IND vs WI: ಬ್ಯಾಟಿಂಗ್, ಬೌಲಿಂಗ್ ವೈಫಲ್ಯ! 6 ವರ್ಷಗಳ ಬಳಿಕ ವಿಂಡೀಸ್ ವಿರುದ್ಧ ಸೋಲುಂಡ ಭಾರತ: Highlights ಇಲ್ಲಿದೆ

India vs West Indies 5th T20: ಈ ಸೋಲಿನೊಂದಿಗೆ ಭಾರತ ತಂಡದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆಲುವಿಗೆ ಬ್ರೇಕ್ ಬಿದ್ದಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಕೊನೆಯ ಬಾರಿಗೆ 2017ರಲ್ಲಿ ಭಾರತ ವಿರುದ್ಧ ಟಿ20 ಸರಣಿ ಗೆದ್ದಿತ್ತು.

Written by - Bhavishya Shetty | Last Updated : Aug 14, 2023, 07:21 AM IST
    • ವೆಸ್ಟ್ ಇಂಡೀಸ್ 2 ವಿಕೆಟ್ ನಷ್ಟಕ್ಕೆ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿತು
    • ಈ ಸೋಲಿನೊಂದಿಗೆ ಭಾರತ ತಂಡದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆಲುವಿಗೆ ಬ್ರೇಕ್ ಬಿದ್ದಿದೆ
    • ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು
IND vs WI: ಬ್ಯಾಟಿಂಗ್, ಬೌಲಿಂಗ್ ವೈಫಲ್ಯ! 6 ವರ್ಷಗಳ ಬಳಿಕ ವಿಂಡೀಸ್ ವಿರುದ್ಧ ಸೋಲುಂಡ ಭಾರತ: Highlights ಇಲ್ಲಿದೆ title=
IND vs WI t20

India vs West Indies 5th T20: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ T20 ಸರಣಿಯ (IND vs WI) ಕೊನೆಯ ಪಂದ್ಯವು ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಿತು. ವೆಸ್ಟ್ ಇಂಡೀಸ್ ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿತ್ತು, ನಂತರ ಟೀಂ ಇಂಡಿಯಾ ಎರಡು ಪಂದ್ಯಗಳನ್ನು ಗೆದ್ದು ಸರಣಿಗೆ ಮರಳಿತು. ಆದರೆ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಎದುರು 166 ರನ್ ಗಳ ಗುರಿ ನೀಡಿದ್ದು, ಅದನ್ನು ವೆಸ್ಟ್ ಇಂಡೀಸ್ 2 ವಿಕೆಟ್ ನಷ್ಟಕ್ಕೆ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿತು.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ: ಒಬ್ಬರಲ್ಲ.. ಮೂವರು ಕ್ರಿಕೆಟಿಗರು 5ನೇ T-20 Playing 11ನಿಂದ ಔಟ್!

6 ವರ್ಷಗಳ ನಂತರ ವಿಂಡೀಸ್ ವಿರುದ್ಧ ಸೋತ ಭಾರತ!

ಈ ಸೋಲಿನೊಂದಿಗೆ ಭಾರತ ತಂಡದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆಲುವಿಗೆ ಬ್ರೇಕ್ ಬಿದ್ದಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಕೊನೆಯ ಬಾರಿಗೆ 2017ರಲ್ಲಿ ಭಾರತ ವಿರುದ್ಧ ಟಿ20 ಸರಣಿ ಗೆದ್ದಿತ್ತು. ಅದರ ನಂತರ ವೆಸ್ಟ್ ಇಂಡೀಸ್ ಭಾರತ ವಿರುದ್ಧ ಟಿ20 ಸರಣಿ ಗೆಲ್ಲಲು ಸಾಧ್ಯವಾಗಲಿಲ್ಲ. ಆ ಸರಣಿಯಲ್ಲಿ ವೆಸ್ಟ್ ಇಂಡೀಸ್ ಭಾರತವನ್ನು 1-0 ಅಂತರದಿಂದ ಸೋಲಿಸಿತು. ಇದಾದ ಬಳಿಕ ಟೀಂ ಇಂಡಿಯಾ ಸತತ 5 ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತ್ತು.

ಸೂರ್ಯಕುಮಾರ್ ಯಾದವ್ ಅರ್ಧಶತಕ:

ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಸೂರ್ಯಕುಮಾರ್ ಯಾದವ್ (61 ರನ್) ಅರ್ಧಶತಕದ ನೆರವಿನಿಂದ, ಬ್ಯಾಟ್ಸ್‌’ಮನ್‌’ಗಳ ಕಳಪೆ ಪ್ರದರ್ಶನದ ಹೊರತಾಗಿಯೂ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಮತ್ತು ನಿರ್ಣಾಯಕ ಟಿ 20 ನಲ್ಲಿ ಭಾರತ ಒಂಬತ್ತು ವಿಕೆಟ್‌’ಗಳನ್ನು ಕಳೆದುಕೊಂಡು 165 ರನ್ ಗಳಿಸಿತು. ಸೂರ್ಯಕುಮಾರ್ ಅವರ 45 ಎಸೆತಗಳ ಇನ್ನಿಂಗ್ಸ್‌’ನಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌’ಗಳನ್ನು ಬಾರಿಸಿದರು. ಇನಿಂಗ್ಸ್ ವೇಳೆ ಮಳೆಯ ಆರ್ಭಟ ಹೆಚ್ಚಾಗಿದ್ದು, ಎರಡು ಬಾರಿ ಪಂದ್ಯವನ್ನು ಸ್ವಲ್ಪ ಹೊತ್ತು ನಿಲ್ಲಿಸಬೇಕಾಯಿತು.

ಟೀಂ ಇಂಡಿಯಾಕ್ಕೆ ಕೆಟ್ಟ ಆರಂಭ:

ಎಡಗೈ ಸ್ಪಿನ್ನರ್ ಅಕಿಲ್ ಹುಸೇನ್ ಮೊದಲ ಓವರ್‌’ನಲ್ಲಿ ಯಶಸ್ವಿ ಜೈಸ್ವಾಲ್ (05) ಮತ್ತು ಎರಡನೇ ಓವರ್‌’ನಲ್ಲಿ ಶುಭಮನ್ ಗಿಲ್ (09) ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಡಬಲ್ ಏಟು ಕೊಟ್ಟರು. ತಿಲಕ್ ಆರನೇ ಓವರ್‌’ನಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 19 ರನ್ ಸೇರಿಸಿದರು. ಇದರಿಂದಾಗಿ ಭಾರತ ಪವರ್‌ಪ್ಲೇಯಲ್ಲಿ ಎರಡು ವಿಕೆಟ್ ಕಳೆದುಕೊಂಡರೂ 51 ರನ್ ಗಳಿಸಿತು. ಆದರೆ ಎಂಟನೇ ಓವರ್‌ನಲ್ಲಿ ತಿಲಕ್ (27 ರನ್) 66 ರನ್ ಗಳಿಸಿದ್ದಾಗ ರೋಸ್ಟನ್ ಚೇಸ್‌ಗೆ ಕ್ಯಾಚಿತ್ತು ಔಟಾದರು, ಇದು ಭಾರತಕ್ಕೆ ಮೂರನೇ ಪೆಟ್ಟು ಕೊಟ್ಟಿತು.

ಇದನ್ನೂ ಓದಿ: 19 ಎಸೆತ… 110 ರನ್! ಕ್ರಿಸ್ ಗೇಲ್ ‘ದೈತ್ಯ’ ವಿಶ್ವದಾಖಲೆ ಮುರಿದೇಬಿಟ್ಟ 19ರ ಹರೆಯದ ಈ ಕ್ರಿಕೆಟಿಗ

ಸಂಜು ಸ್ಯಾಮ್ಸನ್ ಕೂಡ ಫ್ಲಾಪ್!

11ನೇ ಓವರ್‌’ನಲ್ಲಿ 13 ರನ್ ಗಳಿಸಿದ್ದ ಸಂಜು ಸ್ಯಾಮ್ಸನ್ ರೊಮಾರಿಯೊ ಶೆಫರ್ಡ್ ಎಸೆತದಲ್ಲಿ ವಿಕೆಟ್‌ ಕೀಪರ್ ನಿಕೋಲಸ್ ಪೂರನ್‌’ಗೆ ಕ್ಯಾಚ್ ನೀಡಿ ಔಟಾದರು. ನಾಯಕ ಹಾರ್ದಿಕ್ ಪಾಂಡ್ಯ ಕ್ರೀಸ್‌’ನಲ್ಲಿದ್ದರು. ಒತ್ತಡದ ಕಾರಣ 10ರಿಂದ 14ನೇ ಓವರ್‌’ವರೆಗೆ ಯಾವುದೇ ಬೌಂಡರಿ ಬಾರಿಸಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಸ್ಕೋರ್ 14 ಓವರ್‌’ಗಳಲ್ಲಿ ನಾಲ್ಕು ವಿಕೆಟ್‌ಗೆ 102 ರನ್ ಆಗಿತ್ತು. ಇದಾದ ಬಳಿಕ ಪಾಂಡ್ಯ (14 ರನ್) ಶೆಫರ್ಡ್‌’ಗೆ ಬಲಿಯಾದರು. 18ನೇ ಓವರ್ ನಲ್ಲಿ ಸೂರ್ಯಕುಮಾರ್ ಔಟಾದ ತಕ್ಷಣ ಭಾರತದ ದೊಡ್ಡ ಮೊತ್ತದ ನಿರೀಕ್ಷೆಯೂ ನುಚ್ಚುನೂರಾಯಿತು. ಅವರನ್ನು ಜೇಸನ್ ಹೋಲ್ಡರ್ ಎಲ್‌ಬಿಡಬ್ಲ್ಯೂ ಆಗಿ ಔಟಾದರು. ಇನ್ನು ಔಟಾಗುವ ಮುನ್ನ ಅರ್ಷದೀಪ್ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದರು. ಅದೇ ಸಮಯದಲ್ಲಿ ಅಕ್ಷರ್ ಪಟೇಲ್ 10 ಎಸೆತಗಳಲ್ಲಿ ಸಿಕ್ಸರ್ ಬಾರಿಸಿ 13 ರನ್ ಗಳಿಸಿದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News