ಅಡಿಲೇಡ್ ಟೆಸ್ಟ್: ಆರಂಭಿಕ ಆಘಾತ ಕಂಡ ಭಾರತಕ್ಕೆ ಪೂಜಾರ್ ಶತಕದ ಆಸರೆ

ಇಲ್ಲಿನ ಓವೆಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭಿಕ ಆಘಾತ ಕಂಡಿದೆ.

Updated: Dec 6, 2018 , 01:08 PM IST
ಅಡಿಲೇಡ್ ಟೆಸ್ಟ್: ಆರಂಭಿಕ ಆಘಾತ ಕಂಡ ಭಾರತಕ್ಕೆ ಪೂಜಾರ್ ಶತಕದ ಆಸರೆ
Photo courtesy: Twitter

ಅಡಿಲೇಡ್: ಇಲ್ಲಿನ ಓವೆಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭಿಕ ಆಘಾತ ಕಂಡಿದೆ.

ಆಸಿಸ್ ನ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ ಬೇಗನೆ ವಿಕೆಟ್ ಕಳೆದುಕೊಂಡಿತು.ಆದರೆ ಇದರ ಮಧ್ಯದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಚೇತೆಶ್ವರ್ ಪೂಜಾರ್ ಶತಕಗಳಿಸುವ ಮೂಲಕ ಇನ್ನು ಕ್ರಿಸ್ ನಲ್ಲಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಶತಕಗಳಿಸಿದ್ದ ಮುರಳಿ ವಿಜಯ್ ಕೇವಲ11 ರನ್ ಗೆ  ಔಟಾದರು.ಇದರ ಜೊತೆಗೆ ಕನ್ನಡಿಗ ಕೆ.ಎಲ್.ರಾಹುಲ್ ಉತ್ತಮ ಮೊತ್ತವನ್ನು ಗಳಿಸುವಲ್ಲಿ ವಿಫಲವಾದರು.

ಆಸಿಸ್ ವಿರುದ್ದ ಶತಕ ಗಳಿಸುತ್ತಾರೆ ಎಂದು ನಂಬಿಕೆ ಇಟ್ಟಿದ್ದ ನಾಯಕ ವಿರಾಟ್ ಕೊಹ್ಲಿ ಕೇವಲ 3 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಸದ್ಯ ಈಗ ಬಂದಿರುವ ವರದಿ ಪ್ರಕಾರ ಎಂಟು ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿದೆ.ಕ್ರೀಸ್ ನಲ್ಲಿ ಚೇತೆಶ್ವರ್ ಪೂಜಾರ್ (117) ಮಹಮ್ಮದ್ ಶಮಿ  6 ರನ್ ಗಳಿಸಿ ಆಡುತ್ತಿದ್ದಾರೆ.