ವಿಶ್ವಕಪ್’ಗೂ ಮುನ್ನ 6 ಸ್ಟಾರ್ ಆಟಗಾರರನ್ನು ಅಮಾನತುಗೊಳಿಸಿದ ICC! ಈ ಪಟ್ಟಿಯಲ್ಲಿ ಮೂವರು ಭಾರತೀಯರೇ…

ICC suspended 6 star players: ಬಾಂಗ್ಲಾದೇಶದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ನಾಸಿರ್ ಹುಸೇನ್ ಕೂಡ ಲೀಗ್‌’ನ ಭ್ರಷ್ಟಾಚಾರ-ವಿರೋಧಿ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

Written by - Bhavishya Shetty | Last Updated : Sep 20, 2023, 07:51 AM IST
    • 2021ರ ಎಮಿರೇಟ್ಸ್ ಟಿ 10 ಲೀಗ್‌’ನಲ್ಲಿ ಭ್ರಷ್ಟ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ
    • ಭಾರತೀಯ ತಂಡದ ಮಾಲೀಕರ ವಿರುದ್ಧ ಐಸಿಸಿ ವಿವಿಧ ಆರೋಪಗಳನ್ನು ಹೊರಿಸಿದೆ
    • ಮೂವರು ಭಾರತೀಯರು ಸೇರಿದಂತೆ ಆರು ಜನರು ತಾತ್ಕಾಲಿಕವಾಗಿ ಅಮಾನತು
ವಿಶ್ವಕಪ್’ಗೂ ಮುನ್ನ 6 ಸ್ಟಾರ್ ಆಟಗಾರರನ್ನು ಅಮಾನತುಗೊಳಿಸಿದ ICC! ಈ ಪಟ್ಟಿಯಲ್ಲಿ ಮೂವರು ಭಾರತೀಯರೇ… title=
Cricketer Suspension

Cricket News: 2021ರ ಎಮಿರೇಟ್ಸ್ ಟಿ 10 ಲೀಗ್‌’ನಲ್ಲಿ ಭ್ರಷ್ಟ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಎಂಟು ಆಟಗಾರರು, ಅಧಿಕಾರಿಗಳು ಮತ್ತು ಕೆಲವು ಭಾರತೀಯ ತಂಡದ ಮಾಲೀಕರ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿವಿಧ ಆರೋಪಗಳನ್ನು ಹೊರಿಸಿದೆ. ಈ ಪಟ್ಟಿಯಲ್ಲಿ ಪರಾಗ್ ಸಾಂಘ್ವಿ ಮತ್ತು ಕೃಷ್ಣ ಕುಮಾರ್ ಕೂಡ ಸೇರಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದ ಬಲಿಷ್ಠ ಆಟಗಾರನ ವಿರುದ್ಧ ಪತ್ನಿಯಿಂದಲೇ ಕೇಸ್ ದಾಖಲು: ಜಾಮೀನು ಪಡೆದು ಹೊರಬಂದ ವೇಗಿ

ಬಾಂಗ್ಲಾದೇಶದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ನಾಸಿರ್ ಹುಸೇನ್ ಕೂಡ ಲೀಗ್‌’ನ ಭ್ರಷ್ಟಾಚಾರ-ವಿರೋಧಿ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮತ್ತೊಂದೆಡೆ 2021 ರ ಅಬುಧಾಬಿ T10 ಕ್ರಿಕೆಟ್ ಲೀಗ್ ಮತ್ತು ಪಂದ್ಯಾವಳಿಯಲ್ಲಿನ ಪಂದ್ಯಗಳನ್ನು ಭ್ರಷ್ಟಗೊಳಿಸುವ ಪ್ರಯತ್ನಗಳಿಗೆ ಸಂಬಂಧಿಸಿದ ಆರೋಪಗಳು ಸನ್ನಿ ಧಿಲ್ಲೋನ್ ಮೇಲಿದೆ.

ಸಾಂಘ್ವಿ ಪಂದ್ಯದ ಫಲಿತಾಂಶಗಳು ಮತ್ತು ಇತರ ಅಂಶಗಳ ಮೇಲೆ ಬೆಟ್ಟಿಂಗ್ ಮತ್ತು ತನಿಖಾ ಸಂಸ್ಥೆಗೆ ಸಹಕರಿಸುತ್ತಿಲ್ಲ,  ಕೃಷ್ಣ ಕುಮಾರ್ ಅವರು DACO ದಿಂದ ವಿಷಯಗಳನ್ನು ಮರೆಮಾಚಿದ್ದಾರೆ, ಮತ್ತು ಧಿಲ್ಲೋನ್ ಪಂದ್ಯವನ್ನು ಭ್ರಷ್ಟಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ವಿಶ್ವಕಪ್ 2023 : ಈ ಪಂದ್ಯಕ್ಕೆ ಯಾವ ಪ್ರೇಕ್ಷಕರಿಗೂ ಇಲ್ಲ ಎಂಟ್ರಿ, ಟಿಕೆಟ್ ಹಣ ಏನಾಗುತ್ತದೆ?

ಅಮಾನತುಗೊಂಡಿರುವ ಇತರರಲ್ಲಿ ಬ್ಯಾಟಿಂಗ್ ಕೋಚ್ ಅಜರ್ ಜೈದಿ, ಯುಎಇ ದೇಶೀಯ ಆಟಗಾರರಾದ ರಿಜ್ವಾನ್ ಜಾವೇದ್ ಮತ್ತು ಸಾಲಿಯಾ ಸಮನ್ ಮತ್ತು ತಂಡದ ಮ್ಯಾನೇಜರ್ ಶಾದಾಬ್ ಅಹ್ಮದ್ ಸೇರಿದ್ದಾರೆ. ಮೂವರು ಭಾರತೀಯರು ಸೇರಿದಂತೆ ಆರು ಜನರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಮತ್ತು ಅವರೆಲ್ಲರಿಗೂ ಮಂಗಳವಾರದಿಂದ 19 ದಿನಗಳ ಕಾಲ ಆರೋಪಗಳಿಗೆ ಪ್ರತಿಕ್ರಿಯಿಸಲು ಅವಕಾಶ ನೀಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News