ಅಂದು 200 ರನ್ ಸಿಡಿಸಿದ್ದ ಅದೇ ಮೈದಾನದಲ್ಲಿ ಇಂದು ಡಕೌಟ್! Maxwellಗೆ ಯಾರೋ ಮಾಟ ಮಾಡಿದ್ದಾರೆಂದ RCB ಫ್ಯಾನ್ಸ್!!

Maxwell Duck Out: ಈ ಪಂದ್ಯದಲ್ಲಿ ಆಲ್‌ ರೌಂಡರ್ ಗ್ಲೆನ್ ಮ್ಯಾಕ್ಸ್‌ ವೆಲ್ ತಮ್ಮ ಹೆಸರಿನಲ್ಲಿ ಕಳಪೆ ದಾಖಲೆ ಬರೆದಿದ್ದಾರೆ. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌’ಗೆ ಬಂದ ಮ್ಯಾಕ್ಸ್‌ವೆಲ್ 4 ಎಸೆತಗಳನ್ನು ಎದುರಿಸಿ ಡಕೌಟ್ ಆಗಿದ್ದಾರೆ.

Written by - Bhavishya Shetty | Last Updated : Apr 11, 2024, 09:33 PM IST
    • ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾದಾಟ
    • ಮ್ಯಾಕ್ಸ್‌ವೆಲ್ 4 ಎಸೆತಗಳನ್ನು ಎದುರಿಸಿ ಡಕೌಟ್ ಆಗಿದ್ದಾರೆ
    • ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಆಟಗಾರ ಎಂದೆನಿಸಿಕೊಂಡಿದ್ದಾರೆ
ಅಂದು 200 ರನ್ ಸಿಡಿಸಿದ್ದ ಅದೇ ಮೈದಾನದಲ್ಲಿ ಇಂದು ಡಕೌಟ್! Maxwellಗೆ ಯಾರೋ ಮಾಟ ಮಾಡಿದ್ದಾರೆಂದ RCB ಫ್ಯಾನ್ಸ್!! title=
glen maxwell

Maxwell Duck Out: ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ 2024 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಾದಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಒಳಾಂಗಣ ಅಥವಾ ಹೊರಾಂಗಣ… ಈ ಒಂದು ಗಿಡ ನೆಟ್ಟರೆ ಸಾಕು ಸುಡು ಬೇಸಿಗೆಯಲ್ಲಿ ತಂಪು ತಂಪಾಗಿರುತ್ತೆ ಸಂಪೂರ್ಣ ಮನೆ! ಸ್ವಲ್ಪವೂ ಇರಲ್ಲ ಸೆಖೆ

ಅಂದಹಾಗೆ ಈ ಪಂದ್ಯದಲ್ಲಿ ಆಲ್‌ ರೌಂಡರ್ ಗ್ಲೆನ್ ಮ್ಯಾಕ್ಸ್‌ ವೆಲ್ ತಮ್ಮ ಹೆಸರಿನಲ್ಲಿ ಕಳಪೆ ದಾಖಲೆ ಬರೆದಿದ್ದಾರೆ. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌’ಗೆ ಬಂದ ಮ್ಯಾಕ್ಸ್‌ವೆಲ್ 4 ಎಸೆತಗಳನ್ನು ಎದುರಿಸಿ ಡಕೌಟ್ ಆಗಿದ್ದಾರೆ.

ಖಾತೆ ತೆರೆಯದ್ ಔಟ್ ಆಗಿದ್ದಲ್ಲದೆ, ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಜೊತೆ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಆಟಗಾರ ಎಂದೆನಿಸಿಕೊಂಡಿದ್ದಾರೆ. ಈ ಮೂವರು ಆಟಗಾರರು ಕೂಡ ಐಪಿಎಲ್’ನಲ್ಲಿ ತಲಾ 17 ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಕ್ ಔಟ್

ಗ್ಲೆನ್ ಮ್ಯಾಕ್ಸ್‌ವೆಲ್ - 17

ದಿನೇಶ್ ಕಾರ್ತಿಕ್ - 17

ರೋಹಿತ್ ಶರ್ಮಾ – 17

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿದ್ದಾರೆ ಸೀತಾ-ಗೀತಾ, ಅವರ ಅಫೇರ್ ಏನು ಗೊತ್ತಿಲ್ಲ: ರಹಸ್ಯ ಹೇಳಿದ ವಿರಾಟ್ ಕೊಹ್ಲಿ

ಅಂದಹಾಗೆ ವಿಶ್ವಕಪ್’ನಲ್ಲಿ ಇದೇ ಮೈದಾನದಲ್ಲಿ ಮ್ಯಾಕ್ಸ್‌ವೆಲ್‌ 200 ರನ್‌ ಬಾರಿಸಿದ್ದರು. ಆದರೆ ಇಂದು ಡಕೌಟ್ ಆಗಿದ್ದಾರೆ. ಈ ಬೆಳವಣಿಗೆ ಕಂಡ ಆರ್ ಸಿ ಬಿ ಫ್ಯಾನ್ಸ್ ಸಿಟ್ಟಿಗೆದ್ದಿದ್ದು, ಮಾಕ್ಸ್’ವೆಲ್’ಗೆ ಯಾರೋ ಮಾಟ ಮಾಡಿಸಿರಬೇಕು ಎಂದು ಹೇಳುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News