ಟೀಂ ಇಂಡಿಯಾದಿಂದ ಹಾರ್ದಿಕ್‌ಗೆ ಕೈತಪ್ಪಿದ ನಾಯಕತ್ವ.. ಆಯ್ಕೆ ಮಾಡದಿರಲು ಕಾರಣ ಹೊರಹಾಕಿದ ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌

Ajit Agarkar: ಟೀಂ ಇಂಡಿಯಾದ ಮುಖ್ಯ ಕೋಚ್ ಆದ ನಂತರ ಗೌತಮ್ ಗಂಭೀರ್ ಮೊದಲ ಬಾರಿಗೆ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು ಇವರೊಂದಿಗೆಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಭಾಗಿಯಾಗಿದ್ದರು. ಈ ಇಬ್ಬರು ಮಾಧ್ಯಮದವರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದರು, ಅದರಲ್ಲೂ ಇತ್ತೀಚೆಗೆ ಚರ್ಚೆಗೀಡಾಗಿರುವ ಹಾರ್ದಿಕ್‌ ಪಾಂಡ್ಯ ಅವರಿಗೆ ಕೈ ತಪ್ಪಿದ ನಾಯಕತ್ವದ ಕುರಿತು ಕೂಡ ಪ್ರಶ್ನೆಗಳು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಆಯ್ಕೆಗಾರ ಅಜಿತ್ ಅಗರ್ಕರ್ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.   

Written by - Zee Kannada News Desk | Last Updated : Jul 22, 2024, 01:17 PM IST
  • ಆಯ್ಕೆಗಾರರು ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ನೇಮಿಸುವ ಮೂಲಕ ಅಭಿಮಾನಿಗಳ ನಂಬಿಕೆಯನ್ನು ಹುಸಿ ಮಾಡಿದರು.
  • ಮೇಲಾಗಿ 2026ರ ಟಿ20 ವಿಶ್ವಕಪ್ ವರೆಗೆ ಸೂರ್ಯ ತಂಡದ ನಾಯಕನಾಗಿ ಮುಂದುವರೆಯಲಿದ್ದಾರೆ ಎಂದು ವರದಿಯಾಗಿದೆ.
  • ಹಾರ್ದಿಕ್ ಅವರ ಫಿಟ್ನೆಸ್ ಕಾರಣದಿಂದ ನಾಯಕತ್ವವನ್ನು ನೀಡಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಟೀಂ ಇಂಡಿಯಾದಿಂದ ಹಾರ್ದಿಕ್‌ಗೆ ಕೈತಪ್ಪಿದ ನಾಯಕತ್ವ.. ಆಯ್ಕೆ ಮಾಡದಿರಲು ಕಾರಣ ಹೊರಹಾಕಿದ ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌  title=

Ajit Agarkar: ಟೀಂ ಇಂಡಿಯಾದ ಮುಖ್ಯ ಕೋಚ್ ಆದ ನಂತರ ಗೌತಮ್ ಗಂಭೀರ್ ಮೊದಲ ಬಾರಿಗೆ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು ಇವರೊಂದಿಗೆಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಭಾಗಿಯಾಗಿದ್ದರು. ಈ ಇಬ್ಬರು ಮಾಧ್ಯಮದವರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದರು, ಅದರಲ್ಲೂ ಇತ್ತೀಚೆಗೆ ಚರ್ಚೆಗೀಡಾಗಿರುವ ಹಾರ್ದಿಕ್‌ ಪಾಂಡ್ಯ ಅವರಿಗೆ ಕೈ ತಪ್ಪಿದ ನಾಯಕತ್ವದ ಕುರಿತು ಕೂಡ ಪ್ರಶ್ನೆಗಳು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಆಯ್ಕೆಗಾರ ಅಜಿತ್ ಅಗರ್ಕರ್ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. 

ರೋಹಿತ್ ಶರ್ಮಾ ಟಿ20ಗೆ ನಿವೃತ್ತಿ ಘೋಷಿಸಿದ್ದರಿಂದ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ತಂಡದ ನಾಯಕರಾಗಿ ನೇಮಕವಾಗಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಯ್ಕೆಗಾರರು ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ನೇಮಿಸುವ ಮೂಲಕ ಅಭಿಮಾನಿಗಳ ನಂಬಿಕೆಯನ್ನು ಹುಸಿ ಮಾಡಿದರು. ಶ್ರೀಲಂಕಾ ಪ್ರವಾಸಕ್ಕೆ ಟಿ20 ಸರಣಿಗೆ ಆಯ್ಕೆಯಾಗಿರುವ ತಂಡದ ನಾಯಕರಾಗಿ ಸೂರ್ಯ ಆಯ್ಕೆಯಾಗಿದ್ದಾರೆ. ಮೇಲಾಗಿ 2026ರ ಟಿ20 ವಿಶ್ವಕಪ್ ವರೆಗೆ ಸೂರ್ಯ ತಂಡದ ನಾಯಕನಾಗಿ ಮುಂದುವರೆಯಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಭಾರತಕ್ಕೆ ಪಾಕಿಸ್ತಾನದ ಎಚ್ಚರಿಕೆ..! ಪಾಕಿಸ್ತಾನದಲ್ಲಿ ಪ್ರವಾಸಕ್ಕೆ ಒಪ್ಪದಿದ್ದರೆ ಭಾರತ ತಂಡದ ಮೇಲೆ ಬೀರಲಿದೆ ದೊಡ್ಡ ಪರಿಣಾಮ..?

ಈ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಆಯ್ಕೆ ಬದಲಾವಣೆ ಕುರಿತು ಪ್ರಶ್ನೆಗಳು ಎದ್ದಿದ್ದವು. ಈ ಬಗ್ಗೆ ಅಜಿತ್ ಅಗರ್ಕರ್ ವಿವರಣೆ ನೀಡಿದ್ದಾರೆ. ಹಾರ್ದಿಕ್ ಅವರ ಫಿಟ್ನೆಸ್ ಕಾರಣದಿಂದ ನಾಯಕತ್ವವನ್ನು ನೀಡಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಎಲ್ಲಾ ಸಮಯದಲ್ಲೂ ಲಭ್ಯವಿರುವ ಆಟಗಾರನನ್ನು ನಾಯಕನನ್ನಾಗಿ ಆಯ್ಕೆ ಮಾಡಬೇಕು ಅದರಿಂದ ಹಾರ್ದಿಕ್ ಅವರಿಗೆ ತಂಡದ ಸಾರಥ್ಯವನ್ನು ನೀಡಲಿಲ್ಲ. ಆದರೆ ಹಾರ್ದಿಕ್ ಪಾಂಡ್ಯ ತಂಡದ ಅತ್ಯಂತ ಪ್ರಮುಖ ಆಟಗಾರ ಎಂದಿದ್ದಾರೆ

ಅರ್ಹರಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಜಿತ್ ಅಗರ್ಕರ್ ತಿಳಿಸಿದರು. “ಹಾರ್ದಿಕ್ ಪಾಂಡ್ಯ ತಂಡದಲ್ಲಿನ ಬಹಳ ನುರಿತ ಆಟಗಾರ. ಆದರೆ ಫಿಟ್ನೆಸ್ ಬಹಳ ಮುಖ್ಯ. ನಮಗೆ ಎಲ್ಲಾ ಸಮಯದಲ್ಲೂ ಲಭ್ಯವಿರುವ ಆಟಗಾರನ ಅಗತ್ಯವಿದೆ. ಹಾಗಾಗಿಯೇ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ನೇಮಿಸಿದ್ದೇವೆ. ಅವರು ಅರ್ಹರಲ್ಲಿ ಒಬ್ಬರು. ಸೂರ್ಯ ಟಿ20ಯಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು,’’ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News