GT v CSK Qualifier 1: ಧೋನಿಗೆ ‘ಗಿಲ್’ ಪರೀಕ್ಷೆ-ಫೈನಲ್ ಎಂಟ್ರಿಗೆ ಕಾದಾಟ! ಅಮೋಘ ಪಂದ್ಯದ ಪ್ಲೇಯಿಂಗ್ 11 ಹೀಗಿದೆ

IPL 2023 Qualifier 1 CSK vs GT: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿ ಬಿ) ತಂಡ ಐಪಿಎಲ್‌ ನಿಂದ ಹೊರಗುಳಿದಿತ್ತು. ಇಂತಹ ಪರಿಸ್ಥಿತಿಯಲ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಎಲ್ಲರ ಕಣ್ಣು ಈ ಯುವ ಬ್ಯಾಟ್ಸ್‌ ಮನ್‌ ಮೇಲಿದ್ದು, ಭಾರತದ ಅತ್ಯುತ್ತಮ ನಾಯಕರಲ್ಲಿ ಒಬ್ಬರಾದ ಧೋನಿ ಖಂಡಿತವಾಗಿಯೂ ಗಿಲ್ ಗಾಗಿ ವಿಶೇಷ ತಂತ್ರವನ್ನು ಸಿದ್ಧಪಡಿಸಬೇಕು ಎಂದನಿಸುತ್ತದೆ.

Written by - Bhavishya Shetty | Last Updated : May 23, 2023, 07:54 AM IST
    • ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಕ್ವಾಲಿಫೈಯರ್‌ ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಾಡಲಿದೆ
    • ಧೋನಿ ಖಂಡಿತವಾಗಿಯೂ ಗಿಲ್ ಗಾಗಿ ವಿಶೇಷ ತಂತ್ರವನ್ನು ಸಿದ್ಧಪಡಿಸಬೇಕು
    • ಗುಜರಾತ್ ಟೈಟಾನ್ಸ್ ಈ ಋತುವಿನಲ್ಲಿ ಚೆಪಾಕ್‌ ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ
GT v CSK Qualifier 1: ಧೋನಿಗೆ ‘ಗಿಲ್’ ಪರೀಕ್ಷೆ-ಫೈನಲ್ ಎಂಟ್ರಿಗೆ ಕಾದಾಟ! ಅಮೋಘ ಪಂದ್ಯದ ಪ್ಲೇಯಿಂಗ್ 11 ಹೀಗಿದೆ title=
CSK vs GT Qualifier

IPL 2023 Qualifier 1 CSK vs GT: IPL 2023 ರ ಮೊದಲ ಕ್ವಾಲಿಫೈಯರ್ ಪಂದ್ಯ ಇಂದು ಸಂಜೆ 7:30ಕ್ಕೆ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮಹೇಂದ್ರ ಸಿಂಗ್ ಧೋನಿ ಚಾಣಾಕ್ಷ ಎಂದು ಹೆಸರುವಾಸಿಯಾಗಿದ್ದಾರೆ. ಆದರೆ ಅವರ ತಂಡ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಕ್ವಾಲಿಫೈಯರ್‌ ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಾಡಲಿದ್ದು, ಇನ್ ಫಾರ್ಮ್ ಶುಭ್ಮನ್ ಗಿಲ್ ವಿರುದ್ಧ ಪರೀಕ್ಷೆ ಎದುರಿಸುವಂತಾಗಿದೆ.

ಇದನ್ನೂ ಓದಿ; Imran Khan: ಜೈಲಿಗೆ ಹೋಗುವ ಭಯದಿಂದ ಅಸ್ವಸ್ಥರಾದ ಇಮ್ರಾನ್ ಖಾನ್ ಆಸ್ಪತ್ರೆಗೆ ದಾಖಲು!

ಇಂದು ಚೆನ್ನೈ ಮತ್ತು ಗುಜರಾತ್ ನಡುವೆ ಭರ್ಜರಿ ಪಂದ್ಯ:

ಕಳೆದ ಪಂದ್ಯದಲ್ಲಿ ಅಜೇಯ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅವರ ಶತಕದ ಪ್ರಯತ್ನವನ್ನು ಗಿಲ್ ಉರುಳಿಸಿದ್ದರು. ಇದರಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿ ಬಿ) ತಂಡ ಐಪಿಎಲ್‌ ನಿಂದ ಹೊರಗುಳಿದಿತ್ತು. ಇಂತಹ ಪರಿಸ್ಥಿತಿಯಲ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಎಲ್ಲರ ಕಣ್ಣು ಈ ಯುವ ಬ್ಯಾಟ್ಸ್‌ ಮನ್‌ ಮೇಲಿದ್ದು, ಭಾರತದ ಅತ್ಯುತ್ತಮ ನಾಯಕರಲ್ಲಿ ಒಬ್ಬರಾದ ಧೋನಿ ಖಂಡಿತವಾಗಿಯೂ ಗಿಲ್ ಗಾಗಿ ವಿಶೇಷ ತಂತ್ರವನ್ನು ಸಿದ್ಧಪಡಿಸಬೇಕು ಎಂದನಿಸುತ್ತದೆ.

ಗುಜರಾತ್ ಟೈಟಾನ್ಸ್ ಈ ಋತುವಿನಲ್ಲಿ ಚೆಪಾಕ್‌ ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಚೆನ್ನೈ ಇಲ್ಲಿ ಏಳು ಪಂದ್ಯಗಳನ್ನು ಆಡಿದ್ದು, ಪ್ರತಿ ಪಂದ್ಯದಲ್ಲೂ ಪಿಚ್‌ ನ ಸ್ವರೂಪ ಬದಲಾಗಿದೆ. ಆದ್ದರಿಂದ ಮುಂಬರುವ ಪಂದ್ಯದಲ್ಲಿ ಹೇಗೆ ಪಂದ್ಯವನ್ನಾಡಲಿದೆ ಎಂದು ಊಹಿಸುವುದು ಕಷ್ಟ.

ಗುಜರಾತ್ ನ ಫ್ರಾಂಚೈಸಿ ಕೂಡ ಚೆನ್ನೈನ ಹಾದಿಯಲ್ಲೇ ಸಾಗುತ್ತಿರುವ ಕಾರಣ ಈ ಪಂದ್ಯವೂ ಕುತೂಹಲ ಮೂಡಿಸಿದೆ.

ಚೆಪಾಕ್ ಪಿಚ್ ಎದುರಿಸುವುದು ಸವಾಲು!

ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ನಾಯಕತ್ವ ಹೊಂದಿದ್ದಾರೆ. ಧೋನಿಯಂತಹ ನುರಿತ ತಂತ್ರಜ್ಞ-ನಾಯಕ ಸಿಎಸ್ ಕೆ ತಂಡದಲ್ಲಿದ್ದಾರೆ. ಗುಜರಾತ್ ತಂಡವು ಚೆನ್ನೈನಂತೆಯೇ ಪ್ಲೇಯಿಂಗ್ 11 ರಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡುವ ಆಸಕ್ತಿ ಹೊಂದಿಲ್ಲ. ಆದ್ದರಿಂದ, ಈ ಪಂದ್ಯವು ಒಂದೇ ರೀತಿಯ ತಂತ್ರ ಹೊಂದಿರುವ ತಂಡಗಳ ನಡುವೆ ನಡೆಯಲಿದ್ದು, ಕುತೂಹಲ ಮೂಡಿಸಿದೆ. ಚೆಪಾಕ್ ಪಿಚ್‌ ನ ನಿಧಾನಗತಿಯನ್ನು ಎದುರಿಸುವುದು ಗುಜರಾತ್‌ ಗೆ ಸವಾಲಾಗಿದೆ. ಇದಲ್ಲದೇ ಪವರ್ ಪ್ಲೇನಲ್ಲಿ ದೀಪಕ್ ಚಹಾರ್ ಬೌಲಿಂಗ್ ಮತ್ತು ಅಂತಿಮ ಓವರ್‌ ನಲ್ಲಿ ಮಥಿಸಾ ಪತಿರಾನ ಅವರ ಪ್ರದರ್ಶನವೂ ಫಲಿತಾಂಶದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ.

ಪತಿರಾನ ಮತ್ತು ಸ್ಪಿನ್ನರ್ ಮಹಿಷ್ ತಿಕಷ್ಣ ಬೌಲಿಂಗ್ ಎದುರಿಸಲು ಪಾಂಡ್ಯ ಮತ್ತು ನೆಹ್ರಾ ಅವರು ಶ್ರೀಲಂಕಾದ ನಾಯಕ ದಸುನ್ ಶನಕ ಅವರ ಸಲಹೆಯನ್ನು ತೆಗೆದುಕೊಳ್ಳಲ್ಲಿದ್ದಾರೆ. ಶನಕ ಅವರನ್ನು ಆಲ್‌ರೌಂಡರ್ ಆಗಿ ಬಳಸಬಹುದು. ಆದರೆ ಟಾಸ್ ಬಳಿಕ, ಇಲ್ಲಿನ ಪರಿಸ್ಥಿತಿಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಎಡಗೈ ಸ್ಪಿನ್ನರ್ ಆರ್ ಸಾಯಿ ಕಿಶೋರ್ ಅವರನ್ನೂ ಆಯ್ಕೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ಡೆವೊನ್ ಕಾನ್ವೇ ಮತ್ತು ರಿತುರಾಜ್ ಗಾಯಕ್ವಾಡ್ ಅವರ ಉತ್ತಮ ಆರಂಭ ಚೆನ್ನೈಗೆ ಬಹಳ ಮುಖ್ಯವಾಗಿದೆ. ಚೆಪಾಕ್‌ ನಲ್ಲಿ ಅಜಿಂಕ್ಯ ರಹಾನೆ ಅವರ ಪ್ರದರ್ಶನವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಮತ್ತೊಂದೆಡೆ ಶಿವಂ ದುಬೆ ಈ ಋತುವಿನಲ್ಲಿ 33 ಸಿಕ್ಸರ್‌ ಗಳನ್ನು ಬಾರಿಸಿದ್ದಾರೆ. ಆದರೆ, ಅನುಭವಿ ಮೊಹಮ್ಮದ್ ಶಮಿ ಮತ್ತು ರಶೀದ್ ಖಾನ್ ಅವರನ್ನು ಎದುರಿಸುವುದು ಚೆನ್ನೈ ಬ್ಯಾಟ್ಸ್‌ಮನ್‌ ಗಳಿಗೆ ಹೇಳುವಷ್ಟು ಸುಲಭವಲ್ಲ.

ಪಂದ್ಯಕ್ಕೆ ಸಮತಟ್ಟಾದ ಪಿಚ್‌ ಮಾಡಿದರೆ ಸ್ಪಿನ್ನರ್‌ ಗಳ ಪಾತ್ರ ಪ್ರಮುಖವಾಗುತ್ತದೆ. ರವೀಂದ್ರ ಜಡೇಜಾ, ಮೊಯಿನ್ ಅಲಿ ಮತ್ತು ತಿಕಷ್ಣ ರೂಪದಲ್ಲಿ ಚೆನ್ನೈ ಉತ್ತಮ ಸ್ಪಿನ್ನರ್‌ಗಳನ್ನು ಹೊಂದಿದ್ದರೆ, ಟೈಟಾನ್ಸ್‌ ಗೆ ರಶೀದ್ ಮತ್ತು ನೂರ್ ಅಹ್ಮದ್ ಇದ್ದಾರೆ. ಅಫ್ಘಾನಿಸ್ತಾನದ ಇಬ್ಬರೂ ಸ್ಪಿನ್ನರ್‌ ಗಳು ಈ ಋತುವಿನಲ್ಲಿ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ.

ಇದನ್ನೂ ಓದಿ; The Kerala Story Collection: ಬಾಕ್ಸಾಫೀಸ್‌ನಲ್ಲಿ 'ದಿ ಕೇರಳ ಸ್ಟೋರಿ' ಮತ್ತೊಂದು ದಾಖಲೆ!

ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ XI

ಚೆನ್ನೈ ಸೂಪರ್ ಕಿಂಗ್ಸ್: ರಿತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ಕ್ಯಾ&ವಿ,ಕೀ), ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮಹೇಶ್ ತಿಕ್ಷಣ (ಇಂಪಾಕ್ಟ್ ಪ್ಲೇಯರ್: ಮತಿಶ ಪತಿರಣ)

ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (ವಿ.ಕೀ), ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ (ಕ್ಯಾ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಯಶ್ ದಯಾಲ್ (ಇಂಪಾಕ್ಟ್ ಪ್ಲೇಯರ್: ದಸುನ್ ಶನಕ)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News