Asia Cup 2022: ಏಷ್ಯಾ ಕಪ್ ವೇಳಾಪಟ್ಟಿ ಪ್ರಕಟ, ಆ.28ಕ್ಕೆ ಭಾರತ-ಪಾಕ್ ಮುಖಾಮುಖಿ

ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ದ್ವೀಪರಾಷ್ಟ್ರ ಶ್ರೀಲಂಕಾದ ಪರಿಸ್ಥಿತಿ ಹದಗೆಟ್ಟಿರುವುದರಿಂದ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ.

Written by - Puttaraj K Alur | Last Updated : Aug 2, 2022, 06:28 PM IST
  • 2022ನೇ ಸಾಲಿನ 15ನೇ ಆವೃತ್ತಿಯ ಏಷ್ಯಾಕಪ್ ವೇಳಾಪಟ್ಟಿ ಬಿಡುಗಡೆ
  • ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ಒಟ್ಟು 13 ಟಿ-20 ಪಂದ್ಯಗಳು ನಡೆಯಲಿವೆ
  • ಆ.28ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣಸಾಟ
Asia Cup 2022: ಏಷ್ಯಾ ಕಪ್ ವೇಳಾಪಟ್ಟಿ ಪ್ರಕಟ, ಆ.28ಕ್ಕೆ ಭಾರತ-ಪಾಕ್ ಮುಖಾಮುಖಿ title=
ಏಷ್ಯಾಕಪ್ ವೇಳಾಪಟ್ಟಿ ಬಿಡುಗಡೆ

ನವದೆಹಲಿ: 2022ನೇ ಸಾಲಿನ 15ನೇ ಆವೃತ್ತಿಯ ಏಷ್ಯಾಕಪ್ ವೇಳಾಪಟ್ಟಿ ಮಂಗಳವಾರ ಬಿಡುಗಡೆಯಾಗಿದ್ದು, ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮುಖಾಮುಖಿಗೆ ಡೇಟ್ ಫಿಕ್ಸ್ ಆಗಿದೆ.

ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ಒಟ್ಟು 13 ಟಿ-20 ಪಂದ್ಯಗಳು ನಡೆಯಲಿವೆ. ಆ.27ರಂದು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದ ನಡುವೆ ಏಷ್ಯಾಕಪ್ ಉದ್ಘಾಟನಾ ಪಂದ್ಯ ನಡೆಯಲಿದೆ. ಆ.28ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣಸಾಡಲಿವೆ. ಸೆಪ್ಟೆಂಬರ್ 11ರಂದು ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ: CWG Cycling 2022: ಪದಕ ಗೆಲ್ಲುವ ತವಕದಲ್ಲಿದ್ದ ಭಾರತೀಯ ಸೈಕ್ಲಿಸ್ಟ್ ಮೀನಾಕ್ಷಿಗೆ ಅಪಘಾತ!

ಈ ಬಾರಿಯ ಏಷ್ಯಾಕಪ್ ಟೂರ್ನಿಯ ಆತಿಥ್ಯವನ್ನು ಶ್ರೀಲಂಕಾ ವಹಿಸಿಕೊಳ್ಳಬೇಕಿತ್ತು. ಆದರೆ ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ದ್ವೀಪರಾಷ್ಟ್ರದ ಪರಿಸ್ಥಿತಿ ಹದಗೆಟ್ಟಿರುವುದರಿಂದ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. ಒಟ್ಟು 6 ತಂಡಗಳನ್ನು 2 ಗ್ರೂಪ್‍ಗಳಾಗಿ ವಿಂಗಡಿಸಿ ಟೂರ್ನಿಯನ್ನು ಆಯೋಜಿಸಲಾಗಿದೆ. ಈಗಾಗಲೇ 5 ತಂಡಗಳು ನೇರ ಅರ್ಹತೆ ಗಿಟ್ಟಿಸಿದ್ದರೆ, ಇನ್ನೊಂದು ತಂಡ ಅರ್ಹತಾ ಸುತ್ತಿನ ಮೂಲಕ ಆಯ್ಕೆಯಾಗಬೇಕಿದೆ.  

ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಪ್ರಾರಂಭವಾಗಲಿವೆ. 2018ರ ಯುಎಇಯಲ್ಲಿ ಕೊನೆ ಬಾರಿಗೆ ಏಷ್ಯಾಕಪ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಫೈನಲ್ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು ಮಣಿಸಿ 7ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.  

ಇದನ್ನೂ ಓದಿ: Team India: ರೋಹಿತ್ ಬಳಿಕ ಈ ನಾಲ್ವರು ಭಾರತ ತಂಡದ ಮುಂದಿನ ನಾಯಕರಾಗಬಹುದು!

ಏಷ್ಯಾಕಪ್ ತಂಡಗಳು ಇಂತಿವೆ

Group A: ಭಾರತ, ಪಾಕಿಸ್ತಾನ ಮತ್ತು ಕ್ವಾಲಿಫೈಯರ್ ತಂಡ

Group B ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ

ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿ ಇಂತಿದೆ

1) ಆಗಸ್ಟ್ 27 ಶ್ರೀಲಂಕಾ V/s ಅಫ್ಘಾನಿಸ್ತಾನ ದುಬೈ
2) ಆಗಸ್ಟ್ 28 ಭಾರತ V/s ಪಾಕಿಸ್ತಾನ ದುಬೈ
3) ಆಗಸ್ಟ್ 30 ಬಾಂಗ್ಲಾದೇಶ V/s ಅಫ್ಘಾನಿಸ್ತಾನ ಶಾರ್ಜಾ
4) ಆಗಸ್ಟ್ 31 ಭಾರತ V/s ಕ್ವಾಲಿಫೈಯರ್ ದುಬೈ
5) ಸೆಪ್ಟೆಂಬರ್ 01 ಶ್ರೀಲಂಕಾ V/s ಬಾಂಗ್ಲಾದೇಶ ದುಬೈ
6) ಸೆಪ್ಟೆಂಬರ್ 02 ಪಾಕಿಸ್ತಾನ V/s ಕ್ವಾಲಿಫೈಯರ್ ಶಾರ್ಜಾ

ಸೂಪರ್ 4 ಹಂತದ ಪಂದ್ಯಗಳು

7) ಸೆಪ್ಟೆಂಬರ್ 03 B1 V/s B2 ಶಾರ್ಜಾ
8) ಸೆಪ್ಟೆಂಬರ್ 04 A1 V/s A2 ದುಬೈ
9) ಸೆಪ್ಟೆಂಬರ್ 06 A1 V/s B1 ದುಬೈ
10) ಸೆಪ್ಟೆಂಬರ್ 07 A2 V/s B2 ದುಬೈ
11) ಸೆಪ್ಟೆಂಬರ್ 08 A1 V/s B2 ದುಬೈ
12) ಸೆಪ್ಟೆಂಬರ್ 09 B1 V/s A2 ದುಬೈ
13) ಸೆಪ್ಟೆಂಬರ್ 11 ಫೈನಲ್ 1st Super 4 V/s 2nd Super 4 ದುಬೈ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News