Cricket Australia's ODI XI ತಂಡಕ್ಕೆ ಕೂಲ್ ಕ್ಯಾಪ್ಟನ್ ಧೋನಿ ನೇತೃತ್ವ!

Cricket Australia's ODI XI: ಮಹೇಂದ್ರ ಸಿಂಗ್ ಧೋನಿ ಈ ವರ್ಷದ ಜುಲೈನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದಾರೆ.

Last Updated : Dec 24, 2019, 01:27 PM IST
Cricket Australia's ODI XI ತಂಡಕ್ಕೆ ಕೂಲ್ ಕ್ಯಾಪ್ಟನ್ ಧೋನಿ ನೇತೃತ್ವ! title=
Photo Courtesy: IANS

ಮೆಲ್ಬೋರ್ನ್: ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ದೀರ್ಘಕಾಲ ಮೈದಾನದಿಂದ ದೂರವಿರಬಹುದು, ಆದರೆ ಅವರ ಮೇಲಿನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಸಹ ಆಟಗಾರರು ಮತ್ತವರ ಅಭಿಮಾನಿಗಳು ಮಾತ್ರವಲ್ಲ, ಎದುರಾಳಿ ತಂಡವೂ ಅವರನ್ನು ಗೌರವಿಸುತ್ತದೆ. ಐಸಿಸಿ ಎಲ್ಲಾ ಮೂರು ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಎಂಬ ಕೀರ್ತಿಗೆ ಪಾತ್ರರಾಗಿರುವ ಎಂಎಸ್ ಧೋನಿ (MS Dhoni) ಅವರ ಸಾಧನೆಗಳ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ. ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಏಕದಿನ ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತನ್ನ ತಂಡಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಏಕದಿನ ಇಲೆವೆನ್ ಎಂದು ಹೆಸರಿಸಿದೆ.

ವಿಶ್ವ ಇಲೆವೆನ್ ಮಾದರಿಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದ ಏಕದಿನ ಇಲೆವೆನ್ (Cricket Australia's ODI XI)  ಹೆಸರಿನಲ್ಲಿ ಈ ತಂಡವನ್ನು ಆಯ್ಕೆ ಮಾಡಲಾಗಿದೆ.  ಇದರಲ್ಲಿ ಎಂಟು ದೇಶಗಳ ಆಟಗಾರರಿಗೆ ಸ್ಥಾನ ನೀಡಲಾಗಿದೆ. ವಿಶೇಷವಾಗಿ ಈ ತಂದಗಳಲ್ಲಿರುವ ಆಟಗಾರರೆಲ್ಲರೂ ದಶಕದಿಂದ ಕ್ರಿಕೆಟ್ ನಲ್ಲಿ ಹೆಸರು ಮಾಡಿದವರು.  ಅಂದರೆ, 2010-19ರ ನಡುವೆ ಆಡಿದ ಆಟಗಾರರನ್ನು ಮಾತ್ರ ಈ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. CA ಏಕದಿನ ಪಂದ್ಯದ ಮಾದರಿಯಲ್ಲಿ ಟೆಸ್ಟ್ ಟೀಂ ಅನ್ನೂ ರಚಿಸಿದ್ದು, ಈ ತಂಡಕ್ಕೆ ವಿರಾಟ್ ಕೊಹ್ಲಿ(Virat Kohli) ಅವರನ್ನು ನಾಯಕರನ್ನಾಗಿ ನೇಮಿಸಿದೆ.

ಕ್ರಿಕೆಟ್ ಆಸ್ಟ್ರೇಲಿಯಾದ ಏಕದಿನ XI ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿರುವ ಹಿಂದಿನ ಕಾರಣ ಬಿಚ್ಚಿಟ್ಟಿರುವ ಕ್ರಿಕೆಟ್ ಆಸ್ಟ್ರೇಲಿಯಾ, 'ಈ ದಶಕದ ಕ್ರಿಕೆಟ್‌ನಲ್ಲಿ ಎಂಎಸ್ ಧೋನಿ ಅವರ ಕೊಡುಗೆ ಅಪಾರ. ಅವರು 2011 ರಲ್ಲಿ ಭಾರತೀಯ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದರು. ಅವರು ಉತ್ತಮ ಫಿನಿಶರ್. ಅವರ ಸರಾಸರಿ 50 ಕ್ಕಿಂತ ಹೆಚ್ಚು. ಅವರು 49 ಬಾರಿ ಅಜೇಯರಾಗಿದ್ದಾರೆ. ಗುರಿಯನ್ನು ಬೆನ್ನಟ್ಟಿದ ಅವರು 28 ಬಾರಿ ಅಜೇಯವಾಗಿ ಮರಳಿದರು, ಅದರಲ್ಲಿ ಭಾರತ 25 ಜಯಗಳಿಸಿತು. ವಿಕೆಟ್‌ನ ಹಿಂದಿನ ಅವರ ಸಾಧನೆ ಕೂಡ ಅತ್ಯುತ್ತಮವಾಗಿದೆ' ಎಂದು ಬಣ್ಣಿಸಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಏಕದಿನ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಭಾರತದ ಆಟಗಾರರಿಗೆ ಅದರಲ್ಲಿ ಹೆಚ್ಚಿನ ಸ್ಥಾನ ಸಿಕ್ಕಿದೆ. ಇದರಲ್ಲಿ ಮೂವರು ಭಾರತೀಯ ಕ್ರಿಕೆಟಿಗರಾದ ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ(Rohit Sharma) ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಇಬ್ಬರು ಆಟಗಾರರಿಗೆ ಸ್ಥಾನ ಸಿಕ್ಕಿದೆ. ಈ ತಂಡದಲ್ಲಿ ಇಂಗ್ಲೆಂಡ್, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾದ ತಲಾ ಒಬ್ಬ ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ.

ತಂಡದ ಬಗ್ಗೆ ಹೇಳುವುದಾದರೆ, ಭಾರತದ ರೋಹಿತ್ ಶರ್ಮಾ ಮತ್ತು ಹಶೀಮ್ ಆಮ್ಲಾ ಅವರಿಗೆ ಆರಂಭಿಕ ಜವಾಬ್ದಾರಿಯನ್ನು ನೀಡಲಾಗಿದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಶಕೀಬ್ ಅಲ್ ಹಸನ್ ಮತ್ತು ಜೋಸ್ ಬಟ್ಲರ್ ಮೂರನೇ ಸ್ಥಾನದಿಂದ ಆರನೇ ಸ್ಥಾನವನ್ನು ಪಡೆದಿದ್ದಾರೆ. ಕ್ಯಾಪ್ಟನ್ ಧೋನಿಗೆ ಏಳನೇ ಸ್ಥಾನದಲ್ಲಿರುವ ಬ್ಯಾಟಿಂಗ್ ಜವಾಬ್ದಾರಿಯನ್ನು ನೀಡಲಾಗಿದೆ. ಬೌಲಿಂಗ್ ಜವಾಬ್ದಾರಿಯನ್ನು ಅಫ್ಘಾನಿಸ್ತಾನದ ರಶೀದ್ ಖಾನ್, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಮತ್ತು ಶ್ರೀಲಂಕಾದ ಲಸಿತ್ ಮಾಲಿಂಗ ಅವರಿಗೆ ವಹಿಸಲಾಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಏಕದಿನ XI: ರೋಹಿತ್ ಶರ್ಮಾ, ಹಾಶಿಮ್ ಆಮ್ಲಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಶಕೀಬ್ ಅಲ್ ಹಸನ್, ಜೋಸ್ ಬಟ್ಲರ್, ಎಂಎಸ್ ಧೋನಿ (ಕ್ಯಾಪ್ಟನ್), ರಶೀದ್ ಖಾನ್, ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಲಸಿತ್ ಮಾಲಿಂಗ.

Trending News