ಪಾಕಿಸ್ತಾನ ಸೂಪರ್ 8 ಪ್ರವೇಶಿಸಬೇಕೆಂದರೆ ಟೀಂ ಇಂಡಿಯಾ ಸಹಾಯ ಬೇಕೇಬೇಕು! ಹೇಗೆ ಗೊತ್ತಾ?

How Can Pakistan Qualify For Super 8: ಜೂನ್ 11 ರಂದು ಅಂದರೆ ಇಂದು ಕೆನಡಾ ವಿರುದ್ಧ ಮೂರನೇ ಪಂದ್ಯ ಮತ್ತು ಜೂನ್ 16 ರಂದು ನಾಲ್ಕನೇ ಪಂದ್ಯವನ್ನು ಆಡಬೇಕಾಗಿದೆ. ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವ ಪಾಕಿಸ್ತಾನಕ್ಕೆ ಇದೀಗ ಸೂಪರ್-8 ತಲುಪಲು ಟೀಂ ಇಂಡಿಯಾದ ಕೃಪಾಕಟಾಕ್ಷ ಬೇಕಾಗಿದೆ.

Written by - Bhavishya Shetty | Last Updated : Jun 11, 2024, 08:02 PM IST
    • ಬಾಬರ್ ಆಜಂ ತಂಡ ಗ್ರೂಪ್ ಹಂತದಲ್ಲೇ ಹೊರಬೀಳುವ ಹಂತದಲ್ಲಿದೆ
    • ಪಾಕಿಸ್ತಾನಕ್ಕೆ ಸೂಪರ್-8 ತಲುಪಲು ಟೀಂ ಇಂಡಿಯಾದ ಕೃಪಾಕಟಾಕ್ಷ ಬೇಕಾಗಿದೆ
    • ಪಂದ್ಯಾವಳಿಯನ್ನು 20 ತಂಡಗಳ 4 ಗುಂಪುಗಳಾಗಿ ವಿಂಗಡಿಸಲಾಗಿದೆ
ಪಾಕಿಸ್ತಾನ ಸೂಪರ್ 8 ಪ್ರವೇಶಿಸಬೇಕೆಂದರೆ ಟೀಂ ಇಂಡಿಯಾ ಸಹಾಯ ಬೇಕೇಬೇಕು! ಹೇಗೆ ಗೊತ್ತಾ? title=
Pakistan Super 8 Entry

How Can Pakistan Qualify For Super 8: 2024ರ ಟಿ20 ವಿಶ್ವಕಪ್‌’ನಲ್ಲಿ ಪಾಕಿಸ್ತಾನ ತಂಡವು ಇಲ್ಲಿಯವರೆಗೆ ಉತ್ತಮ ಆಟ ಪ್ರದರ್ಶಿಸಲು ಸಾಧ್ಯವಾಗಿಲ್ಲ. ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತಿದ್ದರೆ, ಎರಡನೇ ಪಂದ್ಯದಲ್ಲಿ ಭಾರತ ವಿರುದ್ಧ ಸೋಲು ಕಂಡಿತ್ತು. ಇದೀಗ ಬಾಬರ್ ಆಜಂ ತಂಡ ಗ್ರೂಪ್ ಹಂತದಲ್ಲೇ ಹೊರಬೀಳುವ ಹಂತದಲ್ಲಿದೆ.

ಜೂನ್ 11 ರಂದು ಅಂದರೆ ಇಂದು ಕೆನಡಾ ವಿರುದ್ಧ ಮೂರನೇ ಪಂದ್ಯ ಮತ್ತು ಜೂನ್ 16 ರಂದು ನಾಲ್ಕನೇ ಪಂದ್ಯವನ್ನು ಆಡಬೇಕಾಗಿದೆ. ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವ ಪಾಕಿಸ್ತಾನಕ್ಕೆ ಇದೀಗ ಸೂಪರ್-8 ತಲುಪಲು ಟೀಂ ಇಂಡಿಯಾದ ಕೃಪಾಕಟಾಕ್ಷ ಬೇಕಾಗಿದೆ.

ಇದನ್ನೂ ಓದಿ: ಬ್ಯಾಂಕ್ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಜುಲೈ ವೇತನದಲ್ಲೇ ಹೆಚ್ಚಳವಾಗಲಿದೆ ತುಟ್ಟಿಭತ್ಯೆ

ಭಾರತವನ್ನು ಹೊರತುಪಡಿಸಿ, ಎ ಗುಂಪಿನಲ್ಲಿ ಪಾಕಿಸ್ತಾನ, ಅಮೆರಿಕ, ಕೆನಡಾ ಮತ್ತು ಐರ್ಲೆಂಡ್ ತಂಡಗಳಿವೆ. ಭಾರತ ಆಡಿರುವ 2 ಪಂದ್ಯಗಳಲ್ಲೂ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಖಾತೆಯಲ್ಲಿ 4 ಅಂಕಗಳಿವೆ. ಅಮೆರಿಕ ಕೂಡ ತನ್ನ ಎರಡೂ ಪಂದ್ಯಗಳನ್ನು ಗೆದ್ದು 4 ಅಂಕಗಳನ್ನು ಪಡೆದದಿದೆ, ಇನ್ನು ಭಾರತದ ನೆಟ್ ರನ್ ರೇಟ್ +1.455 ಮತ್ತು ಅಮೆರಿಕದ +0.626 ಆಗಿದೆ. ಕೆನಡಾ 2 ಪಂದ್ಯಗಳಲ್ಲಿ 1 ಗೆದ್ದಿದ್ದು, 0.274 ನೆಟ್ ರನ್ ರೇಟ್ ಮೂಲಕ ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ಐರ್ಲೆಂಡ್ ಒಂದೇ ಒಂದು ಗೆಲುವು ಪಡೆದಿಲ್ಲ. ಎರಡೂ ತಂಡಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಪಾಕಿಸ್ತಾನದ ನೆಟ್ ರನ್ ರೇಟ್ -0.150 ಮತ್ತು ಐರ್ಲೆಂಡ್ -1.712 ಆಗಿದೆ.

ಪಾಕಿಸ್ತಾನ ಸೂಪರ್-8 ತಲುಪಲು ಹೇಗೆ ಸಾಧ್ಯ?

ಪಂದ್ಯಾವಳಿಯನ್ನು 20 ತಂಡಗಳ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ 2-2 ತಂಡಗಳು ಸೂಪರ್ -8 ಗೆ ಹೋಗುತ್ತವೆ. ಸದ್ಯದ ಪರಿಸ್ಥಿತಿ ನೋಡಿದರೆ ಎ ಗುಂಪಿನಲ್ಲಿ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದ್ದು, ಪರಿಸ್ಥಿತಿ ಹದಗೆಟ್ಟಿದೆ. ಸೂಪರ್-8ರ ನಿರೀಕ್ಷೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಉಳಿದೆರಡು ಪಂದ್ಯಗಳನ್ನು ಗೆಲ್ಲಲೇಬೇಕು. ಕೇವಲ ಗೆಲುವು ಸಾಕಾಗುವುದಿಲ್ಲ, ದೊಡ್ಡ ಅಂತರದಿಂದ ಗೆಲ್ಲುವ ಮೂಲಕ ತನ್ನ ನೆಟ್ ರನ್ ರೇಟ್ ಅನ್ನು ಸುಧಾರಿಸಬೇಕಾಗುತ್ತದೆ.

ಇದನ್ನೂ ಓದಿ: ನಿಮಗಿದು ಗೊತ್ತಾ? ದೇಹದ ಈ ಭಾಗಕ್ಕೆ ತೆಂಗಿನೆಣ್ಣೆ ಹಚ್ಚಿದ್ರೆ ಬಿಳುಪಾಗಿದ್ದ ಕೂದಲು ಕಪ್ಪಾಗುತ್ತೆ! ಅದೂ ಪರ್ಮನೆಂಟ್ ಆಗಿ…

ಇನ್ನುಳಿದ 2 ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದರೂ ಸೂಪರ್-8ರಲ್ಲಿ ಸ್ಥಾನ ಖಚಿತವಾಗುವುದಿಲ್ಲ. ಭಾರತದ ಕೃಪೆ ಬೇಕೇಬೇಕು. ಅಂದರೆ ಭಾರತ ಮುಂಬರುವ ಎರಡು ಪಂದ್ಯಗಳಲ್ಲಿ ಅಮೆರಿಕ ಮತ್ತು ಕೆನಡಾವನ್ನು ಸೋಲಿಸಬೇಕು. ಅಷ್ಟೇ ಅಲ್ಲ, ಅದರ ನಿವ್ವಳ ರನ್ ರೇಟ್ ಕುಸಿತ ಕಾಣುವಂತೆ ಮಾಡಬೇಕು. ಹೀಗಾದರೆ ಮಾತ್ರ ಪಾಕಿಸ್ತಾನಕ್ಕೆ ಲಾಭವಾಗಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News