ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್

cricketers who scored triple centuries in Test: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ʼಗಳು ಮಾತ್ರ ಎರಡು ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಸ್ಫೋಟಕ ಬ್ಯಾಟ್ಸ್‌ಮನ್‌ʼಗಳ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಇಲ್ಲ.

Written by - Bhavishya Shetty | Last Updated : Aug 9, 2024, 07:41 PM IST
    • ಕೇವಲ ನಾಲ್ವರು ಬ್ಯಾಟ್ಸ್‌ಮನ್‌ʼಗಳು ಮಾತ್ರ ಎರಡು ತ್ರಿಶತಕ ಬಾರಿಸಿದ್ದಾರೆ
    • ಭಾರತದ ಅಪಾಯಕಾರಿ ಬ್ಯಾಟ್ಸ್‌ಮನ್‌ʼಗಳಲ್ಲಿ ವೀರೇಂದ್ರ ಸೆಹ್ವಾಗ್ ಕೂಡ ಒಬ್ಬರು
    • ಕ್ರಿಸ್ ಗೇಲ್ ಟಿ20 ಕ್ರಿಕೆಟ್ ಜಗತ್ತಿನ ಸಿಕ್ಸರ್ ರಾಜ
ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್ title=
File Photo

Cricket Records: ವಿಶ್ವ ಕ್ರಿಕೆಟ್‌ʼನ ಶ್ರೇಷ್ಠ ಬ್ಯಾಟ್ಸ್‌ಮನ್‌ʼಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಯಾವತ್ತೂ ಅಗ್ರಸ್ಥಾನದಲ್ಲಿರುತ್ತವೆ. ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 100 ಶತಕಗಳನ್ನು ಬಾರಿಸಿದ್ದರೆ, ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 80 ಶತಕಗಳನ್ನು ಗಳಿಸಿರುವ ದಿಗ್ಗಜ. ಇದಷ್ಟೇ ಅಲ್ಲ, ಸಚಿನ್ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 34357 ರನ್ ಗಳಿಸಿದ್ದರೆ, ವಿರಾಟ್ ಇದುವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ʼನ ಎಲ್ಲಾ ಮೂರು ಮಾದರಿಗಳಲ್ಲಿ 26942 ರನ್ ಗಳಿಸಿದ್ದಾರೆ. ಆದರೆ ಇಂತಹ ಸಾಧನೆ ಮಾಡಿರುವ ಇವರಿಬ್ಬರಿಂದಲೂ ಮುರಿಯಲಾಗದ ಶ್ರೇಷ್ಠ ದಾಖಲೆಗಳು ಕ್ರಿಕೆಟ್‌ ಲೋಕದಲ್ಲಿವೆ.

ಇದನ್ನೂ ಓದಿ: ರಾಕಿಂಗ್‌ ಸ್ಟಾರ್‌ ಯಶ್ʼಗೆ ಈ ನಂಬರ್ ಲಕ್ಕಿಯಂತೆ! ಇದೇ ಸಂಖ್ಯೆಯ ದಿನದಂದು ಶುಭಸುದ್ದಿ ನೀಡ್ತಾರೆ...

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ʼಗಳು ಮಾತ್ರ ಎರಡು ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಸ್ಫೋಟಕ ಬ್ಯಾಟ್ಸ್‌ಮನ್‌ʼಗಳ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಇಲ್ಲ. ಇಲ್ಲಿಯವರೆಗೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ʼಗಳು ಮಾತ್ರ ಈ ಶ್ರೇಷ್ಠ ದಾಖಲೆಯನ್ನು ಸಾಧಿಸಲು ಸಮರ್ಥರಾಗಿದ್ದಾರೆ.

ವೀರೇಂದ್ರ ಸೆಹ್ವಾಗ್
ಭಾರತದ ಅಪಾಯಕಾರಿ ಬ್ಯಾಟ್ಸ್‌ಮನ್‌ʼಗಳಲ್ಲಿ ವೀರೇಂದ್ರ ಸೆಹ್ವಾಗ್ ಕೂಡ ಒಬ್ಬರು. ಟಿ20 ಕ್ರಿಕೆಟ್‌ʼನಂತೆ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದ ವೀರೂ, ತಮ್ಮ ಸ್ಟೈಲ್‌ʼಅನ್ನು ಕೊಂಚ ಬದಲಾಯಿಸಿಕೊಂಡಿದ್ದರು. ಇನ್ನು ಸೆಹ್ವಾಗ್ 2004 ರಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ತ್ರಿಶತಕ ಗಳಿಸಿದರು. ಮುಲ್ತಾನ್ ಮೈದಾನದಲ್ಲಿ ವೀರೇಂದ್ರ ಸೆಹ್ವಾಗ್ 309 ರನ್ ಗಳ ಇನಿಂಗ್ಸ್ ಆಡಿದ್ದು, ಅದಾದ ಬಳಿಕ 2008 ರಲ್ಲಿ, ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ 319 ರನ್‌ಗಳ ಇನ್ನಿಂಗ್ಸ್ ಆಡಿದ್ದರು.

ಬ್ರಿಯಾನ್ ಲಾರಾ
ಬ್ರಿಯಾನ್ ಲಾರಾ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌. ಟೆಸ್ಟ್ ಕ್ರಿಕೆಟ್‌ʼನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ ವಿಶ್ವದಾಖಲೆ ಇವರ ಹೆಸರಲ್ಲಿದೆ. 2004 ರಲ್ಲಿ ಇಂಗ್ಲೆಂಡ್ ವಿರುದ್ಧ 400 ರನ್ ಗಳಿಸಿದ್ದ ಅವರು, 1994ರಲ್ಲಿ ಇಂಗ್ಲೆಂಡ್ ವಿರುದ್ಧ 375 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು.

ಕ್ರಿಸ್ ಗೇಲ್
ಕ್ರಿಸ್ ಗೇಲ್ ಟಿ20 ಕ್ರಿಕೆಟ್ ಜಗತ್ತಿನ ಸಿಕ್ಸರ್ ರಾಜ. ರೆಡ್ ಬಾಲ್ ಕ್ರಿಕೆಟ್ ನಲ್ಲೂ ಕ್ರಿಸ್ ಗೇಲ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಿದ್ದಾರೆ. 2005 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ನಲ್ಲಿ 317 ರನ್ ಗಳಿಸಿದ್ದ ಅವರು, 2010 ರಲ್ಲಿ, ಶ್ರೀಲಂಕಾ ವಿರುದ್ಧ 333 ರನ್ಗಳ ಟೆಸ್ಟ್ ಇನ್ನಿಂಗ್ಸ್ ಆಡಿದ್ದರು.

ಇದನ್ನೂ ಓದಿ: ಪೋರ್ನ್‌ ಸ್ಟಾರ್ ಖ್ಯಾತಿಗೂ ಮುನ್ನ ʼಈʼ ಕೆಲಸ ಮಾಡ್ತಿದ್ರು ಹಾಟ್‌ ಬ್ಯೂಟಿ ಸನ್ನಿ ಲಿಯೋನ್‌!

ಡಾನ್ ಬ್ರಾಡ್ಮನ್
ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್‌ಮನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಎರಡು ತ್ರಿಶತಕಗಳನ್ನು ಗಳಿಸಿದ್ದಾರೆ. ಎರಡೂ ತ್ರಿಶತಕಗಳು ಇಂಗ್ಲೆಂಡ್ ವಿರುದ್ಧವೇ ಬಾರಿಸಿರುವುದು ಮತ್ತಷ್ಟು ವಿಶೇಷ. 1934 ರಲ್ಲಿ ಇಂಗ್ಲೆಂಡ್ ವಿರುದ್ಧ 334 ರನ್ ಮತ್ತು 1930 ರಲ್ಲಿ ಅದೇ ತಂಡದ ವಿರುದ್ಧ 304 ರನ್ ಗಳಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News