Mumbai vs Chennai:ಕಿರಣ್ ಪೋಲ್ಲಾರ್ಡ್ ಅಬ್ಬರಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತತ್ತರ

ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2021 ರ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವನ್ನು ಸಾಧಿಸಿದೆ.

Last Updated : May 2, 2021, 12:11 AM IST
  • ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2021 ರ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವನ್ನು ಸಾಧಿಸಿದೆ.
Mumbai vs Chennai:ಕಿರಣ್ ಪೋಲ್ಲಾರ್ಡ್ ಅಬ್ಬರಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತತ್ತರ  title=
Photo Courtesy: Twitter

ನವದೆಹಲಿ : ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2021 ರ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವನ್ನು ಸಾಧಿಸಿದೆ.

ಟಾಸ್ ಗೆದ್ದು ಮುಂಬೈ ಇಂಡಿಯನ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರಂಭದಲ್ಲಿ ರುತುರಾಜ್ ಗಾಯಕವಾಡ್ ಅವರ ವಿಕೆಟ್ ನ್ನು ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಜೊತೆಯಾದ ದುಫ್ಲೆಸಿಸ್ ಹಾಗೂ ಮೊಯಿನ್ ಅಲಿ ಕ್ರಮವಾಗಿ 50 ಹಾಗೂ 58 ರನ್ ಗಳನ್ನು ಗಳಿಸುವ ಮೂಲಕ ಭದ್ರ ಬುನಾದಿಯನ್ನು ಹಾಕಿದರು.

ಇದನ್ನೂ ಓದಿ: ಗ್ರಾಮೀಣ ಭಾಗಗಳಲ್ಲಿ 200 ಆಮ್ಲಜನಕ ಸಾಂದ್ರಕಗಳನ್ನು ದಾನ ಮಾಡಲಿರುವ ಹಾರ್ದಿಕ್ ಪಾಂಡ್ಯ

ಇನ್ನೊಂದೆಡೆಗೆ  ಅಬಂಟಿ ರಾಯಡು ಅಂತು ಭರ್ಜರಿ ನಾಲ್ಕು ಬೌಂಡರಿ ಹಾಗೂ ಏಳು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಕೇವಲ 27 ಎಸೆತಗಳಲ್ಲಿ 72 ರನ್ ಗಳನ್ನು ಗಳಿಸಿದರು. ರವಿಂದ್ರ ಜಡೇಜಾ 22 ಎಸೆತಗಳಲ್ಲಿ 22ಗಳನ್ನು ಗಳಿಸುವ ಮೂಲಕ  20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ  218 ರನ್ ಗಳ ಬೃಹತ್ ಮೊತ್ತವನ್ನು ಗಳಿಸಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಮುಂಬೈ ತಂಡವು ಉತ್ತಮ ಆರಂಭವನ್ನೇ ಖಂಡಿತು ಮೊದಲ ವಿಕೆಟ್ ಗೆ 71 ರನ್ ಗಳ ಜೊತೆಯಾಟವಾಡುವ ಮೂಲಕ ಡಿಕಾಕ್(38) ರೋಹಿತ್ ಶರ್ಮಾ (35) ತಂಡಕ್ಕೆ ಉತ್ತಮ ಬುನಾದಿಯನ್ನು ಹಾಕಿದರು. ಆದರೆ ಇದಾದ ನಂತರ ಸೂರ್ಯಕುಮಾರ್ ಯಾದವ್ ಮೂರು ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.ಆದರೆ ಈ ಹಂತದಲ್ಲಿ ಜೊತೆಯಾದ ಕ್ರುನಾಲ್ ಪಾಂಡ್ಯ(32) ಕಿರಣ್ ಪೋಲ್ಲಾರ್ಡ್(87) ಪಂದ್ಯದ ದಿಕ್ಕನ್ನೇ ಬದಲಿಸಿದರು. ಅದರಲ್ಲೂ ಪೋಲಾರ್ಡ್ ಎಂಟು ಸಿಕ್ಸರ್ ಗಳು ಹಾಗೂ ಆರು ಬೌಂಡರಿಗಳಿಂದ ಕೇವಲ 34 ಎಸೆತಗಳಲ್ಲಿ 87 ರನ್ ಗಳಿಸಿದರು. 

ಇದನ್ನೂ ಓದಿ: IPL 2021 : ಗೇಲ್-ಚಾಹಲ್ ಶರ್ಟ್‌ಲೆಸ್ ಫೋಟೋಶೂಟ್: ಫೋಟೋ ಶೇರ್ ಮಾಡಿದ ಪಂಜಾಬ್ ಕಿಂಗ್ಸ್! 

ಕೊನೆಯ ಓವರ್ ನಲ್ಲಿ ಎರಡು ಎಸೆತಗಳಲ್ಲಿ ಎಂಟು ರನ್ ಗಳ ಅಗತ್ಯವಿದ್ದಾಗ ಒಂದು ಸಿಕ್ಸರ್ ಹಾಗೂ ಎರಡು ರನ್ ಗಳಿಸುವ ಮೂಲಕ ಮುಂಬೈ ಗೆ ಗೆಲುವನ್ನು ತಂದುಕೊಟ್ಟರು.

Trending News