Cricket ಇತಿಹಾಸದಲ್ಲಿಯೇ ಅತ್ಯಂತ ಉದ್ದದ ಸಿಕ್ಸ್ ಹೊಡೆದಿದ್ದು ಯಾರು ಗೊತ್ತಾ?

Longest Sixer - ಕ್ರಿಕೆಟ್‌ನಲ್ಲಿ ಅತಿ ಉದ್ದದ ಸಿಕ್ಸರ್‌ಗಳ ವಿಷಯ ಬಂದಾಗ ಮೊದಲಿಗೆ ನೆನಪಿಗೆ ಬರುವ ಹೆಸರುಗಳೆಂದರೆ ಅವು ಮಹೇಂದ್ರ ಸಿಂಗ್ ಧೋನಿ (MS Dhoni) , ಶಾಹಿದ್ ಅಫ್ರಿದಿ, ಯುವರಾಜ್ ಸಿಂಗ್ (Yuvraj Sing) ಮತ್ತು ಕ್ರಿಸ್ ಗೈಲ್ (Chris Gayle). ಆದರೆ, ಇವರನ್ನು ಹೊರತುಪಡಿಸಿ ಬೇರೆಯೊಬ್ಬ ಆಟಗಾರ ಈ ಸಾಧನೆ ಮಾಡಿದ್ದಾರೆ ಎಂದರೆ ನಿಮಗೂ ಆಶ್ಚರ್ಯವಾದೀತು.  

Written by - Nitin Tabib | Last Updated : Mar 20, 2022, 09:23 PM IST
  • ಇತಿಹಾಸದ ಉದ್ದದ ಸಿಕ್ಸ್ ಈ ಆಟಗಾರನ ಹೆಸರಲ್ಲಿದೆ
  • ಗೈಲ್-ಧೋನಿ ಅಲ್ಲ ಈ ಆಟಗಾರ ಮಾಡಿದ್ದಾನೆ ಈ ಸಾಧನೆ.
  • ನೀವೂ ಕೂಡ ಈ ಆಟಗಾರನ ಹೆಸರು ಕೇಳಿರಲಿಕ್ಕಿಲ್ಲ
Cricket ಇತಿಹಾಸದಲ್ಲಿಯೇ ಅತ್ಯಂತ ಉದ್ದದ ಸಿಕ್ಸ್ ಹೊಡೆದಿದ್ದು ಯಾರು ಗೊತ್ತಾ? title=
Longest Sixer In Cricket History (File Photo)

ನವದೆಹಲಿ: Longest Sixer In Cricket History - ಕ್ರಿಕೆಟ್‌ನಲ್ಲಿ (Cricket) ಅತಿ ಉದ್ದದ ಸಿಕ್ಸರ್‌ಗಳ ವಿಚಾರಕ್ಕೆ ಬಂದರೆ ಮೊದಲು ನೆನಪಿಗೆ ಬರುವುದು ಮಹೇಂದ್ರ ಸಿಂಗ್ ಧೋನಿ, ಶಾಹಿದ್ ಅಫ್ರಿದಿ, ಯುವರಾಜ್ ಸಿಂಗ್ ಮತ್ತು ಕ್ರಿಸ್ ಗೇಲ್ ಹೆಸರು. ಆದರೆ ಬೇರೆ ಆಟಗಾರರು ಈ ಕೆಲಸ ಮಾಡಿದ್ದಾರೆ ಎಂಬುದು ಕೆಲವೇ ಜನರಿಗೆ ತಿಳಿದಿದೆ. 100 ವರ್ಷಗಳ ಹಿಂದೆ, ಕ್ರಿಕೆಟ್‌ನಲ್ಲಿ ಅತಿ ಉದ್ದದ ಸಿಕ್ಸರ್‌ ವಿಶ್ವದಾಖಲೆ ಬರೆಯಲಾಗಿದೆ, ಆದರೆ ಇದುವರೆಗೆ ಯಾರೂ ಆ ದಾಖಲೆಯ ಹತ್ತಿರಕ್ಕೂ ತಲುಪಿಲ್ಲ.

ಇದನ್ನೂ ಓದಿ-ಏಕದಿನ ಕ್ರಿಕೆಟ್ ನಲ್ಲಿ ನೂತನ ದಾಖಲೆ ನಿರ್ಮಿಸಿದ ಜೂಲನ್ ಗೋಸ್ವಾಮಿ

ಈ ಆಟಗಾರನ ಹೆಸರಲ್ಲಿದೆ ಅತಿ ಉದ್ದದ ಸಿಕ್ಸರ್ ದಾಖಲೆ
19ನೇ ಶತಮಾನದಲ್ಲಿ ಆಲ್ಬರ್ಟ್ ಟ್ರಾಟ್ (Albert Trott) ಅವರು ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ್ದರು. ಆಲ್ಬರ್ಟ್ ಟ್ರಾಟ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡು ದೇಶಗಳ ಪರ ಕ್ರಿಕೆಟ್ ಆಡಿದ್ದಾರೆ. 19ನೇ ಶತಮಾನದಲ್ಲಿ ಅಲ್ಬರ್ಟ್ ಟ್ರಾಟ್ ಬಾರಿಸಿದ್ದ ಒಂದು ಸಿಕ್ಸರ್ ಲಾರ್ಡ್ಸ್ ಕ್ರಿಕೆಟ್ ಮೈದಾನದ ಪೆವಿಲಿಯನ್ ದಾಟಿತ್ತು. ಅವರ ಈ ಸಿಕ್ಸರ್ ಉದ್ದ 160 ಮೀಟರ್‌ಗಳಿಗಿಂತ ಹೆಚ್ಚಾಗಿತ್ತು. ಇದು ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಆಗಿತ್ತು. ಇಂಗ್ಲೆಂಡ್‌ನ ಮೇರಿಲ್‌ಬೋರ್ನ್ ಕ್ರಿಕೆಟ್ ಕ್ಲಬ್‌ಗಾಗಿ ಆಡುವಾಗ ಆಲ್ಬರ್ಟ್ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆ ಮಾಡಿದ್ದರು. 

ಇದನ್ನೂ ಓದಿ-IPL 2022 ಆರಂಭಕ್ಕೆ ಮುನ್ನವೆ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್!

ಚೆಂಡು ಎಲ್ಲಿಯವರೆಗೆ ತಲುಪಿತ್ತು?
ಆಲ್ಬರ್ಟ್ ಟ್ರಾಟ್ 19 ನೇ ಶತಮಾನದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರು. ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡೂ ದೇಶಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಇತಿಹಾಸದಲ್ಲಿ ಅತಿ ಉದ್ದದ 'ಸಿಕ್ಸ್' ದಾಖಲೆ ಆಲ್ಬರ್ಟ್ ಹೆಸರಿನಲ್ಲಿದೆ. 164 ಮೀಟರ್‌ ದೂರದ ಸಿಕ್ಸರ್‌ ಬಾರಿಸಿದ ಸಾಧನೆ ಅವರು ಮಾಡಿದ್ದಾರೆ. 19 ನೇ ಶತಮಾನದಲ್ಲಿ, ಬೌಲರ್‌ಗಳು ಆಲ್ಬರ್ಟ್ ಟ್ರಾಟ್ ಹೆಸರಿನಿಂದ ಭಯಪಡುತ್ತಿದ್ದರು. ಅಷ್ಟೇ ಅಲ್ಲ, ಅವರು ಬೌಲಿಂಗ್ ಗೆ ಬಂದರೆ ಬ್ಯಾಟ್ಸ್ ಮನ್ ಗಳಲ್ಲಿ ನಡುಕ ಹುಟ್ಟುತ್ತಿತ್ತು ಎನ್ನಲಾಗುತ್ತದೆ. ಈ ಆಟಗಾರ 1910 ರಲ್ಲಿ 41 ನೇ ವಯಸ್ಸಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-All England Open Badminton Championships‌: ಫೈನಲ್ ಗೆ ಲಗ್ಗೆ ಇಟ್ಟು ಹೊಸ ದಾಖಲೆ ನಿರ್ಮಿಸಿದ ಲಕ್ಷ್ಯ ಸೇನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News