Emerging Asia Cup 2023: ಫೈನಲ್‍ನಲ್ಲಿ ಭಾರತವನ್ನು ಸೋಲಿಸಿ ಪ್ರಶಸ್ತಿ ಎತ್ತಿಹಿಡಿದ ಪಾಕಿಸ್ತಾನ!

ACC Mens Emerging Teams Asia Cup 2023: ಪುರುಷರ ಎಮರ್ಜಿಂಗ್ ಕಪ್‌ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ತಂಡದ ಎದುರು ಭಾರತ ಎ ತಂಡವು ಹೀನಾಯ ಸೋಲು ಕಾಣುವ ಮೂಲಕ ನಿರಾಸೆ ಮೂಡಿಸಿತು.     

Written by - Puttaraj K Alur | Last Updated : Jul 23, 2023, 11:58 PM IST
  • ಎಸಿಸಿ ಪುರುಷರ ಎಮರ್ಜಿಂಗ್ ಕಪ್‌ ಏಕದಿನ ಟೂರ್ನಿಯ ಫೈನಲ್ ಪಂದ್ಯ
  • ಭಾರತ ಎ ತಂಡವನ್ನು ಸೋಲಿಸಿ ಪ್ರಶಸ್ತಿ ಎತ್ತಿಹಿಡಿದ ಪಾಕಿಸ್ತಾನ ಎ ತಂಡ
  • ಫೈನಲ್ ಪಂದ್ಯದಲ್ಲಿ 128 ರನ್‍ಗಳಿಂದ ಸೋತು ನಿರಾಸೆ ಮೂಡಿಸಿದ ಭಾರತ
Emerging Asia Cup 2023: ಫೈನಲ್‍ನಲ್ಲಿ ಭಾರತವನ್ನು ಸೋಲಿಸಿ ಪ್ರಶಸ್ತಿ ಎತ್ತಿಹಿಡಿದ ಪಾಕಿಸ್ತಾನ! title=
ಭಾರತಕ್ಕೆ ಹೀನಾಯ ಸೋಲು!

ಕೊಲಂಬೊ: ಎಸಿಸಿ ಪುರುಷರ ಎಮರ್ಜಿಂಗ್ ಕಪ್‌ ಏಕದಿನ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ತಂಡದ ಎದುರು ಭಾರತ ಎ ತಂಡವು ಹೀನಾಯ ಸೋಲು ಕಾಣುವ ಮೂಲಕ ನಿರಾಸೆ ಮೂಡಿಸಿತು.     

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಪಾಕ್ ಎದುರು ಭಾರತ ತಂ 128 ರನ್‍ಗಳ ಬೃಹತ್ ಅಂತರದಿಂದ ಸೋಲು ಕಂಡಿತು. ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ನಿಗದಿತ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 352 ರನ್‍ಗಳ ಬೃಹತ್ ಮೊತ್ತ ಪೇರಿಸಿತು.

ಇದನ್ನೂ ಓದಿ: Team Indiaಗೆ ಎಂಟ್ರಿಯಾಗಿ 7 ವರ್ಷವಾದ್ರೂ 33ರ ಹರೆಯದ ಈ ಮಾಂತ್ರಿಕ ಸ್ಪಿನ್ನರ್’ಗೆ ಸಿಕ್ಕಿಲ್ಲ ಟೆಸ್ಟ್ ಆಡುವ ಅವಕಾಶ!

ಪಾಕ್ ಪರ ತಯ್ಯಬ್ ತಾಹಿರ್ 71 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ ಇದ್ದ 108 ರನ್ ಗಳಿಸಿ ಶತಕ ಸಿಡಿಸಿದರು. ಇನ್ನುಳಿದಂತೆ ಸಾಹಿಬ್ಜಾದಾ ಫರ್ಹಾನ್ (65), ಸೈಮ್ ಅಯೂಬ್ (59) ಅರ್ಧಶತಕ ಬಾರಿಸಿದರೆ, ಒಮೈರ್ ಯೂಸುಫ್ (35) ಮತ್ತು ಮುಬಾಸಿರ್ ಖಾನ್(35) ರನ್ ಗಳಿಸಿ ತಂಡಕ್ಕೆ ನೆರವಾದರು.

ಗೆಲುವಿಗೆ 353 ರನ್‍ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ತಂಡ ಪಾಕ್ ಬೌಲರ್‍ಗಳ ದಾಳಿಗೆ ಸಿಲುಕಿ ನಲುಗಿತು. 40 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು ಕೇವಲ 224 ರನ್ ಗಳಿಸಿತು. ಭಾರತದ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (61)ಅರ್ಧಶತಕ ಬಾರಿಸಿದರು. ಇನ್ನುಳಿದಂತೆ ನಾಯಕ ಯಶ್ ಧುಲ್ (39) ಮತ್ತು ಸಾಯಿ ಸುದರ್ಶನ್ (29) ರನ್ ಗಳಿಸಿದರು.

ಇದನ್ನೂ ಓದಿ: Ajinkya Rahane Catch: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಬೆಸ್ಟ್ ಕ್ಯಾಚ್ ಹಿಡಿದ ಅಜಿಂಕ್ಯಾ ರಹಾನೆ! ವಿಡಿಯೋ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News