ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಫ್ಘಾನಿಸ್ತಾನದ ವಿರುದ್ಧ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಪ್ರಾರಂಭದಲ್ಲಿ ಮುರಳಿ ವಿಜಯ್(105) ಮತ್ತು ಶಿಖರ್ ಧವನ್(107) ಅವರ ಭರ್ಜರಿ ಶತಕದ ನೆರವಿನಿಂದ ಮೊದಲ ದಿನದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 347 ರನ್ ಗಳಿಸಿದೆ.
ಉತ್ತಮ ಆರಂಭ ಪಡೆದಿದ್ದ ಭಾರತ ತಂಡವು ನಂತರ ಕೆ.ಎಲ್ ರಾಹುಲ್ ರ(54) ಅರ್ಧಶತಕವನ್ನು ಹೊರತು ಪಡಿಸಿದರೆ ಉಳಿದವರು ಬೇಗನೆ ವಿಕೆಟ್ ಕಳೆದುಕೊಂಡರು. ಅಫ್ಘಾನಿಸ್ತಾನ್ ತಂಡದ ಪರ ಯಮಿನ್ ಅಹ್ಮದಜೈ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಇಂದು ಆಫ್ಗಾನಿಸ್ತಾನ ತಂಡವು ಭಾರತದ ವಿರುದ್ದ ಇದೇ ಮೊದಲ ಬಾರಿಗೆ ಟೆಸ್ಟ್ ಆಡುವ 12ನೇ ದೇಶವಾಗಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದೆ.