ODIನಲ್ಲಿ ದ್ವಿಶತಕ ಬಾರಿಸಿದ ಸ್ಫೋಟಕ ಬ್ಯಾಟ್ಸ್’ಮನ್’ಗಳು ಇವರೇ: ಭಾರತದ ಈ ಆಟಗಾರರೂ ಇದ್ದಾರೆ…

Batsmen who scored double centuries in ODIs: ಸಚಿನ್ ತೆಂಡೂಲ್ಕರ್ ನಂತರ ವೀರೇಂದ್ರ ಸೆಹ್ವಾಗ್ 2011 ರಲ್ಲಿ 219 ರನ್ ಗಳಿಸಿದ್ದರೆ, ರೋಹಿತ್ ಶರ್ಮಾ 2013 ರಲ್ಲಿ 209 ರನ್ ಗಳಿಸಿದ್ದರು. 2014 ರಲ್ಲಿ ಮತ್ತೊಮ್ಮೆ ರೋಹಿತ್ ಶರ್ಮಾ 264 ರನ್ ಗಳಿಸಿದರು.

Written by - Bhavishya Shetty | Last Updated : Jul 3, 2023, 12:19 PM IST
    • ಏಕದಿನ ಕ್ರಿಕೆಟ್‌ ನಲ್ಲಿ ಮೂರು ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ
    • ಸಚಿನ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ನ ಮೊದಲ ದ್ವಿಶತಕವನ್ನು ಬಾರಿಸಿದರು
    • ಟಿ20 ಕ್ರಿಕೆಟ್ ಬಂದ ನಂತರ ವಿಶ್ವದಾದ್ಯಂತ ಏಕದಿನ ಕ್ರಿಕೆಟ್ ಆಡುವ ಶೈಲಿಯೇ ಬದಲಾಗಿದೆ
ODIನಲ್ಲಿ ದ್ವಿಶತಕ ಬಾರಿಸಿದ ಸ್ಫೋಟಕ ಬ್ಯಾಟ್ಸ್’ಮನ್’ಗಳು ಇವರೇ: ಭಾರತದ ಈ ಆಟಗಾರರೂ ಇದ್ದಾರೆ… title=
List Of Double Centuries in ODI

Batsmen who scored double centuries in ODIs: ಟಿ20 ಕ್ರಿಕೆಟ್ ಬಂದ ನಂತರ ವಿಶ್ವದಾದ್ಯಂತ ಏಕದಿನ ಕ್ರಿಕೆಟ್ ಆಡುವ ಶೈಲಿಯೇ ಬದಲಾಗಿದೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ ನಲ್ಲಿ ಇದುವರೆಗೆ 10 ದ್ವಿಶತಕಗಳು ದಾಖಲಾಗಿವೆ. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ ನಲ್ಲಿ ಮೊದಲ ದ್ವಿಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. 24 ಫೆಬ್ರವರಿ 2010 ರಂದು, ಸಚಿನ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ನ ಮೊದಲ ದ್ವಿಶತಕವನ್ನು ಬಾರಿಸಿದರು.

ಸಚಿನ್ ತೆಂಡೂಲ್ಕರ್ ನಂತರ ವೀರೇಂದ್ರ ಸೆಹ್ವಾಗ್ 2011 ರಲ್ಲಿ 219 ರನ್ ಗಳಿಸಿದ್ದರೆ, ರೋಹಿತ್ ಶರ್ಮಾ 2013 ರಲ್ಲಿ 209 ರನ್ ಗಳಿಸಿದ್ದರು. 2014 ರಲ್ಲಿ ಮತ್ತೊಮ್ಮೆ ರೋಹಿತ್ ಶರ್ಮಾ 264 ರನ್ ಗಳಿಸಿದರು. ಇದು ಇನ್ನಿಂಗ್ಸ್‌ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆಯಾಗಿದೆ. ಕ್ರಿಸ್ ಗೇಲ್ 2015 ರ ವಿಶ್ವಕಪ್‌ ನಲ್ಲಿ 215 ರನ್ ಗಳಿಸಿದರೆ, ಮಾರ್ಟಿನ್ ಗುಪ್ಟಿಲ್ ನಂತರ 237 ರನ್ ಗಳಿಸಿದರು. ಡಿಸೆಂಬರ್ 2017 ರಲ್ಲಿ, ರೋಹಿತ್ ಶರ್ಮಾ ತಮ್ಮ ODI ವೃತ್ತಿಜೀವನದ ಮೂರನೇ ದ್ವಿಶತಕವನ್ನು ಗಳಿಸುವ ಮೂಲಕ ವಿಶ್ವದಾಖಲೆ ಮಾಡಿದರು. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ ನಲ್ಲಿ ಮೂರು ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ.

2019 ರಲ್ಲಿ, ಪಾಕಿಸ್ತಾನದ ಎಡಗೈ ಆರಂಭಿಕ ಆಟಗಾರ ಫಖರ್ ಜಮಾನ್ ಜಿಂಬಾಬ್ವೆ ವಿರುದ್ಧ ODI ಕ್ರಿಕೆಟ್‌ ನಲ್ಲಿ ಅಜೇಯ 210 ರನ್ ಗಳಿಸಿದರು. ಫಖರ್ ಜಮಾನ್ ಏಕದಿನ ಕ್ರಿಕೆಟ್‌ ನಲ್ಲಿ ದ್ವಿಶತಕ ಸಿಡಿಸಿದ ಪಾಕಿಸ್ತಾನದ ಮೊದಲ ಬ್ಯಾಟ್ಸ್‌ಮನ್. ಸಯೀದ್ ಅನ್ವರ್ (194) ದಾಖಲೆಯನ್ನು ಫಖರ್ ಜಮಾನ್ ಮುರಿದರು. 1996ರಲ್ಲಿ ಚೆನ್ನೈನಲ್ಲಿ ಭಾರತದ ವಿರುದ್ಧ ಅನ್ವರ್ 194 ರನ್ ಗಳಿಸಿದ್ದರು. ಫಖರ್ ಜಮಾನ್ ನಂತರ, 2022 ರಲ್ಲಿ, ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಸಹ ಏಕದಿನ ಕ್ರಿಕೆಟ್‌ ನಲ್ಲಿ ದ್ವಿಶತಕಗಳನ್ನು ಗಳಿಸುವ ಮೂಲಕ ದಾಖಲೆಗಳನ್ನು ಬರೆದಿದ್ದಾರೆ.

ಅಂತಾರಾಷ್ಟ್ರೀಯ ODI ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಕ್ರಿಕೆಟಿಗರ ಪಟ್ಟಿ (ಹೆಚ್ಚು ರನ್’ಗಳ ಅನುಸಾರ):

  • ರೋಹಿತ್ ಶರ್ಮಾ - 264
  • ಮಾರ್ಟಿನ್ ಗಪ್ಟಿಲ್ - 237*
  • ವೀರೇಂದ್ರ ಸೆಹ್ವಾಗ್ - 219
  • ಕ್ರಿಸ್ ಗೇಲ್ - 215
  • ಫಖರ್ ಜಮಾನ್ - 210*
  • ಇಶಾನ್ ಕಿಶನ್ - 210
  • ರೋಹಿತ್ ಶರ್ಮಾ - 209
  • ರೋಹಿತ್ ಶರ್ಮಾ - 208*
  • ಶುಭಮನ್ ಗಿಲ್ - 208
  • ಸಚಿನ್ ತೆಂಡೂಲ್ಕರ್ - 200*

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3COfPCC 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News