IND vs AUS: ರೋಹಿತ್, ಕೊಹ್ಲಿ, ಗಿಲ್ ಔಟ್? ಆಸ್ಟ್ರೇಲಿಯಾ ಟಿ20 ಟೂರ್ನಿಗೆ ಭಾರತ ತಂಡ ಹೀಗಿರಲಿದೆ!

IND vs AUS T20 Series venue : ಮುಂದಿನ ವರ್ಷ ಕೆರಿಬಿಯನ್ ಮತ್ತು USA ನಲ್ಲಿ ನಡೆಯಲಿರುವ T20 ವಿಶ್ವಕಪ್ ತಯಾರಿಯ ಹಿನ್ನೆಲೆಯಲ್ಲಿ ಈ ಸರಣಿಯು ನಿರ್ಣಾಯಕವಾಗಿದೆ. ಈ ಆಸ್ಟ್ರೇಲಿಯಾ ಸರಣಿಯು ಭಾರತೀಯ ತಂಡಕ್ಕೆ ಮಹತ್ವದ್ದಾಗಿದೆ.   

Written by - Chetana Devarmani | Last Updated : Nov 7, 2023, 11:02 AM IST
  • ಆಸ್ಟ್ರೇಲಿಯಾ ಟಿ20 ಸರಣಿ
  • ಆಸ್ಟ್ರೇಲಿಯಾ ಟಿ20 ಟೂರ್ನಿಗೆ ಭಾರತ ತಂಡ
  • ರೋಹಿತ್, ಕೊಹ್ಲಿ, ಗಿಲ್ ಔಟ್?
IND vs AUS: ರೋಹಿತ್, ಕೊಹ್ಲಿ, ಗಿಲ್ ಔಟ್? ಆಸ್ಟ್ರೇಲಿಯಾ ಟಿ20 ಟೂರ್ನಿಗೆ ಭಾರತ ತಂಡ ಹೀಗಿರಲಿದೆ! title=

India vs Australia T20 Series 2023 : ವಿಶ್ವಕಪ್ 2023 ರ ನಂತರ ಭಾರತವು ಈ ತಿಂಗಳ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ T20I ಸರಣಿಯನ್ನು ಆಡಲಿದೆ. ಮುಂದಿನ ವರ್ಷ ಕೆರಿಬಿಯನ್ ಮತ್ತು USA ನಲ್ಲಿ ನಡೆಯಲಿರುವ T20 ವಿಶ್ವಕಪ್ ತಯಾರಿಯ ಹಿನ್ನೆಲೆಯಲ್ಲಿ ಈ ಸರಣಿಯು ನಿರ್ಣಾಯಕವಾಗಿದೆ. ಈ ಆಸ್ಟ್ರೇಲಿಯಾ ಸರಣಿಯು ಭಾರತೀಯ ತಂಡಕ್ಕೆ ಮಹತ್ವದ್ದಾಗಿದೆ. ವಿಶ್ವಕಪ್‌ ಮುಗಿದ ನಾಲ್ಕು ದಿನಗಳ ನಂತರ ನವೆಂಬರ್ 23 ರಂದು ಟಿ20 ಸರಣಿ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಶಮಿ ಅವರಂತಹ ಹಲವಾರು ಪ್ರಮುಖ ಆಟಗಾರರಿಗೆ ಭಾರತೀಯ ಕ್ರಿಕೆಟ್ ಮಂಡಳಿ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. 

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಭಾರತದ ಜೊತೆ ಫೈನಲ್‌ ತಲುಪಲಿದೆ ಈ ತಂಡ.. 2011ರ ಐತಿಹಾಸಿಕ ಕ್ಷಣ ಮರಳುತ್ತಾ? ಪಾಕ್‌ ದಿಗ್ಗಜನ ಭವಿಷ್ಯ! 

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಿಯಾನ್ ಬರಾಕ್ ಅವರಂತಹ ಯುವ ಆಟಗಾರರಿಗೂ ಅವಕಾಶ ಸಿಗುವ ನಿರೀಕ್ಷೆ ಇದೆ. ಹಾಗಾಗಿ, ಆಸ್ಟ್ರೇಲಿಯಾ ವಿರುದ್ಧದ ಟಿ20ಗೆ ಭಾರತ ತಂಡ ಹಲವು ಬದಲಾವಣೆಗಳಿಂದ ಕೂಡಿರಲಿದೆ. ಏಷ್ಯನ್ ಕ್ರಿಕೆಟಿಗರಾದ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಅವರನ್ನು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾಗಿ ಆಯ್ಕೆ ಮಾಡಲಾಗುತ್ತದೆ. ಸಂಜು ಸ್ಯಾಮ್ಸನ್, ರಿಂಗು ಸಿಂಗ್, ರಿಯಾನ್ ಬರಾಕ್ ಮತ್ತು ಬ್ಯಾಕ್ ಅಪ್ ಕೀಪರ್ - ಬ್ಯಾಟ್ಸ್‌ಮನ್ ಜಿದೇಶ್ ಶರ್ಮಾ ಒಳಗೊಂಡ ಮಧ್ಯಮ ಕ್ರಮಾಂಕದ ಜೊತೆಗೆ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. 

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಪಾದದ ಗಾಯದಿಂದ ಚೇತರಿಸಿಕೊಂಡಿರುವ ಕಾರಣ ವಿಶ್ವಕಪ್ ನಂತರ ದೀರ್ಘ ಕಾಲ ದೂರ ಉಳಿಯುವ ನಿರೀಕ್ಷೆಯಿದೆ. ಹೀಗಾಗಿ ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ಇಬ್ಬರೂ ಆಸ್ಟ್ರೇಲಿಯನ್ ಸರಣಿಯಲ್ಲಿ ಆಲ್ ರೌಂಡರ್ ಆಗಲಿದ್ದಾರೆ. ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ಭಾರತವು ಜಸ್ಪ್ರೀತ್ ಬುಮ್ರಾ ಅವರನ್ನು ಆಸ್ಟ್ರೇಲಿಯಾ ಟಿ20I ಗಳಿಗೆ ನಾಯಕರನ್ನಾಗಿ ನೇಮಿಸಬಹುದು. ಬುಮ್ರಾ ಹೊರತುಪಡಿಸಿ, ಬೌಲಿಂಗ್‌ನಲ್ಲಿ ಅರ್ಷ್‌ದೀಪ್ ಸಿಂಗ್ ಮತ್ತು ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ. ಯುಜ್ವೇಂದ್ರ ಚಹಾಲ್ ಮತ್ತು ರವಿ ಬಿಷ್ಣೋಯ್ ಸ್ಪಿನ್ನರ್‌ಗಳಾಗಿರಲಿದ್ದಾರೆ.

ಇದನ್ನೂ ಓದಿ : ದಾಖಲೆಗಾಗಿ ಕೊಹ್ಲಿ ನಿಧಾನವಾಗಿ ಆಡ್ತಾರಾ? ನಾಯಕ ರೋಹಿತ್ ಶರ್ಮಾ ಹೇಳಿದ್ದೇನು? 

ಟೀಮ್ ಇಂಡಿಯಾ ಟಿ20 ತಂಡ ಹೀಗಿರಬಹುದು: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (WK), ರಿಂಕು ಸಿಂಗ್, ರಯಾನ್ ಬರಾಕ್, ಜಿತೇಶ್ ಶರ್ಮಾ (WK), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ (C), ಅರ್ಶ್ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ರವಿ ಬಿಷ್ಣೋಯ್ , ಯುಜ್ವೇಂದ್ರ ಚಹಾಲ್‌, 

ಆಸ್ಟ್ರೇಲಿಯಾ ಟಿ20 ತಂಡ ಹೀಗಿರಬಹುದು: ಮ್ಯಾಥ್ಯೂ ವೇಡ್ (ನಾಯಕ), ಜೇಸನ್ ಬೆಹ್ರೆಂಡೋರ್ಫ್, ಸೀನ್ ಅಬಾಟ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್ ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಸ್ಟೋನಿಸ್, ಸ್ಟೋನಿಸ್ ಜಾಂಬಾ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News