IPL 2022: ಐಪಿಎಲ್‌ನಲ್ಲಿ ಎಚ್ಚರಿಕೆ ವಹಿಸದಿದ್ದರೆ ಆಘಾತ ಗ್ಯಾರಂಟಿ! ಪ್ಲೇಯರ್ಸ್ ತಪ್ಪಿಗೆ ಬಿಸಿಸಿಐ ವಿಧಿಸುವ ದಂಡ ಎಷ್ಟು ಗೊತ್ತಾ?

IPL 2022: ಐಪಿಎಲ್‌ 2022  ನಲ್ಲಿ ಬಿಸಿಸಿಐ ಬಯೋ-ಬಬಲ್‌ಗಾಗಿ ಕಟ್ಟುನಿಟ್ಟಾದ ನಿಯಮಗಳನ್ನು ಮಾಡಿದೆ. ಆಟಗಾರರು, ಅವರ ಕುಟುಂಬ ಸದಸ್ಯರು ಮತ್ತು ಎಲ್ಲಾ ಫ್ರಾಂಚೈಸಿಗಳಿಗೆ ಈ ನಿಯಮಗಳು ಅನ್ವಯಿಸಲಿದ್ದು ಪ್ರತಿಯೊಬ್ಬರಿಗೂ ವಿಭಿನ್ನ ನಿಯಮಗಳನ್ನು ಮಾಡಲಾಗಿದೆ.

Written by - Yashaswini V | Last Updated : Mar 16, 2022, 10:08 AM IST
  • ಬಿಸಿಸಿಐ ಬಯೋ ಬಬಲ್‌ಗಾಗಿ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಿದೆ
  • ಐಪಿಎಲ್‌ನಲ್ಲಿ ಒಂದು ತಪ್ಪು ಮಾಡಿದರೆ ಕೋಟಿಗಟ್ಟಲೆ ದಂಡ ಕಟ್ಟಬೇಕಾಗುತ್ತದೆ
  • ಐಪಿಎಲ್ 2022 ಮಾರ್ಚ್ 26 ರಿಂದ ಆರಂಭವಾಗಲಿದೆ
IPL 2022: ಐಪಿಎಲ್‌ನಲ್ಲಿ ಎಚ್ಚರಿಕೆ ವಹಿಸದಿದ್ದರೆ ಆಘಾತ ಗ್ಯಾರಂಟಿ! ಪ್ಲೇಯರ್ಸ್ ತಪ್ಪಿಗೆ ಬಿಸಿಸಿಐ ವಿಧಿಸುವ ದಂಡ ಎಷ್ಟು ಗೊತ್ತಾ? title=
IPL 2022, BCCI, Bio Bubble Rules

IPL 2022: ಐಪಿಎಲ್ 2022ರ ಆರಂಭಕ್ಕೆ ಇನ್ನೂ ಸ್ವಲ್ಪ ಸಮಯವಷ್ಟೇ ಬಾಕಿ ಉಳಿದಿದೆ. ಇದಕ್ಕಾಗಿ ಎಲ್ಲಾ ತಂಡಗಳು ಸಿದ್ಧತೆಗಳನ್ನು ಪೂರ್ಣಗೊಳಿಸಿವೆ. ಬಿಸಿಸಿಐ ಕೂಡ ಈ ಬಾರಿಯ ಟೂರ್ನಿಯಲ್ಲಿ ಯಾವುದೇ ಅಡಚಣೆ ಆಗದಂತೆ ನಿಗಾವಹಿಸಲು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೆಲ್ಲದರ ನಡುವೆ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಐಪಿಎಲ್ ಬಯೋ ಬಬಲ್‌ಗಾಗಿ ಕಠಿಣ ನಿಯಮಗಳನ್ನು ಮಾಡಿದೆ. ಐಪಿಎಲ್ ಸಮಯದಲ್ಲಿ ಕರೋನಾ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿದ್ದು ಕಂಡು ಬಂದರೆ ಆಟಗಾರರು ಕಠಿಣ ನಿರ್ಬಂಧಗಳಿಗೆ ಒಳಗಾಗಬೇಕಾಗಬಹುದು. ಈ ಬಾರಿ ಬಯೋ-ಬಬಲ್‌ನ ನಿಯಮಗಳು ಮೊದಲಿಗಿಂತ ಕಠಿಣವಾಗಿರಲಿವೆ.

ಆಟಗಾರರಿಗೆ ಬಯೋ-ಬಬಲ್ ನಿಯಮಗಳು:
ಕಳೆದ ವರ್ಷದ ತಪ್ಪುಗಳಿಂದ ಬಿಸಿಸಿಐ ಪಾಠ ಕಲಿತಿದೆ. ಐಪಿಎಲ್ 2021ರ ಅನುಭವದಿಂದಾಗಿ ಬಿಸಿಸಿಐ ಬಯೋ ಬಬಲ್ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ.  ಐಪಿಎಲ್ 2022 (IPL 2022)  ರಲ್ಲಿ ಮೊದಲ ಬಾರಿಗೆ ಬಯೋ ಬಬಲ್ ನಿಯಮಗಳನ್ನು ಉಲ್ಲಂಘಿಸಿದರೆ ಆ ಆಟಗಾರನು ಏಳು ದಿನಗಳ ಕಾಲ ಕ್ವಾರಂಟೈನ್ ನಿಯಮ ಪಾಲಿಸಬೇಕಾಗುತ್ತದೆ. ಎರಡನೇ ಬಾರಿಗೆ ಬಬಲ್ ನಿಯಮ ಉಲ್ಲಂಘಿಸಿದರೆ 7 ದಿನಗಳ ಕಾಲ ಕ್ವಾರಂಟೈನ್ ಹೊರತುಪಡಿಸಿ ಒಂದು ಪಂದ್ಯದ ನಿಷೇಧಕ್ಕೆ ಕಾರಣವಾಗುತ್ತದೆ ಮತ್ತು ಅವರು ಭಾಗವಹಿಸಲು ಸಾಧ್ಯವಾಗದ ಪಂದ್ಯಕ್ಕೆ ಹಣವನ್ನು ಪಡೆಯುವುದಿಲ್ಲ. ಮೂರನೇ ಬಾರಿಗೆ ಬಯೋ ಬಬಲ್ ನಿಯಮ ಉಲ್ಲಂಘಿಸುವ ಆಟಗಾರನು ಇಡೀ ಋತುವಿನಲ್ಲಿ ಪಂದ್ಯಾವಳಿಯಿಂದ ಹೊರಗುಳಿಯಬೇಕಾಗುತ್ತದೆ ಮತ್ತು ಫ್ರಾಂಚೈಸ್ ಆ ಆಟಗಾರನ ಸ್ಥಾನದಲ್ಲಿ ಇನ್ನೊಬ್ಬ ಆಟಗಾರನನ್ನು ಪಡೆಯುವುದಿಲ್ಲ.

ಇದನ್ನೂ ಓದಿ- IPL 2022: ಐಪಿಎಲ್ 2022ರ ನಿಯಮಗಳಲ್ಲಿ ಬದಲಾವಣೆ

ಈ ರೀತಿ ಮಾಡಿದರೆ 1 ಕೋಟಿ ದಂಡ ಕಟ್ಟಬೇಕಾಗುತ್ತದೆ:
ಆಟಗಾರರು ಹಾಗೂ ಫ್ರಾಂಚೈಸಿಗಳಿಗೆ ಐಪಿಎಲ್ ಬಯೋ ಬಬಲ್‌ಗಾಗಿ (Bio Bubble) ಬಿಸಿಸಿಐ ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿದೆ. ಐಪಿಎಲ್ ಸಮಯದಲ್ಲಿ ಫ್ರಾಂಚೈಸಿಯು ಹೊರಗಿನವರನ್ನು ಬಬಲ್‌ಗೆ ತಂದರೆ, ಫ್ರಾಂಚೈಸಿ 1 ಕೋಟಿ  ರೂ.ದಂಡವನ್ನು ಪಾವತಿಸಬೇಕಾಗುತ್ತದೆ. ಎರಡನೇ ಬಾರಿಗೆ, ಫ್ರಾಂಚೈಸಿಗೆ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ ಮತ್ತು ಮೂರನೇ ಬಾರಿ ಈ ರೀತಿಯ ನಿಯಮ ಉಲ್ಲಂಘನೆಗೆ  ಎರಡು ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಇದಲ್ಲದೆ, ಈ ಬಾರಿಯ ಐಪಿಎಲ್ ಋತುವಿನಲ್ಲಿ ಬಿಸಿಸಿಐ ಕೋವಿಡ್ ಪರೀಕ್ಷೆ (Covid Test) ಬಗ್ಗೆ ಕೂಡ  ಗಮನ ಹರಿಸಿದೆ. ಕೋವಿಡ್ ಪರೀಕ್ಷೆಗೂ ಪ್ರತ್ಯೇಕ ನಿಯಮಗಳನ್ನು ಮಾಡಲಾಗಿದೆ. ಯಾವುದೇ ತಂಡದ ಸದಸ್ಯರು ಕೋವಿಡ್ ಪರೀಕ್ಷೆ ನಡೆಸದಿದ್ದರೆ, ಮೊದಲ ಬಾರಿಗೆ ಎಚ್ಚರಿಕೆ ನೀಡಲಾಗುವುದು, ಎರಡನೇ ಬಾರಿಗೆ ಬಿಸಿಸಿಐ 75 ಸಾವಿರ ರೂಪಾಯಿ ದಂಡ ವಿಧಿಸುತ್ತದೆ ಮತ್ತು ಕ್ರೀಡಾಂಗಣ ಅಥವಾ ತರಬೇತಿ ಮೈದಾನಕ್ಕೆ ಹೋಗುವುದನ್ನು ನಿಷೇಧಿಸುತ್ತದೆ.  

ಇದನ್ನೂ ಓದಿ- ಖುಲಾಯಿಸಲಿದೆ ಈ ಇಬ್ಬರು ಆಟಗಾರರ ಅದೃಷ್ಟ, ಸಿಗಲಿದೆ IPLನಲ್ಲಿ ಆಡುವ ಅವಕಾಶ

ಆಟಗಾರರ ಕುಟುಂಬ ಸದಸ್ಯರಿಗೆ ನಿಯಮಗಳು:
IPL 2022 ರಲ್ಲಿ ಮೊದಲ ಬಾರಿಗೆ, ಆಟಗಾರರ ಕುಟುಂಬ ಸದಸ್ಯರು ಬಯೋ-ಬಬಲ್ ನಿಯಮಗಳನ್ನು ಉಲ್ಲಂಘಿಸಿದರೆ ಆಟಗಾರನು ಸಹ ಏಳು ದಿನಗಳವರೆಗೆ ಕ್ವಾರಂಟೈನ್ ಮಾಡಬೇಕಾಗುತ್ತದೆ, ಎರಡನೇ ಬಾರಿಗೆ ಬಯೋ ಬಬಲ್ ನಿಯಮ ಉಲ್ಲಂಘಿಸುವ ಆಟಗಾರನ ಕುಟುಂಬದ ಸದಸ್ಯರನ್ನು ಇಡೀ ಋತುವಿನಲ್ಲಿ ಐಪಿಎಲ್‌ನ ಬಯೋ-ಬಬಲ್ನಿಂದ ಹೊರಗಿಡಲಾಗುವುದು. ಜೊತೆಗೆ ಸಂಬಂಧಪಟ್ಟ ಆಟಗಾರ ಮತ್ತೆ ಏಳು ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News