robin uthappa: ರಾಯಲ್ ಚಾಲೆಂಜರ್ಸ್ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರನ್ನು ಬೆದರಿಸಿ ಐಪಿಎಲ್ನ ಮುಂಬೈ ಫ್ರಾಂಚೈಸಿ ಮಾಲೀಕರು ವರ್ಗಾವಣೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದ ಶಾಕಿಂಗ್ ಸತ್ಯ ಇದೀಗ ಬೆಳಕಿಗೆ ಬಂದಿದೆ. ಹಲವಾರು ದಿನಗಳ ಕಾಲ ಇದನ್ನು ಗುಟ್ಟಾಗಿ ಇಟ್ಟುಕೊಂಡಿದ್ದ ಸ್ಟಾರ್ ಆಟಗಾರ ಇದೀಗ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
Anuj Rawat: ಅದೆಷ್ಟೋ ಮಂದಿ ಕ್ರಿಕೆಟ್ ಆಡುವ ಕನಸು ಹೊತ್ತು ಕ್ರೀಡೆಗೆ ಕಾಲಿಡುತ್ತಾರೆ ಆದರೆ ಅದೃಷ್ಟ ಎನ್ನುವುದು ಎಲ್ಲರ ಕೈ ಹಿಡಿಯುವುದಿಲ್ಲ. ಇನ್ನೂ ಕೆಲವೊಬ್ಬರಿಗೆ ಆಡುವ ಅವಕಾಶ ಸಿಕ್ಕರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವುದಿಲ್ಲ. ತಮ್ಮ ದೇಶಕ್ಕಾಗಿ ಕ್ರಿಕೆಟ್ ಆಡಬೇಕು ತಮ್ಮ ರಾಷ್ಟ್ರದ ಕೀರ್ತಿಯನ್ನು ಬೆಳಗಬೇಕು ಎಂಬುದು ಎಲ್ಲರ ಕನಸ್ಸಾಗಿರುತ್ತದೆ. ಎಲ್ಲರಂತೆಯೇ ಕ್ರಿಕೆಟ್ ಆಡಿ ಒಳ್ಳೆ ಹೆಸರು ಗಳಿಸಬೇಕು ಎಂದು ಬಂದವರಲ್ಲಿ ಈ ಬಡ ಮನೆಯ ಯುವಕ ಕೂಡ ಒಬ್ಬ. ಸಾಧನೆಯ ಕನಸು ಕಟ್ಟಿ ಬಂದಿದ್ದ ಈತನಿಗೆ ದಾರಿ ಮಾಡಿ ಕೊಟ್ಟಿದ್ದು ಆರ್ಸಿಬಿ ತಂಡ.
RCB: 2025ರ ಐಪಿಎಲ್ ಸೀಸನ್ ಭಾರಿ ಕುತೂಹಲ ಹುಟ್ಟುಹಾಕಿದೆ, ಹರಾಜಿಗೆ ಇನ್ನೇನು ಎರಡು ತಿಂಗಳು ಬಾಕಿ ಇರುವಾಗಲೇ ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ, ಯಾವ ಆಟಗಾರರನ್ನು ಕೈ ಬಿಟಲಿದೆ, ಇನ್ನೂ ತಂಡಕ್ಕೆ ಯಾವ ಆಟಗಾರರು ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲವನ್ನು ಹುಟ್ಟು ಹಾಕಿದೆ.
Mohammad siraj: ಐಪಿಎಲ್ ಹರಾಜಿಗೆ ಇನ್ನೇನು ಕೆಲವೇ ದಿನ ಉಳಿದಿದೆ, ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳಲು ವಿವಿಧ ತಂಡದ ಫ್ರಾಂಚೈಸಿಗಳು ಕಸರತ್ತು ನಡೆಸುತ್ತಿವೆ. ಈ ಸೀಸನ್ನಲ್ಲಿ ಹೊಸ ನಿಯಮಗಳ ಕಾರಣ ಎಲ್ಲಾ ತಂಡಗಳಲ್ಲಿಯೂ ಭಾರಿ ಬದಲಾವಣೆ ಖಚಿತ ಎಂದೆ ಹೇಳಬಹುದು. ಈಗಿರುವಾಗ ಆರ್ಸಿಬಿ ತಂಡ ಯಾವ ಯಾವ ಆಟಗಾರರನ್ನು ಇದೀಗ ಉಳಿಸಿಕೊಳ್ಳಲಿದೆ ಎಂದು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.
Indian Premier League 2025: 2023ರ ಮಹಾರಾಜ ಟ್ರೋಫಿ ಲೀಗ್ನಲ್ಲೂ ಅತೀಹೆಚ್ಚು ರನ್ ಗಳಿಸಿದ್ದೆ. ಆದರೂ ನನಗೆ ಐಪಿಎಲ್ನಲ್ಲಿ ಆಡುವ ಅವಕಾಶ ಸಿಗಲಿಲ್ಲವೆಂದು ಕರುಣ್ ಕಣ್ಣೀರಿಟ್ಟಿದ್ದರು.
RCB: ಐಪಿಎಲ್ 2025 ರ ಮೆಗಾ ಹರಾಜಿನ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಸಂಪೂರ್ಣವಾಗಿ ಬದಲಾಗಲಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವರ್ಷದ ಡಿಸೆಂಬರ್ನಲ್ಲಿ ಮೆಗಾ ಹರಾಜು ನಡೆಸಲು ಸಕಲ ಸಿದ್ದತೆಗಳನ್ನು ನಡೆಸುತ್ತಿದೆ. ಈಗಾಗಲೇ 10 ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿ ಧಾರಣ ನೀತಿಯ ಬಗ್ಗೆ ಅವರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲಾಗಿದೆ.
ಒಂದು ಕಾಲದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದ ಟೀಂ ಇಂಡಿಯಾದ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಅವರ ಬೆವರಿಳಿಸಿದ್ದ ಆಟಗಾರ ಎಲ್ಲಾ ಬ್ಯಾಟ್ಸ್ಮೆನ್ಗಳಿಗೂ ತಲೆ ನೋವಾಗಿ ಪರಿಣಮಿಸಿದ್ದರು. ಆತ ಬೇರೆ ಯಾರೂ ಅಲ್ಲ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ನಾಥನ್ ಬ್ರಾಕೆನ್. ಐಪಿಎಲ್ ಫ್ರಾಂಚೈಸಿ ಆರ್ಸಿಬಿ ಅವರಿಗಾಗಿ ಕೋಟಿಗಟ್ಟಲೆ ಖರ್ಚು ಮಾಡಲು ರೆಡಿಯಾಗಿತ್ತು, ಆದರೆ ಅವರು ಆರ್ಸಿಬಿ ತಂಡದ ಪರ ಆಟವಾಡಲು ನೋ ಎಂದಿದ್ದರು.
RCB Captain: ರಾಯಲ್ ಚಾಲೆಂಜರ್ಸ್ ಬೆಂಗಳೂರು 2008 ರಲ್ಲಿ ಪ್ರಾರಂಭವಾದಾಗಿನಿಂದ IPL ನಲ್ಲಿ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ವಿಶ್ವ ದರ್ಜೆಯ ಆಟಗಾರರಿಂದ ತುಂಬಿದ ತಂಡವನ್ನು ಹೆಮ್ಮೆಪಡುವ ಹೊರತಾಗಿಯೂ, RCB ತಮ್ಮ ಸಂಪನ್ಮೂಲಗಳನ್ನು ಉತ್ತಮ ಪರಿಣಾಮಕ್ಕಾಗಿ ಬಳಸಲು ಹೆಣಗಾಡುತ್ತಿದೆ.
IPL 2025: ಐಪಿಎಲ್ನ 17 ಸೀಸನ್ಗಳು ಮುಗಿದಿವೆ. ಪ್ರತಿ ಕ್ರೀಡಾಋತುವಿನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಸ್ತಿ ಗೆಲ್ಲದೆ ಇದ್ದರೂ ನೆಚ್ಚಿನ ತಂಡವಾಗಿ ಹೊರಹೊಮ್ಮುತ್ತಿದೆ. ಆದರೆ ಕಪ್ ಕನಸು ಕನಸಾಗಿಯೇ ಉಳಿದಿದೆ. ವಿಶ್ವ ಸ್ಟಾರ್ ಆಟಗಾರರು ತಂಡದಲ್ಲಿದ್ದರೂ ಅದೇ ಫಲಿತಾಂಶ ಪುನರಾವರ್ತನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮೆಗಾ ಹರಾಜಿಗೂ ಮುನ್ನ ತಂಡವನ್ನು ಬಲಪಡಿಸಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಆಶಯವನ್ನು ಆರ್ಸಿಬಿ ಫ್ರಾಂಚೈಸಿ ಹೊಂದಿದೆ.
Virat Kohli: 2025ರ ಐಪಿಎಲ್ ಸೀಸನ್ಗೆ ಮುನ್ನ ನಡೆಯುವ ಮೆಗಾ ಹರಾಜು ಡಿಸೆಂಬರ್ನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ, ಬಿಸಿಸಿಐ ಪ್ರತಿ ತಂಡಕ್ಕೆ ಕನಿಷ್ಠ ಏಳು ಅಥವಾ ಎಂಟು ಆಟಗಾರರನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
Virat Kohli: ರನ್ ಮಷೀನ್ ಅಂತಲೇ ಕರಿಸಿಕೊಲ್ಳುವ ಕಿಂಗ್ ಕೊಹ್ಲಿ ತಮ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಸನದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಕಿಂಗ್ ಬ್ಯಾಟ್ ಹಿಡಿದು ಫಿಲ್ಡ್ಗೆ ಎಂಟ್ರಿ ಕೊಟ್ಟರೆ ಸಾಕು ಯಾವುದೋ ಒಂದು ದಾಕಲೆ ಪುಡಿ ಮಾಡುತ್ತಾರೆ ಎಂದರ್ಥ.
Virat Kohli: ಐಪಿಎಲ್ನಲ್ಲಿ ಸಿಎಸ್ಕೆ ಮುಂಬೈ ಇಂಡಿಯನ್ಸ್ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂದರೆ ಅದು ಆರ್ಸಿಬಿ. ಏಕೆಂದರೆ ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ 2008 ರಿಂದ ಆರ್ಸಿಬಿ ಪರ ಆಡುತ್ತಿದ್ದಾರೆ.
Team India: ಶ್ರೀಲಂಕಾ ಪ್ರವಾಸದ ನಂತರ ಟೀಂ ಇಂಡಿಯಾ 42 ದಿನಗಳ ಕಾಲ ವಿಶ್ರಾಂತಿ ಪಡೆಯಲಿದೆ. ಸೆಪ್ಟೆಂಬರ್ 19 ರಂದು ಬಾಂಗ್ಲಾದೇಶ ವಿರುದ್ಧ ತವರು ನೆಲದಲ್ಲಿ ಪ್ರಾರಂಭವಾಗುವ ಟೆಸ್ಟ್ ಸರಣಿಯೊಂದಿಗೆ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಪುನರಾರಂಭಿಸಲಿದೆ.
LPL: ಐಪಿಎಲ್ ಅನ್ನು ಮೀರಿಸಲು ಬಿಸಿಸಿಐ ಶೀಘ್ರದಲ್ಲೇ ಎಲ್ಪಿಎಲ್ ಎಂಬ ಸರಣಿಯನ್ನು ಪರಿಚಯಿಸಲಿದೆ ಎಂಬ ವರದಿಗಳಿವೆ. LPL ಎಂದರೆ "ಲೆಜೆಂಡ್ಸ್ ಪ್ರೀಮಿಯರ್ ಲೀಗ್". ಈ ಸರಣಿಯಲ್ಲಿ ನಿವೃತ್ತ ಮಾಜಿ ಆಟಗಾರರೊಂದಿಗೆ ಬಿಸಿಸಿಐ ಟಿ20 ಸರಣಿಯನ್ನು ಆಯೋಜಿಸಲಿದೆ.
Rohit Sharma: ಐಪಿಎಲ್ 2025 ರ ಮೆಗಾ ಹರಾಜು ಈ ವರ್ಷದ ಕೊನೆಯಲ್ಲಿ ನಡೆಯಲಿದೆ. ಈಗಾಗಲೇ ಹರಾಜು ಪ್ರಕ್ರಿಯೆಯತ್ತ ಗಮನ ಹರಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 10 ಫ್ರಾಂಚೈಸಿಗಳ ಮಾಲೀಕರೊಂದಿಗೆ ಈಗಾಗಲೇ ಸಭೆ ನಡೆಸಿ ಧಾರಣ ನಿಯಮಗಳಿಗೆ ಸಂಬಂಧಿಸಿದಂತೆ ಸಲಹೆ, ಸೂಚನೆಗಳನ್ನು ಪಡೆದುಕೊಂಡಿದೆ.
Dinesh Karthik: ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಭಾರತದ ಮಾಜಿ ವಿಕೆಟ್ಕೀಪರ್-ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಪುನರಾಗಮನ ಮಾಡಲಿದ್ದು, ಮತ್ತೆ ಬ್ಯಾಟ್ ಹಿಡಿದು ಫೀಲ್ಡ್ನಲ್ಲಿ ಅಬ್ಬರಿಸಲಿದ್ದಾರೆ. ಅವರು SA20 ಪಂದ್ಯಾವಳಿಗಳನ್ನು ಆಡಲಿದ್ದಾರೆ. ರಾಯಲ್ಸ್ ಪರ ಈ ಟೂರ್ನಿಯಲ್ಲಿ ಮಿಂಚಲು ದಿನೇಶ್ ಕಾರ್ತಿಕ್ ತಯಾರಾಗುತ್ತಿದ್ದಾರೆ.
Glenn Maxwell: ಐಪಿಎಲ್ನಲ್ಲಿ RCB ನೀರಿನಂತೆ ಖರ್ಚು ಮಾಡಿದ ಆಟಗಾರ ಈಗ ಈ ತಂಡದಿಂದ ಹೊರಗುಳಿಯಲಿದ್ದಾರೆ. ನಾವು ವಿರಾಟ್ ಕೊಹ್ಲಿ ಅವರ ಆಪ್ತ ಸ್ನೇಹಿತ ಮತ್ತು ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ RCB ತೊರೆಯುವ ಸುಳಿವು ನೀಡಿದ್ದಾರೆ.
Rohit Sharma May Leave Mumbai Indians: ಐಪಿಎಲ್ 2025ರ ಮೆಗಾ ಹರಾಜಿನ ಸಂದರ್ಭದಲ್ಲಿ ಫ್ರಾಂಚೈಸಿಗಳು ಸಂವೇದನಾಶೀಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ತಂಡದಲ್ಲಿ ಕೇವಲ ನಾಲ್ಕು ಹಳೆಯ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ತಂಡಗಳಿಗೆ ನೀಡಿದ್ದು, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡ ತೊರೆಯಲಿದ್ದಾರೆ ಎಂದು ವರದಿಯಾಗಿದೆ.
ಭಾರತೀಯ ಮಹಿಳಾ ತಂಡದ ಸ್ಟಾರ್ ಬ್ಯಾಟ್ಸ್ಮನ್ ಸ್ಮೃತಿ ಮಂಧಾನ ಗುರುವಾರ, ಜುಲೈ 18 ರಂದು ತಮ್ಮ 28 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 18 ಜುಲೈ 1996 ರಂದು ಮುಂಬೈನಲ್ಲಿ ಜನಿಸಿದರು.ಮಂಧಾನ ಅವರ ತಂದೆಯ ಹೆಸರು ಶ್ರೀನಿವಾಸ್ ಮಂಧಾನ ಮತ್ತು ತಾಯಿಯ ಹೆಸರು ಸ್ಮಿತಾ ಮಂಧಾನ. ಇದಲ್ಲದೆ, ಸ್ಮೃತಿ ಮಂಧಾನ ಅವರಿಗೆ ಸಹೋದರ ಕೂಡ ಇದ್ದಾರೆ. ಸ್ಮೃತಿ ತನ್ನ ಸಹೋದರನನ್ನು ನೋಡಿದ ನಂತರವೇ ಕ್ರಿಕೆಟ್ ಆಡುವ ಆಸಕ್ತಿಯನ್ನು ಬೆಳೆಸಿಕೊಂಡಿದ್ದೇನೆ ಎಂದು ಅನೇಕ ಬಾರಿ ಹೇಳಿದ್ದಾರೆ.
Parthiv Patel Statement About RCB: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ ಪ್ರಸಿದ್ಧ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್’ಸಿಬಿ) ಬಗ್ಗೆ ಮಾತನಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.