ಭಾರತಕ್ಕೆ ಸರಣಿ ಗೆಲುವು, ಏಕದಿನ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನ

     

webmaster A | Updated: Feb 14, 2018 , 01:05 PM IST
ಭಾರತಕ್ಕೆ ಸರಣಿ ಗೆಲುವು, ಏಕದಿನ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನ

ಪೋರ್ಟ್ ಎಲಿಜಬೆತ್: ಭಾರತ ತಂಡವು ದಕ್ಷಿಣ ಆಫ್ರಿಕಾದ ವಿರುದ್ದ 73 ರನ್ ಗಳ ಜಯ ಸಾಧಿಸಿದೆ. ಈ ಮೂಲಕ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆಲುವು ಸಾಧಿಸಿದೆ. 

ಈ ಸರಣಿ ಗೆಲುವಿನೊಂದಿಗೆ ಭಾರತ ತಂಡವು  ಕ್ರಿಕೆಟ್ ನ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮೊದಲ ಸ್ಥಾನಕ್ಕೆ ಏರಿದೆ.ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ  274 ರನ್ ಗಳಿಸಿತು.ಆರಂಭಿಕ ಆಟಗಾರ ರೋಹಿತ್ ಶರ್ಮಾ ಭರ್ಜರಿ ಶತಕದ(115) ನೆರವಿನಿಂದ ಭಾರತ ತಂಡವು ಉತ್ತಮ ಮೊತ್ತಗಳಿಸಿತು.

275 ರನ್ ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 42.2 ಓವರ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 201 ರನ್ ಗಳಿಸಿತು. ದಕ್ಷಿಣ ಆಫ್ರಿಕಾದ ಪರ ಹಶಿಮ್ ಆಮ್ಲಾ(71)  ಡೇವಿಡ್ ಮಿಲ್ಲರ್ (39) ಗರಿಷ್ಟ ಮೊತ್ತ ಗಳಿಸಿದರು.ಭಾರತ ತಂಡದ ಪರ ಕುಲದೀಪ್ ಯಾದವ್ (4) ಹಾರ್ದಿಕ್ ಪಾಂಡ್ಯ(2) ಯಜುವೇಂದ್ರ ಚಾಹಲ್(2) ವಿಕೆಟ್ ಗಳನ್ನು ತೆಗೆದು ದಕ್ಷಿಣ ಆಫ್ರಿಕಾ ತಂಡವನ್ನು ಬೇಗನೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.