ಸಚಿನ್, ಧೋನಿ, ಸೆಹ್ವಾಗ್ ಅವರ ಆಟೋಗ್ರಾಫ್ ತೆಗೆದುಕೊಳ್ಳಲು ಬಯಸಿದ್ದ ಈ ಇಂಗ್ಲೆಂಡ್ ಆಟಗಾರ

ಇಂಗ್ಲೆಂಡ್‌ನ ಮಾಜಿ ಟೆಸ್ಟ್ ಓಪನರ್ ನಿಕ್ ಕಾಂಪ್ಟನ್ 2012 ರ ನವೆಂಬರ್‌ನಲ್ಲಿ ಅಹಮದಾಬಾದ್‌ನಲ್ಲಿ ಭಾರತದ ವಿರುದ್ಧ  ಪಾದಾರ್ಪಣೆ ಮಾಡಿದರು.

Last Updated : Jun 14, 2020, 10:48 PM IST
ಸಚಿನ್, ಧೋನಿ, ಸೆಹ್ವಾಗ್ ಅವರ ಆಟೋಗ್ರಾಫ್ ತೆಗೆದುಕೊಳ್ಳಲು ಬಯಸಿದ್ದ ಈ ಇಂಗ್ಲೆಂಡ್ ಆಟಗಾರ

ನವದೆಹಲಿ: ಇಂಗ್ಲೆಂಡ್‌ನ ಮಾಜಿ ಟೆಸ್ಟ್ ಓಪನರ್ ನಿಕ್ ಕಾಂಪ್ಟನ್ 2012 ರ ನವೆಂಬರ್‌ನಲ್ಲಿ ಅಹಮದಾಬಾದ್‌ನಲ್ಲಿ ಭಾರತದ ವಿರುದ್ಧ  ಪಾದಾರ್ಪಣೆ ಮಾಡಿದರು.

ಆಗ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡವು 2-1 ಅಂತರದಲ್ಲಿ ಸೋಲನ್ನು ಅನುಭವಿಸಿತ್ತು .ಆ ಸಮಯದಲ್ಲಿ ಭಾರತವು ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಒಳಗೊಂಡಿತ್ತು.ಇಂತಹ ಪ್ರಬಲ ಬ್ಯಾಟಿಂಗ್ ನಡುವೆಯೂ ಕೂಡ ಇಂಗ್ಲೆಂಡ್ ಸರಣಿ ಗೆಲುವು ಸಾಧಿಸಿತ್ತು. ಈ ಸಂದರ್ಭದಲ್ಲಿ ಕಾಂಪ್ಟನ್ ಕೂಡ ಇಂಗ್ಲೆಂಡ್ನ ಯಶಸ್ಸಿನಲ್ಲಿ ಪಾತ್ರವನ್ನು ವಹಿಸಿದರು.ದಿ ಎಡ್ಜ್ಸ್ & ಸ್ಲೆಡ್ಜಸ್ ಕ್ರಿಕೆಟ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಕಾಂಪ್ಟನ್, ಮೊದಲ ಬಾರಿಗೆ ಬ್ಯಾಟಿಂಗ್ ಮಾಡಲು ಹೊರಟಾಗ ಭಾರತೀಯ ಕ್ರಿಕೆಟ್‌ನ ದೊಡ್ಡ ಆಟಗಾರರ ಬಗ್ಗೆ ಭಯಪಡುವುದನ್ನು ಸ್ಮರಿಸಿಕೊಂಡಿದ್ದಾರೆ.

ಭಾರತವು ನನಗೆ ಎರಡನೇ ಮನೆ, ಇಲ್ಲಿ ನಾನು ಸಾಕಷ್ಟು ಸಮಯವನ್ನು ಕಳೆದಿದ್ದೇನೆ, ಪ್ರಯಾಣ ಮತ್ತು  ಛಾಯಾಗ್ರಹಣ ಮಾಡಿದ್ದೇನೆ. ಅನೇಕ ಬ್ಯಾಟಿಂಗ್ ಶಿಬಿರಗಳಿಗೆ ಹೋಗುವುದು, ಮುಂಬೈನಲ್ಲಿ ಸ್ಪಿನ್ ಆಡಲು ಕಲಿತಿದ್ದು, ಇಲ್ಲಿನ ಜನರು ಮತ್ತು ಸಂಸ್ಕೃತಿಯನ್ನು ಸಂಪೂರ್ಣವಾಗಿ ಪ್ರೀತಿಸಿದ್ದೆನೆ. ಅದನ್ನು ನಿಜವಾಗಿಯೂ ಆನಂದಿಸಿದೆ. ನನ್ನ ಮೊದಲ ಟೆಸ್ಟ್ ಸರಣಿಗಾಗಿ ಅಲ್ಲಿಗೆ ಹೋಗುವುದು ಒಂದು ರೀತಿಯಲ್ಲಿ ನನ್ನ ಕನಸಾಗಿತ್ತು' ಎಂದು ಅವರು ಹೇಳಿದರು.

'ಯಾಕೆಂದರೆ ಭಾರತೀಯ ಜನರು ತಮ್ಮ ಕ್ರಿಕೆಟಿಗರನ್ನು ಎಷ್ಟು ಪ್ರೀತಿಸುತ್ತಾರೆ ಮತ್ತು ಅವರು ಆಟವನ್ನು ಎಷ್ಟು ಬೆಂಬಲಿಸುತ್ತಾರೆ ಎಂಬುದು ನಿಮಗೆ ತಿಳಿದಿದೆ. ಇದು ಅದ್ಭುತವಾಗಿದೆ, ನಾನು ಇದ್ದಕ್ಕಿದ್ದಂತೆ ಸಚಿನ್, ಧೋನಿ, ಸೆಹ್ವಾಗ್, ಕೊಹ್ಲಿ ಅವರನ್ನು ನೋಡಿದಾಗ ನಾನು ಅವರ ಆಟೋಗ್ರಾಫ್‌ಗಳನ್ನು ತೆಗೆದುಕೊಂಡು ಕೈಕುಲುಕಲು ಬಯಸಿದ್ದೆ.' ಎಂದು ಹೇಳಿದರು

More Stories

Trending News