Dhoni Birthday: ಕನ್ನಡದ ಈ ಸ್ಟಾರ್ ನಟಿಯ‌ ಜೊತೆ ಡೇಟಿಂಗ್ ಮಾಡಿದ್ದ ಧೋನಿ! ಲಕ್ಷ್ಮಿ ರೈ ಹಿಡಿದು ಈ ಲಿಸ್ಟ್‌ನಲ್ಲಿದ್ದಾರೆ ಇನ್ನೂ ಇಷ್ಟು ಜನ?

Dhoni And Deepika Padukone: ಸಾಕ್ಷಿ ಅವರನ್ನು ಮದುವೆ ಆಗುವ ಮುಂಚೆ ಮಹೇಂದ್ರ ಸಿಂಗ್ ಧೋನಿ ಹೆಸರು ಅನೇಕ ನಟಿಯರ ಜೊತೆ ತಳುಕು ಹಾಕಿಕೊಂಡಿತ್ತು.

Written by - Chetana Devarmani | Last Updated : Jul 7, 2024, 01:51 PM IST
  • ಮಹೇಂದ್ರ ಸಿಂಗ್ ಧೋನಿ ಹುಟ್ಟು ಹಬ್ಬ
  • ಮಹೇಂದ್ರ ಸಿಂಗ್ ಧೋನಿ ಜೊತೆ ಲಕ್ಷ್ಮೀ ರೈ ಸಂಬಂಧ?
  • ಮಹೇಂದ್ರ ಸಿಂಗ್ ಧೋನಿ ಲವ್‌ ಸ್ಟೋರಿ
Dhoni Birthday: ಕನ್ನಡದ ಈ ಸ್ಟಾರ್ ನಟಿಯ‌ ಜೊತೆ ಡೇಟಿಂಗ್ ಮಾಡಿದ್ದ ಧೋನಿ! ಲಕ್ಷ್ಮಿ ರೈ ಹಿಡಿದು ಈ ಲಿಸ್ಟ್‌ನಲ್ಲಿದ್ದಾರೆ ಇನ್ನೂ ಇಷ್ಟು ಜನ? title=

MS Dhoni Love Affairs: ಮಹೇಂದ್ರ ಸಿಂಗ್ ಧೋನಿ ಇಂದು 43 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಕ್ಷಿ ಅವರನ್ನು ಮದುವೆ ಆಗುವ ಮುಂಚೆ ಮಹೇಂದ್ರ ಸಿಂಗ್ ಧೋನಿ ಹೆಸರು ಅನೇಕ ನಟಿಯರ ಜೊತೆ ತಳುಕು ಹಾಕಿಕೊಂಡಿತ್ತು. 

2007 ರಲ್ಲಿ ಧೋನಿ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತು. ಬಾಲಿವುಡ್ ನ ‘ಮಸ್ತಾನಿ’ ಎಂದೇ ಕರೆಸಿಕೊಳ್ಳುವ ದೀಪಿಕಾ ಪಡುಕೋಣೆ ‘ಓಂ ಶಾಂತಿ ಓಂ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದು ಸಹ 2007 ರಲ್ಲಿ. ಕ್ರಿಕೆಟ್ ಮತ್ತು ಬಾಲಿವುಡ್ ನಡುವಿನ ಸಂಬಂಧ ಬಹಳ ಹಳೆಯದು. ಇಲ್ಲಿಯವರೆಗೆ ಅನೇಕ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗಿದ್ದಾರೆ. ಆದರೆ ದೀಪಿಕಾ ಪಡುಕೋಣೆ ಜೊತೆಗಿನ ಧೋನಿಯ ಲವ್ ಸ್ಟೋರಿ ಅಪೂರ್ಣವಾಗಿತ್ತು. 

ಇದನ್ನೂ ಓದಿ: IND VS ZIM Playing XI: ಭಾರತ ತಂಡದಲ್ಲಿ ಮಹತ್ವ ಬದಲಾವಣೆ..? ಎರಡನೇ ಪಂದ್ಯಕ್ಕೆ ರೆಡಿಯಾಯ್ತು ಆಟಗಾರರ ಪಟ್ಟಿ...

ದೀಪಿಕಾ ಪಡುಕೋಣೆ ಬಾಲಿವುಡ್‌ಗೆ ಎಂಟ್ರಿ ಕೊಡುವ ಮುನ್ನ ಕನ್ನಡದಲ್ಲಿ ಸಿನಿಮಾ ಮಾಡಿದ್ದರು. ಉಪೇಂದ್ರ ಜೊತೆ ಐಶ್ವರ್ಯ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ದ ದೀಪಿಕಾ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. 

ದೀಪಿಕಾ ಪಡುಕೋಣೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಸಮಯದಲ್ಲೇ ವಿಶ್ವಕಪ್ ಗೆದ್ದ ಧೋನಿ ಹೆಸರು ಎಲ್ಲರ ಬಾಯಲ್ಲೂ ಹರಿದಾಡುತ್ತಿತ್ತು. ಆ ಹೊತ್ತಲ್ಲಿ ದೀಪಿಕಾ ಮತ್ತು ಧೋನಿ ಸಂಬಂಧದ ವದಂತಿ ಶುರುವಾಯಿತು. ಈ ಅವಧಿಯಲ್ಲಿ ಧೋನಿ ಮತ್ತು ದೀಪಿಕಾ ಜೊತೆಯಾಗಿ ರ‍್ಯಾಂಪ್ ವಾಕ್ ಮಾಡುತ್ತಿರುವ ವಿಡಿಯೋ ಕೂಡ ವೈರಲ್‌ ಆಗಿತ್ತು. ಮೈದಾನದಲ್ಲಿ ದೀಪಿಕಾ ಧೋನಿಗಾಗಿ ಹುರಿದುಂಬಿಸುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ದೀಪಿಕಾ ಅವರ ಕೋರಿಕೆಯ ಮೇರೆಗೆ ಧೋನಿ ತಮ್ಮ ಉದ್ದನೆಯ ಕೂದಲನ್ನು ಕತ್ತರಿಸಿದ್ದಾರೆ ಎಂದು ಹೇಳಿ ವದಂತಿ ಹರಡಿತ್ತು. ಆದರೆ ಕೆಲ ದಿನಗಳ ಬಳಿಕ ಈ ಸಂಬಂಧ ಮುರಿದು ಬಿತ್ತು ಎನ್ನಲಾಗುತ್ತದೆ. 

ಧೋನಿ ಹೆಸರು ನಟಿ ಆಸಿನ್​ ಜೊತೆಗೂ ಸೇರಿಕೊಂಡಿತ್ತು. ಆಸಿನ್ ಜೊತೆ ಧೋನಿ ಲವ್‌ ಮಾಡ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಆಸಿನ್‌ ಉದ್ಯಮಿಯೊಬ್ಬರನ್ನು ಮದುವೆಯಾಗಿ ಈ ವದಂತಿಗಳಿಗೆ ತೆರೆ ಎಳೆದಿದ್ದರು.

ಇದನ್ನೂ ಓದಿ: ಧೋನಿ ಹುಟ್ಟುಹಬ್ಬದ ಆಚರಣೆಯಲ್ಲಿ ಸ್ಟಾರ್‌ ನಟ ಹಾಜರ್‌..!

ಐಟಂ ಹಾಡುಗಳ ಮೂಲಕ ಯುವಕರ ನಿದ್ದೆ ಕದ್ದ ಬೆಡಗಿ ನಟಿ ಲಕ್ಷ್ಮಿ ರೈ ಜೊತೆಯೂ ಧೋನಿ ಡೇಟಿಂಗ್‌ ಮಾಡಿದ್ದರು ಎಂದು ಹೇಳಲಾಗುತ್ತದೆ. 2008 - 2009ರ ಸಮಯದಲ್ಲಿ ಈ ವದಂತಿ ಹಬ್ಬಿತ್ತು. ಧೋನಿ-ನನ್ನ ಸಂಬಂಧವು ಒಂದು ಗಾಯದಂತಿದೆ ಎಂದು ಲಕ್ಷ್ಮಿ ರೈ 2014ರಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದರು.

'ದಿ ಕಪಿಲ್ ಶೋ' ಕ್ರಿಯೇಟಿವ್ ಡೈರೆಕ್ಟರ್ ಪ್ರೀತಿ ಸಿಮೋಸ್ ಜೊತೆ ಧೋನಿ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದರೆಂಬ ವದಂತಿಯೂ ಹಬ್ಬಿತ್ತು.  ಹೀಗೆ ಹಲವು ರೂಮರ್ಸ್​ ಬಳಿಕ ಧೋನಿ 2010ರಲ್ಲಿ ಸಾಕ್ಷಿ ಸಿಂಗ್​ ಅವರನ್ನು ಪ್ರೀತಿಸಿ ಮದುವೆಯಾದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News