ನವದೆಹಲಿ: ಧೋನಿ ತಮ್ಮ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ನಿಂದ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವುದು ಎಲ್ಲರಿಗೂ ಗೊತ್ತು.ಆದರೆ ಅವರು ಬೌಲಿಂಗ್ ಕೂಡ ಮಾಡುವ ಸಂಗತಿ ಬಹುತೇಕರಿಗೆ ತಿಳಿದಿಲ್ಲವೆನಿಸುತ್ತದೆ.
— IndianPremierLeague (@IPL) May 5, 2019
ಸದ್ಯ ಐಪಿಎಲ್ ನಲ್ಲಿ 12 ಪಂದ್ಯಗಳಲ್ಲಿ 358 ರನ್ ಗಳಿಸುವ ಮೂಲಕ ಚೆನ್ನೈ ತಂಡದ ಪರ ಅಧಿಕ ರನ್ ಗಳಿಸಿದ್ದಾರೆ.ಈ ಬಾರಿ ಟ್ರೋಪಿ ಗೆಲ್ಲುವ ಹುಮ್ಮಸ್ಸಿನಲ್ಲಿ ಚೆನ್ನೈ ತಂಡವಿದೆ. ಭಾನುವಾರದಂದು ಪಂಜಾಬ್ ತಂಡದ ವಿರುದ್ದ ಪಂದ್ಯಕ್ಕೂ ಮೊದಲು ಧೋನಿ ಮೈದಾನಕ್ಕೆ ಇಳಿದು ಬೌಲಿಂಗ್ ಅಭ್ಯಾಸ ಮಾಡಿರುವುದು ಈಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಎಂ.ಎಸ್ ಧೋನಿ ಭಾರತ ತಂಡದ ನಾಯಕರಾಗಿ 2007 ರಲ್ಲಿ ಟ್ವೆಂಟಿ ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಭಾರತದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎನ್ನುವ ಖ್ಯಾತಿಗೆ ಧೋನಿ ಪಾತ್ರರಾಗಿದ್ದಾರೆ.