close

News WrapGet Handpicked Stories from our editors directly to your mailbox

INDvsNZ: ನ್ಯೂಜಿಲೆಂಡ್​​ನಲ್ಲಿ 8 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ

ಮೊದಲ ಏಕದಿನ ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಂಡ್ ನೀಡಿದ್ದ ಸುಲಭ ಗುರಿಯನ್ನು ಬೆನ್ನತ್ತಿದ ಕೊಹ್ಲಿ ಪಡೆ 8 ವಿಕೆಟ್​​ಗಳ ಜಯದೊಂದಿಗೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Yashaswini V Yashaswini V | Updated: Jan 23, 2019 , 03:42 PM IST
INDvsNZ: ನ್ಯೂಜಿಲೆಂಡ್​​ನಲ್ಲಿ 8 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ
Pic Courtesy: IANS

ನೇಪಿಯರ್: ಭಾರತ ನ್ಯೂಜಿಲೆಂಡ್ ಪ್ರವಾಸವನ್ನು ವಿಜಯದೊಂದಿಗೆ ಪ್ರಾರಂಭಿಸಿದೆ. ಬುಧವಾರ(ಜನವರಿ 23) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಅತಿಥೇಯ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿದೆ. ಇದು ಕಿವೀಸ್ ನೆಲದಲ್ಲಿ ಭಾರತಕ್ಕೆ ಅತಿ ದೊಡ್ಡ ವಿಜಯವಾಗಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ಪಡೆ ಮಹಮ್ಮದ್ ಶಮಿ ಹಾಗೂ ಕುಲದೀಪ್ ಯಾದವ್ ಅವರ ಸ್ಪಿನ್ ದಾಳಿಗೆ ತತ್ತರಿಸಿತು. ಮ್ಯಾನ್ ಆಫ್ ದಿ ಮ್ಯಾಚ್ ಮೊಹಮ್ಮದ್ ಶಮಿ ಮೂರು ವಿಕೆಟ್ಗಳನ್ನು ಗಳಿಸಿದರು. ಕುಲ್ದೀಪ್ ಯಾದವ್ ನಾಲ್ಕು ವಿಕೆಟ್ ಪಡೆದರೆ, ಯೋಗೇಂದ್ರ ಚಾಹಲ್ ಎರಡು ವಿಕೆಟ್ ಮತ್ತು ಕೇದಾರ ಜಾಧವ್ ಒಂದು ವಿಕೆಟ್ ಪಡೆದರು. 38 ಓವರ್ ಗಳಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡ ಕಿವೀಸ್ ಪಾಳಯ 157 ರನ್ ಗಳಿಸಲು ಮಾತ್ರ ಶಕ್ತವಾಯಿತು.

ಅತಿಥೇಯ ನ್ಯೂಜಿಲೆಂಡ್ ನೀಡಿದ್ದ ಸುಲಭ ಗುರಿಯನ್ನು ಬೆನ್ನತ್ತಿದ ಕೊಹ್ಲಿ ಪಡೆ 34.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು. ಆರಂಭಿಕ ಆಟಗಾರ ಶಿಖರ್ ಧವನ್(ಔಟಾಗದೆ 75), ನಾಯಕ ವಿರಾಟ್ ಕೊಹ್ಲಿ(45), ರೋಹಿತ್ ಶರ್ಮಾ(11) ಮತ್ತು ಅಂಬಟ್ಟಿ ರಾಯುಡು ಅಜೇಯ 13 ರನ್ ಗಳಿಸಿದರು. ಶಿಖರ್ ಧವರ್ನ್ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟ ಇನ್ನೂ 85 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದರು.