ಮುಂಬೈ : ಕ್ರಿಕೆಟ್ ವೃತ್ತಿಜೀವನದ ಆರಂಭದಲ್ಲಿ ಸೀಮಿತ ಓವರ್‌ಗಳಲ್ಲಿ ಬ್ರಾಂಡ್ ಆಗಿ ಗುರುತಿಸಿಕೊಂಡಿದ್ದ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಈಗ ಟೆಸ್ಟ್ ಕ್ರಿಕೆಟ್ ನಲ್ಲಿಯೂ ಕೂಡ ತಮ್ಮ ಛಾಪು ಮೂಡಿಸುವ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಇಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬುಮ್ರಾ 'ನನಗೆ, ಟೆಸ್ಟ್ ಕ್ರಿಕೆಟ್ ಬಹಳ ಮುಖ್ಯವಾಗಿತ್ತು ಮತ್ತು ನಾನು ಯಾವಾಗಲೂ ಟೆಸ್ಟ್ ಕ್ರಿಕೆಟ್ ಆಡಲು ಬಯಸುತ್ತೇನೆ. ಕೇವಲ ಟಿ 20 ಮತ್ತು ಏಕದಿನ ಪಂದ್ಯಗಳ ಕ್ರಿಕೆಟಿಗನಾಗಲು ಇಷ್ಟಪಡುವುದಿಲ್ಲ. ಟೆಸ್ಟ್ ಕ್ರಿಕೆಟ್‌ಗೆ ನಾನು ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇನೆ...ನಾನು ಯಾವಾಗಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಲು ಬಯಸಿದ್ದೇನೆ ಎಂದು ಬುಮ್ರಾ ಹೇಳಿದರು.
'ನಾನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದೇನೆ ಎಂಬ ನಂಬಿಕೆ ನನ್ನಲ್ಲಿತ್ತು, ಇದಾದ ನಂತರ ನಾನು ಅದನ್ನು ಟೆಸ್ಟ್ ಪಂದ್ಯಗಳಲ್ಲಿ ಪುನರಾವರ್ತಿಸಬಲ್ಲೆ ಎನ್ನುವ ವಿಶ್ವಾಸ ಮೂಡಿತು. ಈಗ ಟೆಸ್ಟ್ ಕ್ರಿಕೆಟ್ ಪ್ರಯಾಣವು ಆರಂಭವಾಗಿದೆ, ಇದುವರೆಗೆ ಕೇವಲ 12 ಟೆಸ್ಟ್‌ಗಳನ್ನು ಆಡಿದ್ದೇನೆ,...ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ನನ್ನ ಟೆಸ್ಟ್ ಚೊಚ್ಚಲ ಪ್ರವೇಶ ಮಾಡಿದಾಗ ನನ್ನ ಕನಸು ನನಸಾಯಿತು' ಎಂದು ಬುಮ್ರಾ ತಿಳಿಸಿದರು.
"ವೈಟ್ ಜರ್ಸಿಯಲ್ಲಿ ಆಡುತ್ತಿರುವುದು ನಿಜಕ್ಕೂ ಉತ್ತಮ ಭಾವನೆ ಮತ್ತು ನಂತರ ತಂಡದ ಯಶಸ್ಸಿಗೆ ನಿಧಾನವಾಗಿ ಕೊಡುಗೆ ನೀಡುವುದು ನನಗೆ ತೃಪ್ತಿ ನೀಡಿದೆ ಎಂದು ಬ್ರುಮಾ ತಿಳಿಸಿದರು.