • ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ 22ನೇ ಕಾಮನ್ ವೆಲ್ತ್ ಕ್ರೀಡಾಕೂಟದ ಒಂಬತ್ತನೇ ದಿನವಾದ ಇಂದೂ ಕೂಡ ಭಾರತೀಯ ಆಟಗಾರರ ಅಮೋಘ ದ್ಪ್ರದರ್ಶನ ಮುಂದುವರಿದಿದೆ.
  • ಸೆಮಿಫೈನಲ್ ಪಂದ್ಯದಲ್ಲಿ ಕುಸ್ತಿಪಟು ರವಿ ದಹಿಯಾ ಅವರು ಪಾಕಿಸ್ತಾನದ ಅಸದ್ ಅಲಿ ಅವರನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
CWG 2022: ಪಾಕ್ ಕುಸ್ತಿಪಟುವನ್ನು ಸದೆಬಡಿದು ಭಾರತಕ್ಕೆ ಬೆಳ್ಳಿ ಪದಕ ಖಚಿತಪಡಿಸಿದ ರವಿ ದಹಿಯಾ title=
Commonwealth Games 2022

Commonwealth Games 2022: ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ 22ನೇ ಕಾಮನ್ ವೆಲ್ತ್ ಕ್ರೀಡಾಕೂಟದ ಒಂಬತ್ತನೇ ದಿನವಾದ ಇಂದೂ ಕೂಡ ಭಾರತೀಯ ಆಟಗಾರರ ಅಮೋಘ ದ್ಪ್ರದರ್ಶನ ಮುಂದುವರಿದಿದೆ. ಸೆಮಿಫೈನಲ್ ಪಂದ್ಯದಲ್ಲಿ  ಕುಸ್ತಿಪಟು ರವಿ ದಹಿಯಾ ಅವರು ಪಾಕಿಸ್ತಾನದ ಅಸದ್ ಅಲಿ ಅವರನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ರವಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ ಮತ್ತು ಇದೀಗ ಅವರ ಕಣ್ಣು ಚಿನ್ನದ ಮೇಲೆ ನೆಟ್ಟಿದೆ. ರವಿ ದಹಿಯಾ 14-4 ಅಂಕಗಳ ಅಂತರದಿಂದ ಅಸಾದ್ ಅಲಿ ಅವರನ್ನು ಸೋಲಿಸಿದ್ದಾರೆ.

ಇದನ್ನೂ ಓದಿ-CWG 2022 : ಅಥ್ಲೆಟಿಕ್ಸ್‌ನಲ್ಲಿ ಅವಿನಾಶ್ ಸೇಬಲ್ ಗೆ ಬೆಳ್ಳಿ ಪದಕ! 

ಚಿನ್ನದ ಪದಕದಿಂದ ರವಿ ದಹಿಯಾ ಒಂದು ಹೆಜ್ಜೆ ದೂರ
ಸೆಮಿಫೈನಲ್ ಪಂದ್ಯಕ್ಕೂ ಮುನ್ನ ರವಿ ದಹಿಯಾ ಅವರು ನ್ಯೂಜಿಲೆಂಡ್ ಕುಸ್ತಿಪಟು ಸೂರಜ್ ಅವರನ್ನು 1 ನಿಮಿಷ 14 ಸೆಕೆಂಡುಗಳಲ್ಲಿ 10-0 ಅಂತರದಿಂದ ಸೋಲಿಸಿದ್ದರು. ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಕುಸ್ತಿಯಲ್ಲಿ ಭಾರತಕ್ಕೆ ಒಟ್ಟು 6 ಪದಕಗಳು ಬಂದಿವೆ. ಮತ್ತು ಇಂದು ಕುಸ್ತಿಯ 6 ಪದಕಗಳಿಗಾಗಿ ಸ್ಪರ್ಧೆ ನಡೆಯಲಿವೆ. ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ ಇದುವರೆಗೆ 9 ಚಿನ್ನ, 10 ಬೆಳ್ಳಿ ಮತ್ತು 9 ಕಂಚು ಸೇರಿದಂತೆ ಒಟ್ಟು 28 ಪದಕಗಳನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ-CWG 2022 : ಅಥ್ಲೆಟಿಕ್ಸ್‌ನಲ್ಲಿ ಅವಿನಾಶ್ ಸೇಬಲ್ ಗೆ ಬೆಳ್ಳಿ ಪದಕ! 

ನವೀನ್ ಕೂಡ ಫೈನಲ್ ಪ್ರವೇಶಿಸಿದ್ದಾರೆ
ಭಾರತದ ಕುಸ್ತಿಪಟು ನವೀನ್ ಕೂಡ ಫ್ರೀಸ್ಟೈಲ್ 74 ಕೆಜಿ ವಿಭಾಗದ ಫೈನಲ್ ಹಂತಕ್ಕೆ ತಲುಪಿದ್ದಾರೆ. ಅವರು ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಚಾರ್ಲಿ ಬೌಲಿಂಗ್ ಅವರನ್ನು ಸೋಲಿಸಿದ್ದಾರೆ. ಕುಸ್ತಿಪಟು ನವೀನ್ 12-1 ಅಂತರದಲ್ಲಿ ಪಂದ್ಯವನ್ನು ಗೆದ್ದಿದ್ದಾರೆ. ತನ್ಮೂಲಕ ನವೀನ್ ಕೂಡ ಬೆಳ್ಳಿ ಪದಕ ಖಚಿತಪಡಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News