ಸ್ಟಂಪ್ ಗೆ ಬಾಲ್ ತಗುಲಿದರೂ ಔಟ್ ಆಗದ ಧೋನಿ...! ವೀಡಿಯೋ

ಸ್ಟಂಪ್ ಗೆ ಬಾಲ್ ತಗುಲಿದರೂ ಧೋನಿ ಔಟ್ ಆಗದೆ ಇರುವ ಘಟನೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ನಡೆದಿದೆ.

Last Updated : Apr 1, 2019, 02:24 PM IST
 ಸ್ಟಂಪ್ ಗೆ ಬಾಲ್ ತಗುಲಿದರೂ ಔಟ್ ಆಗದ ಧೋನಿ...! ವೀಡಿಯೋ title=
Photo courtesy: Twitter

ನವದೆಹಲಿ: ಸ್ಟಂಪ್ ಗೆ ಬಾಲ್ ತಗುಲಿದರೂ ಧೋನಿ ಔಟ್ ಆಗದೆ ಇರುವ ಘಟನೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ನಡೆದಿದೆ.

ಈಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು "ಥಾಲಾ ಧೋನಿ ಪ್ರಭಾವದಿಂದ ಬೆಲ್ಸ್ ಕೂಡ ಬಿಳಲಿಲ್ಲ" ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದೆ.

ಈ ಸಂಗತಿ  ಚೆನ್ನೈ ತಂಡವು 28/3 ಗಳಿಸಿದ್ದಾಗ ಧೋನಿ ಮತ್ತು ಸುರೇಶ ರೈನಾ ಕ್ರೀಸ್ ನಲ್ಲಿದ್ದಾಗ ನಡೆದಿದೆ.ಆಗಲೇ ಶೇನ್ ವಾಟ್ಸನ್, ಅಂಬಟಿ ರಾಯಡು, ಕೇದಾರ್ ಜಾದವ್ ಅವರನ್ನು ಕಳೆದುಕೊಂಡಿದ್ದ ಚೆನ್ನೈ ತಂಡಕ್ಕೆ ಧೋನಿಯೊಬ್ಬರು ಔಟಾಗಿದ್ದರೆ ಇನ್ನೂ ಸಮಸ್ಯೆಯಾಗುತ್ತಿತ್ತು ಎನ್ನಲಾಗಿದೆ.

ಅಷ್ಟಕ್ಕೂ ಧೋನಿಗೆ ಈ ರೀತಿ ಅದ್ಬುತ ಸಂಗತಿಗಳು ಸಾಮಾನ್ಯವೆನ್ನುವಂತೆ ಆಗಿವೆ.ಅದರಲ್ಲಿ ಅವರು ಸ್ಟಂಪ್ ಔಟ್ ಮಾಡುವ ರೀತಿ, ಸಿಕ್ಸರ್ ಗಳಿಸುವ ರೀತಿ ನೋಡುವವರನ್ನು ಒಮ್ಮೆಗೆ ಅಚ್ಚರಿಪಡಿಸುತ್ತದೆ ಎನ್ನಬಹುದು.

Trending News