Rahul Dravid on Virat Kohli Parcel: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡ 2-0 ಮುನ್ನಡೆ ಸಾಧಿಸಿದೆ. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಸರಣಿಯ ಎರಡನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಮೂರನೇ ದಿನವೇ ಗೆದ್ದುಕೊಂಡಿದೆ. ಈ ಪಂದ್ಯದ ವೇಳೆ ವಿರಾಟ್ ಕೊಹ್ಲಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅನೇಕ ಅಭಿಮಾನಿಗಳು ತಿಳಿದುಕೊಳ್ಳಲು ಬಯಸಿದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: IND vs AUS : ಅಶ್ವಿನ್-ಜಡೇಜಾ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ, ಟೀಂ ಇಂಡಿಯಾಗೆ 6 ವಿಕೆಟ್ಗಳ ಜಯ!
ದೆಹಲಿ ಟೆಸ್ಟ್ನ ಎರಡನೇ ದಿನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿವಾದಾತ್ಮಕವಾಗಿ ಔಟಾದರು. ಅವರು ತಮ್ಮ ವಿಕೆಟ್ ಬಗ್ಗೆ ತುಂಬಾ ನಿರಾಶೆಗೊಂಡರು. ವೈರಲ್ ಆದ ವಿಡಿಯೋದಲ್ಲಿ, ವಿರಾಟ್ ತಮ್ಮ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆ ಮಾತನಾಡುತ್ತಿರುವುದು ಕಂಡುಬಂದಿದೆ. ಅದೇ ಸಮಯಕ್ಕೆ ವ್ಯಕ್ತಿಯೊಬ್ಬರು ಕೈಯಲ್ಲಿ ಆಹಾರದ ಪ್ಯಾಕೆಟ್ ಹಿಡಿದುಕೊಂಡು ವಿರಾಟ್ಗೆ ಏನೋ ಹೇಳುತ್ತಾರೆ. ಇದ್ದಕ್ಕಿದ್ದಂತೆ ವಿರಾಟ್ ಮನಸ್ಥಿತಿ ಸಂಪೂರ್ಣವಾಗಿ ಬದಲಾಗುತ್ತದೆ. ತಕ್ಷಣವೇ ಕೈಯಿಂದ ಹೊಡೆದು ಆ ವ್ಯಕ್ತಿಗೆ ಏನನ್ನೋ ಸೂಚಿಸುತ್ತಾರೆ.
ಇದೀಗ ಆ ಪ್ಯಾಕೆಟ್ನಲ್ಲಿ ಏನಿತ್ತು ಎಂದು ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ದೆಹಲಿ ಟೆಸ್ಟ್ನಲ್ಲಿ 6 ವಿಕೆಟ್ಗಳ ಗೆಲುವಿನ ನಂತರ ರಾಹುಲ್ ದ್ರಾವಿಡ್, “ಇದು ಚೋಲೆ ಬಟೂರೆ ಅಲ್ಲ, ಕುಲ್ಚಾ ಚೋಲೆ. ಅದಕ್ಕೆ ಅವರು ನನ್ನನ್ನು ಪ್ರಚೋದಿಸುತ್ತಿದ್ದರು ಆದರೆ ನನಗೆ 50 ವರ್ಷ ವಯಸ್ಸಾಗಿದೆ, ಇನ್ನು ಮುಂದೆ ಇಷ್ಟು ಕೊಲೆಸ್ಟ್ರಾಲ್ ಅನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ನಾನು ಹೇಳಿದೆ” ಎಂದರು.
ಇದನ್ನೂ ಓದಿ: Virat Kohli : ಅಂತರಾಷ್ಟ್ರೀಯ ಪಂದ್ಯದದಲ್ಲಿ 25000 ರನ್ ಪೂರೈಸಿದ ಕಿಂಗ್ ಕೊಹ್ಲಿ!
ಆರಂಭಿಕ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಮೂರನೇ ದಿನವೇ ಸರಣಿಯ ಎರಡನೇ ಟೆಸ್ಟ್ ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದುಕೊಂಡಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ 263 ರನ್ಗಳಿಗೆ ಆಲೌಟ್ ಆದ ನಂತರ ಭಾರತ 262 ರನ್ ಗಳಿಸಿತು. ಇದಾದ ಬಳಿಕ ಭಾರತ ತಂಡ ಆಸ್ಟ್ರೇಲಿಯದ ಎರಡನೇ ಇನ್ನಿಂಗ್ಸ್ ಅನ್ನು 113 ರನ್ಗಳಿಗೆ ಕಟ್ಟಿ ಹಾಕಿತು. ನಂತರ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಪಂದ್ಯದಲ್ಲಿ ಒಟ್ಟು 10 ವಿಕೆಟ್ ಹಾಗೂ 26 ರನ್ ಗಳಿಸಿದ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠರಾಗಿ ಆಯ್ಕೆಯಾದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.